ಚಳ್ಳಕೆರೆ: ಬಿಜೆಪಿ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತಳಮಟ್ಟದಿಂದ ಬೆಳೆಯುತ್ತಾ ಬಂದಿದ್ದೇನೆ ಆದ್ದರಿಂದ ನಾನು ಈ ಬಾರಿ ನನ್ನ ಸ್ವ ಕ್ಷೇತ್ರ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷದ ಸಂಘಟನೆಯಲ್ಲಿ ಈಗಿನಿಂದಲೇ ತೊಡಗಿಕೊಂಡಿದ್ದೇನೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಎಸ್ ಟಿ ಮೋರ್ಚ ಸದಸ್ಯರಾದ ಪ್ರಭಾಕರ್ ಮ್ಯಾಸ ನಾಯಕ ಅಭಿಪ್ರಾಯ ಪಟ್ಟರು
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತ ಜ.12ರಂದು ಮೊದಲಿಗೆ ಘಟಪರ್ತಿಯಲ್ಲಿ ಶುಭೋದಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುಮಾರು ಒಂದು ತಿಂಗಳವೆಗೆ ಈ ಕಾರ್ಯಕ್ರಮ ನಡೆಯಲಿದೆ, ಎಂದರು, ನಂತರ ನಾನು ಬಿಜೆಪಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು ನನ್ನ ರಕ್ತದ ಕಣಕಣದಲ್ಲೂ ಆರ್‌ಎಸ್‌ಎಸ್ ಧ್ಯೇಯಗಳು ತುಂಬಿದೆ ಆರ್‌ಎಸ್‌ಎಸ್ ನನ್ನನ್ನು ಒಬ್ಬ ಸದೃಢ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ, ಬಿಜೆಪಿ ಪಕ್ಷವು ಗುಡಿಸಿಲಿನಲ್ಲಿ ವಾಸಿಸುವ ತನ್ನ ಪಕ್ಷದ ಕಾರ್ಯಕರ್ತನನ್ನು ಗುರುತಿಸಿ ಚುನಾವಣೆಗಳಲ್ಲಿ ಟಿಕೆಟ್ ನೀಡಿ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ರಾಜಕಾರಣಿಯನ್ನಾಗಿ ಮಾಡಿದ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಪಕ್ಷ ಮಾತ್ರ,

ಬಿಜೆಪಿ ಪಕ್ಷ ಶಿಸ್ತಿನ ಪಕ್ಷವಾಗಿದ್ದು ಟಿಕೆಟ್ ಪಡೆಯುವುದು ಸಾಮಾನ್ಯ ಮಾತಲ್ಲ ಆದರೂ ನಾನು ಸಹ ಆಕಾಂಕ್ಷಿಯಾಗಿದ್ದೇನೆ ಮೊಳಕಾಲ್ಮೂರು ಕ್ಷೇತ್ರವು ತನ್ನ ಪೂರ್ವಜರ ನೆಲವಾಗಿದ್ದು ನೆಲದ ಋಣ ತೀರಿಸಲು ಈಗ ಅವಕಾಶ ಒದಗಿ ಬಂದಿದೆ ಕೊರೋನ ವೇಳೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಪ್ರತಿ ಮನೆಗೂ ಆಹಾರ ಪದಾರ್ಥ ವಿತರಿಸಿ ಬಡಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ ಯುವಕರಿಗೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿ ಅವರ ಬಾಳಿಗೆ ಬೆಳಕಾಗಿದ್ದೇನೆ ಅಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಡಿದ್ದೇನೆ ಜನತೆಯು ಸಹ ತಾನು ಹೋದಲ್ಲೆಲ್ಲ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಪಕ್ಷ ಅವಕಾಶ ಕೊಟ್ಟರೆ ನಾನು ಸ್ಪರ್ಧಿಸಲು ಸಿದ್ಧವಿದ್ದೇನೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವ ನಿಷ್ಠಾವಂತ ಕಾರ್ಯಕರ್ತ ಎಂದು ತಿಳಿಸಿದರು.
ಮುಂದುವರಿದು ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಸ್ವಯಂ ಸೇವೆಯಿಂದ ಶುಭೋದಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಮೂಲಕ ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ ಸಾರ್ವಜನಿಕರು ಹಾಗೂ ಅಸಹಾಯಕ ವ್ಯಕ್ತಿಗಳು ಸರ್ಕಾರಿ ಕಚೇರಿಗಳಲ್ಲಿ ಲಂಚವನ್ನು ನೀಡಿ ಕೆಲಸ ಮಾಡಿಸಿಕೊಳ್ಳುವುದನ್ನು ತಪ್ಪಿಸಲು ಈ ಯೋಜನೆ ರೂಪಿಸಲಾಗಿದೆ ತಾಲೂಕಿನ ಘಟ್ಪಪರ್ತಿ ಗ್ರಾಮದಿಂದ ಈ ಯೋಜನೆಗೆ ಚಾಲನೆ ನೀಡಲಾಗುವುದು ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಸಂಪರ್ಕಿಸಿದರೆ ಯಾವುದೇ ಸರ್ಕಾರಿ ಯೋಜನೆಯ ಕೆಲಸವಾದರೂ ಅದನ್ನು ಮಾಡಿಸಿಕೊಡುವ ಪ್ರಯತ್ನ ಮಾಡಲಾಗುವುದು ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ವಿನಂತಿಸಿದರು.

ಈ ವೇಳೆ ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಎಸ್ ಸಿ ಮೋರ್ಚ ಉಪಾಧ್ಯಕ್ಷ ಮಾರುತಿ, ನಾಗೇಶ್, ಗಿರೀಶ್, ಮಾರುತಿ ಮಲ್ಲಿಕಾರ್ಜುನ, ಜಗನ್, ತಿಪ್ಪೇಸ್ವಾಮಿ, ಶಿವದತ್ತ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!