ಚಳ್ಳಕೆರೆ : ವಿದ್ಯಾರ್ಥಿಗಳು ದೈನಂದಿನ ಚುಟುವಟಿಕೆಗಳಲ್ಲಿ ತೊಡುಗುವಂತೆ ಪ್ರಾಧ್ಯಾಪಕರು ನೋಡಿಕೊಳ್ಳಬೇಕು, ಅವರ ಮಾನÀಸಿಕ ಖಿನ್ನತೆಯಿಂದ ಹೊರ ಬರಲು ಕ್ರೀಡಾ ಚಟುವಟಿಕೆ ಅತ್ಯಮೂಲ್ಯವಾದದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ರಂಗ ಮಂದಿರದಲ್ಲಿ ನಡೆದ ಸಾಂಸ್ಕೃತಿಕ -ಕ್ರೀಡೆ- ರಾಷ್ಟ್ರೀಯ ಸೇವಾ ಯೋಜನೆ- ರೆಡ್ ಕ್ರಾಸ್- ಸ್ಕೌಟ್ಸ್ ಅಂಡ್ ಗೈಡ್ಸ್ -ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿನಿತ್ಯ ಲವಲವಿಕೆಯಿಂದ ಇರಲು ಹಾಗೂ ಅವರ ಮನಸ್ಥಿತಿ ತಿಳಿಯಲು ಕ್ರಿಡೆ ವರದಾನವಾಗುತ್ತದೆ, ಒಬ್ಬ ವ್ಯಕ್ತಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುಲು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು, ನಾಯಕತ್ವದ ಗುಣ ಹೊಂದಲು ಸಾಧ್ಯ ಸಾಹಿತ್ಯ, ಕ್ರೀಡೆ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದರು.
ಇAದಿನ ರಾಜಕೀಯ ವ್ಯವಸ್ಥೆ ನಿವೂ ಮನಗಾಣಬೇಕು, ರಾಜಕೀಯ ವ್ಯವಸ್ಥೆಯಲ್ಲಿ ನಾಟಕೀಯ ವರ್ತನೆಯ ತುಂಬಾ ಇದೆ ಆದ್ದರಿಂದ ವಿದ್ಯಾರ್ಥಿಗಳು ಮನಗಾಣಬೇಕು. ನಾಯಕತ್ವದ ಗುಣ ಬೆಳೆಸಿಕೊಳ್ಳುವ ಮನೋಭಾವ ಹೊಂದಿರಬೇಕು, ನಿಮ್ಮ ಒಳ್ಳೆಯ ಗುಣಗಳು ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲಿದೆ.
ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಮೌಲ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ತಮ್ಮ ವೃತ್ತಿ ಬದುಕು ಕಟ್ಟಿಕೊಳ್ಳಲು ಉತ್ತಮ ಅಂಕ ಮುಖ್ಯವಾಗಿದೆ ಸಮಸ್ಯೆಗಳು ನಿರಂತರ, ಆದರೆ ಅವುಗಳನ್ನು ಮೆಟ್ಟಿ ನಿಲ್ಲವೇಕು, ಕಾಲೇಜ್ ಸುವರ್ಣ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಹೊಸ್ತಿಲಲ್ಲಿ ನಿಮ್ಮ ಪ್ರಗತಿ ಮುಖ್ಯವಾಗಿದೆ, ಒಂದು ಕೋಟಿ ವೆಚ್ಚದಲ್ಲಿ ಅನುದಾನ ನೀಡಿದೆ, ಆದ್ದರಿಂದ ಈಗೀರುವ ಬಿಪ್ಲೆಸ್, ಶ್ರೇಣಿಯನ್ನು ದಾಟಿ ಎಪ್ಲಸ್ ಬರುವ ವಿಶ್ವಾಸ ಹೊಂದಿರಬೇಕು ಎಂದರು.
ಉಪನ್ಯಾಸಕ ಆರ್.ವಿಶ್ವನಾಥ್, ಪ್ರತಿಯೊಬ್ಬರು ಸೇವಾ ಮನೋಭಾವ ಹೊರ ಹೊಮ್ಮಬೇಕು. ವಿದ್ಯಾರ್ಥಿದೆಸೆಯಲ್ಲಿ ಜಾಗರೂಕತೆಯ ನಿದ್ದೆ ಮಾಡಿಬೇಕು, ಜ್ಞಾನ ಅರಿವಿಗಾಗಿ ಇದ್ದರು, ದೇಶದ ಸಂಪಾದನೆ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನ ದಿನಗಳು ತುಂಬಾ ಅಮೂಲ್ಯವಾದ ದಿನಗಳು, ಸೇವ ಮನೋಭಾವ ತಿಳಿಯಲು ನಿಮ್ಮಿಂದ ಸಾಧ್ಯ, ಅವಲೋಕನ ಮಾಡಲು ಇಂದು ವ್ಯಾವಹಾರಿಕವಾಗಿ ಕಾಣುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಆರ್.ರಂಗಪ್ಪ, ಪ್ರಾದ್ಯಾಪಕರಾದ ಇಂಗ್ಲೀಷ್ ವಿಭಾದ ಮುಖ್ಯಸ್ಥರಾದ ತಿಪ್ಪೆಸ್ವಾಮಿ, ಐಕ್ಯೂಐಸಿ ಸಂಚಾಲಕ ರಘುನಾಥ್, ಡಾ.ಕೆ.ಚಿತ್ತಯ್ಯ, ಡಾ.ಪಾಪಣ್ಣ, ಈರಣ್ಣ, ಮಂಜುನಾಥ್, ಜಮುನಾ, ಡಾ.ಬಣಕಾರ್, ಎ.ತಿಪ್ಪೆಸ್ವಾಮಿ, ವರ‍್ಯಾನಾಯ್ಕ, ಬಿ.ಜಯಮ್ಮ, ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನ ಕುಮಾರ್, ಸದಸ್ಯರುಗಳಾದ ರಮೇಶ್‌ಗೌಡ ಹಾಗೂ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!