ನಾಯಕನಹಟ್ಟಿ:: ನಮ್ಮ ಪೂರ್ವಜರ ಕಾಲದಿಂದಲೂ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯವನ್ನು ನಡೆಸುತ್ತಾ ಬಂದಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.
ಪಟ್ಟಣದ ವ್ಯಾಪ್ತಿಗೆ ಬರುವ ಕಾವಲು ಬಸವೇಶ್ವರನಗರದ ಊರ ಮಾರಮ್ಮ ದೇವಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಆಚರಣೆಯಂತೆ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಗ್ರಾಮದಲ್ಲಿ ಪೂಜೆ ಕೈಕಾರಿಗಳ ನೆರವೇರಿಸಿಕೊಂಡು ಮಧ್ಯಾಹ್ನ 1:00ಗೆ ಹಿರೆಕೆರೆಗೆ ಹಿರೆಕೆರೆಯತ್ತ ಮಾರಮ್ಮ ದೇವಿಯನ್ನು ಗ್ರಾಮಸ್ಥರು ಕರೆದುಕೊಂಡು ಹೋಗಿ ಗಂಗೆ ಪೂಜೆಗೆ ನೆರವೇರಿಸಿಕೊಂಡು ಸಂಜೆ 5:00 ಗಂಟೆಗೆ ನಾಯಕನಹಟ್ಟಿಗೆ ಕರೆತರೆಲಾಯಿತು. ಅಲ್ಲಿಂದ ಗ್ರಾಮಸ್ಥರು ಪಟ್ಟಣದ ತೇರಬೀದಿಯಿಂದ ಅದ್ದೂರಿಯಾಗಿ ಶ್ರೀ ಊರ ಮಾರಮ್ಮ ದೇವಿಯನ್ನು ಕಾವಲಬಸವೇಶ್ವರ ನಗರಕ್ಕೆ ಕರೆದೊಯ್ದರು.
ಇದೇ ವೇಳೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಶ್ರೀ ಊರ ಮಾರಮ್ಮ ದೇವಿಗೆ ಭಕ್ತಿ ಪೂರ್ವ ಪೂಜೆ ಸಲ್ಲಿಸಿ ಗ್ರಾಮಸ್ಥರ ಜೊತೆ ಕಾಲ್ನಡಿಗೆಯಿಂದ ಗ್ರಾಮದತ್ತ ಹೆಜ್ಜೆ ಹಾಕಿದರು. ಊರ ಮಾರಮ್ಮ ದೇವಿಯ ಜಾತ್ರಾ ವೈಭವವನ್ನು ಕಂಡು ಪಟ್ಟಣದ ಸಾರ್ವಜನಿಕರು ಮತ್ತು ಭಕ್ತರು ಕಣ್ತುಂಬಿ ಕೊಂಡರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಯಜಮಾನ ತಿಪ್ಪೇಸ್ವಾಮಿ, ಸಣ್ಣ ಬೋರಯ್ಯ, ಉಜಿನಪ್ಪ, ಬೆಂಗಳೂರು ಪಾಲಯ್ಯ, ರೆಡಿ ಬೋರಯ್ಯ, ಸಣ್ಣ ರಾಜಯ್ಯ, ಮುಖಂಡರಾದ ಬಡಗಿ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಗುಂಡಯ್ಯ, ದಳವಾಯಿ, ಬಲ್ಲ ನಾಯಕನಹಟ್ಟಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪಿ ತಿಪ್ಪೇಸ್ವಾಮಿ, ಬಿ ಟಿ ಪ್ರಕಾಶ್ ಜಾಗನೂರಹಟ್ಟಿ, ಪಿ ತಿಪ್ಪೇಸ್ವಾಮಿ, ಧನಂಜಯ, ಸೇರಿದಂತೆ ಕಾವಲು ಬಸವೇಶ್ವರನಗರದ ಸಮಸ್ತ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು