ಚಿತ್ರದುರ್ಗ ಜ. 6 – ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಬಿಎ ವಿದ್ಯಾರ್ಥಿ ಸುನೀಲ್ ಕೆ.ಬಿ. ಇವರು ಜನವರಿ 9 ರಿಂದ 12ರವರೆಗೆ ಚೆನ್ನೆöÊನ ತಮಿಳುನಾಡು ದೈಹಿಕಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯ ಆಯೋಜಿಸಿರುವ ರಾಷ್ಟçಮಟ್ಟದ ಅಂತರ್ ವಿ.ವಿ. 800 ಮೀ. ಓಟ ಮತ್ತು 400 ಮೀ. ಮಿಶ್ರ ರಿಲೆ ಸ್ಪರ್ಧೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.
ರಾಷ್ಟçಮಟ್ಟದ ಸ್ಪರ್ಧೆಗೆ ಆಯ್ಕಾಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ಸುನೀಲ್ ಕೆ.ಬಿ. ಇವರನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಸಿ. ರಮೇಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.