ಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ 2023-24ನೇ ಸಾಲಿನ ಆಯ್ಯ-ವ್ಯಯ ಬಜೆಟ್‌ನ ಪ್ರಥಮ ಪೂರ್ವಭಾವಿ ಸಭೆಯ ನಡೆಯಿತು.
ನಂತರ ಸಭೆಯ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಸ್ಥಳೀಯ ಶಾಸಕರು ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ರವರ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ 2023-24ನೇ ಸಾಲಿನ ಆಯ್ಯವಯ್ಯ ಪೂರ್ವಭಾವಿ ಸಭೆಗೆ ಆಗಮಿಸಿದ ಸದಸ್ಯರುಗಳು, ಪಟ್ಟಣದ 16 ವಾರ್ಡುಗಳ ಸದಸ್ಯರು ತಮ್ಮ ತಮ್ಮ ವಾರ್ಡಗಳ ಅಭಿವೃದ್ದಿಗೆ ಮುಂದಾಗಬೇಕು, ಪ್ರತಿಯೊಂದು ವಾರ್ಡನ ಸದಸ್ಯರು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸವಲ್ಲಿ ಮುಂಚೂಣಿಯಲ್ಲಿರಬೇಕು. ಜ್ವಲಂತ ಸಮಸ್ಯೆಗಳೆಂದರೆ ಕುಡಿಯುವ ನೀರು ,ಬೀದಿ ದೀಪ. ಚರಂಡಿ ವ್ಯವಸ್ಥೆ, ಸೇರಿದಂತೆ 16 ವಾರ್ಡಿನ ತಮ್ಮ ತಮ್ಮ ವಾರ್ಡ್ ಗಳ ಸದಸ್ಯರು ಕಂಕಣ ಬದ್ಧರಾಗಬೇಕು ಎಂದರು.

ಇನ್ನೂ ಈ ಸಮಸ್ಯೆಗಳನ್ನ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ ಪಿ ತಿಪ್ಪೇಸ್ವಾಮಿ, ಓ ಮಹೇಶ್ವರಿ, ಬಿ ಗುರು ಶಾಂತಮ್ಮ, ಸೈಯದ್ ಅನ್ವರ್, ದುರುಗಪ್ಪ, ಪಿ ಓಬಯ್ಯದಾಸ್, ಟಿ ಮಂಜುಳಾ ಶ್ರೀಕಾಂತ್, ಸರ್ವ ಮಂಗಳ, ಡಿ ಸುನಿತಾ ಮುದಿಯಪ್ಪ, ಈರಮ್ಮ, ಜೆ ಆರ್ ರವಿಕುಮಾರ್, ಬಿ ವಿನುತ, ಎನ್ ಮಹಾಂತಣ್ಣ, ಪಾಪಮ್ಮ ತಿಪ್ಪೇಶ್, ಪಿ ಬೋಸಮ್ಮ, ಮುಖ್ಯಧಿಕಾರಿ ಟಿ. ಲೀಲಾವತಿ, ಸಾರ್ವಜನಿಕರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!