ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಕನಿಷ್ಠ ಜೀವನ ನಡೆಸುತ್ತಾ ಗ್ರಾಮಪಂಚಾಯಿಯಲ್ಲಿ ನಿವೇಶನಕ್ಕೆ ಅರ್ಜಿ ಹಾಕಿದ್ದೆವೆ ಆದರೆ ಇದುವರೆಗೆ ನಮಗೆ ನಿವೇಶನ ಭಾಗ್ಯ ದೊರಕಿಲ್ಲ ಎಂದು ನೊಂದ ಮಹಿಳೆಯರು ಪರಿ ಪರಿಯಾಗಿ ಬೇಡಿಕೊಂಡ ದೃಶ್ಯ ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಕಂಡು ಬಂದಿತು.
ಹೌದು ಪರಿಶಿಷ್ಟ ಜಾತಿ ಪರಿಶಿಷ್ಠ ಪಂಗಡದವರೆ ಹೆಚ್ಚಾಗಿರುವ ಎಸ್‌ಟಿ ಮೀಸಲು ಕ್ಷೇತ್ರ ಚಳ್ಳಕೆರೆಯಲ್ಲಿ ನಿವೇಶನ ಕೊರತೆ ಎಲ್ಲೆಡೆ ಕಂಡು ಬರುತಿದೆ.

ಅದರಂತೆ ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಹಲವು ಮಹಿಳೆಯರು ನಿವೇಶನಕ್ಕೆ ಇಂದು ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ನೋವುಗಳನ್ನು ಹಂಚಿಕೊAಡರು.
ಇನ್ನೂ ಮನೆಯಿಲ್ಲದೆ ಅಲೆಮಾರಿ ಜೀವನ ನಡೆಸುವ ನೂರಾರು ಕುಟುಂಬಗಳು ಇಂದು ಅನಾಥವಾಗಿವೆ ಆದರೆ ಇಂತಹ ಬಡತನ ರೇಖೆಗಿಂತ ಕೆಳಗಿರುವ ದೀನ ದಲಿತರ ಕುಟುಂಗಳ ಆಶ್ರಯಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಕನಿಷ್ಠ ಸೌಜನ್ಯ ತೋರುವ ಅನಿವಾರ್ಯವಿದೆ.

ಅದರಂತೆ ಗ್ರಾಮದ ನೊಂದ ಮಹಿಳೆಯೊಬ್ಬರು ಮಾಧ್ಯಮದೊಂದಿಗೆ ಮಾತನಾಡಿ, ಸ್ವಾಮಿ ನಾವು ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಮದಲ್ಲಿ ವಾಸ ಮಾಡುತ್ತಿದ್ದೆವೆ ಆದರೆ ನಮಗೆ ಸೂಕ್ತವಾದ ನಿವೇಶನ ಇಲ್ಲ, ಮನೆಯು ಇಲ್ಲ ನನಗೆ ಆಶ್ರಯವಾಗಿದ್ದ ನನ್ನ ಗಂಡ ತಿರಿಕೊಂಡ ಆದರೆ ನನ್ನ ಮಕ್ಕಳ ವ್ಯಾಸಂಗದ ಜಾವಾಬ್ದಾರಿ ಒಂದೆಡೆ ಇನ್ನೋಂದೆಡೆ ಮನೆಯಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದೆವೆ ಎಂದು ಅಳಲು ತೋಡಿಕೊಂಡರು.

ಮುಖಂಡ ಪರವತಯ್ಯ, ಗ್ರಾಮದ ನೊಂದ ಮಹಿಳೆಯರಾದ ರೇವತಿ, ನೀಲಮ್ಮ, ಲಕ್ಷಿö್ಮÃ, ರೂಪ, ಶಿವಲಕ್ಷಿö್ಮÃ, ಸೂಜತ, ಶಾರದ, ಸುಮಂಗಳ, ಕರಿಯಮ್ಮ, ಜ್ಯೋತಿ, ನಾಗಮ್ಮ, ವೆಂಕಮ್ಮ ಇತರರು ಅರ್ಜಿ ಸಲ್ಲಿಸಿದರು.
ಬಾಕ್ಸ್ ಮಾಡಿ :
ಮನವಿ ಸ್ವೀಕರಿಸಿದ ಗ್ರೇಡ್2 ತಹಶೀಲ್ದಾರ್ ಸಂಧ್ಯಾ, ನಿಮ್ಮ ಮನವಿಯನ್ನು ಯಥವತ್ತಾಗಿ ಜಿಲ್ಲಾಧಿಕಾರಿಗಳಿಗೆ ರವಾನಿಸಿ ನಿಮ್ಮ ಬೇಡಿಕೆಗೆ ಅತೀ ಶೀಘ್ರದಲ್ಲಿ ನ್ಯಾಯ ಕೊಡಿಸಲಾಗುವುದು, ನಿಮ್ಮ ಮಕ್ಕಳ ವ್ಯಾಸಂಗದ ಬಗ್ಗೆ ಗಮನಹರಿಸಿ, ನಿವೇಶನ ಹಾಗೂ ವಸತಿಗಾಗಿ ಸರಕಾರಕ್ಕೆ ಪತ್ರ ರವಾನಿಸಿ ನಿಮ್ಮ ಬೇಡಿಕೆಗೆ ನ್ಯಾಯ ದೊರಕಿಸಲಾಗುವುದು ಎಂದರು.

Namma Challakere Local News
error: Content is protected !!