ನಾಯಕನಹಟ್ಟಿ:: ಜಿಲ್ಲೆಯ ಎಲ್ಲಾ ಗ್ರಾಮದ ಜಲಸಂಜೀವಿನಿ ಯೋಜನೆ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ಬಹು ಮುಖ್ಯವಾಗಿದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಹೊನ್ನಯ್ಯ ಹೇಳಿದ್ದಾರೆ.
ಅವರು ಮಂಗಳವಾರ ಹೋಬಳಿಯ ಅಬ್ಬೇನಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಹಾತ್ಮ ಗಾಂಧಿ ನೆರೇಗಾ ಯೋಜನೆ ಅಡಿ ಜಲ ಸಂಜೀವಿನಿ ಕಾರ್ಯಕ್ರಮವನ್ನು ಸಸಿಗೆ ನೀರಿರುವುದರ ಮುಖಾಂತರ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ರೈತರ ಸುಸ್ಥಿರ ಬದುಕಿಗೆ ಪೂರಕವಾಗಿ ಜಲಸಂಜೀವಿನಿ ಯೋಜನೆ ರೈತರು ಈ ಯೋಜನೆಯನ್ನು ಮೂರರಿಂದ ಐದು ವರ್ಷದವರೆಗೆ ಯೋಜನೆ ತಯಾರಿಸಲ್ಪಡುತ್ತದೆ ಸದ್ಬಳಕೆ ಮಾಡಿಕೊಳ್ಳಬೇಕು ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದರೆ ಚಳ್ಳಕೆರೆ ತಾಲೂಕು, ನಾಯಕನಹಟ್ಟಿ ಹೋಬಳಿ ವ್ಯಾಪ್ತಿ ಪ್ರದೇಶವಾಗಿದೆ ಈ ಭಾಗದ ಜನರಿಗೆ ಈ ಬಾರಿ ಹೆಚ್ಚಿನ ಪ್ರಕೃತಿಯ ಅಗತ್ಯವಾಗಿ ಹೆಚ್ಚು ಮಳೆಯಾಗಿದೆ ಮಳೆ ನೀರು ಹೇಗೆ ತಮ್ಮ ತಮ್ಮ ಜಮೀನುಗಳಲ್ಲಿ ಸಂರಕ್ಷಿಸಬೇಕು ಉಪಯೋಗಿಸಬೇಕು ಎಂಬುವುದು ಅತಿ ಮುಖ್ಯವಾದ ಅಂಶವಾಗಿದೆ ಜಲಸಂಜೀವಿನಿ ಯೋಜನೆ ಕ್ರೀಯಾ ಯೋಜನೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಆದ್ದರಿಂದ ಈ ಭಾಗದ ರೈತರು ಈ ಯೋಜನೆಯ ಸೌಲಭ್ಯ ಪಡೆದುಕೊಂಡು ಈ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಂಕಣಭದ್ಧರಾಗಬೇಕು ಎಂದರು
ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರ್ ಸ್ವಾಮಿ ಮಾತನಾಡಿ ಜನಸಂಜೀವಿನಿ ಯೋಜನೆ ನಮ್ಮ ಭಾಗದ ರೈತರಿಗೆ ಅನುಕೂಲವಾಗುವ ಯೋಜನೆ ರೈತರು ಜಮೀನಿನಲ್ಲಿ ನೀರನ್ನು ಸಂರಕ್ಷಣೆ ಮಾಡಿದಲ್ಲಿ ಚಪ್ಪಾದ ವಾತಾವರಣ ಬೆಳೆಗಳಿಗೆ ಅನುಕೂಲವಾಗುತ್ತದೆ ಮತ್ತು ಬೋರ್ವೆಲ್ ಗಳಲ್ಲಿ ಹೆಚ್ಚಾಗಿ ನೀರು ಇರುತ್ತದೆ ಆದ್ದರಿಂದ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯ ರೈತರು ತಮ್ಮ ತಮ್ಮ ಜಮೀನುಗಳಿಗೆ ತಾಲೂಕು ಪಂಚಾಯಿತಿ ಇಂಜಿನಿಯರ್ ಕಾಯಕ ಮಿತ್ರ ಅಧಿಕಾರಿಗಳು ಬಂದ ವೇಳೆ ತಮ್ಮ ಜಮೀನಿನಲ್ಲಿ ಜಲ ಸಂಜೀವಿನಿ ಯೋಜನೆಯ ರೈತರು ಸಮೋದ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಶ್ರೀ ಬೈಲಯ್ಯ ಮಾತನಾಡಿ ಸಂಪೂರ್ಣ ಮೂಲ ನಕ್ಷೆಯನ್ನು ತಯಾರಿಸಿ ಗ್ರಾಮದ ಅರೈತರಿಗೆ ಮತ್ತು ಕಾಯಕ ಮಿತ್ರ ಕಾರ್ಯಕರ್ತರಿಗೆ ಬಿಎಫ್ ಟಿ ಕಾರ್ಯಕರ್ತರಿಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಧಾ ರೇವಣ್ಣ, ಸದಸ್ಯರಾದ ಸುಮಿತ್ರಮ್ಮ, ಶೇಖರ್ ಗೌಡ, ಮಾರಕ್ಕ ,ಪಟ್ಲಲುಬೋರೆಯ್ಯ, ಸಣ್ಣ ಪಾಲಯ್ಯ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ್, ರಮೇಶ್, ಊರಿನ ಯುವ ಮುಖಂಡ ಎಪಿ ರೇವಣ್ಣ, ಗ್ರಾಮ ಪಂಚಾಯತಿ ಒಕ್ಕೂಟದ ತಾಲೂಕು ಅಧ್ಯಕ್ಷ ಸಣ್ಣಪಾಲಯ್ಯ, ಗ್ರಾಮಸ್ಥರಾದ ಜಯಣ್ಣ ಗುಂಡಪ್ಪ ದುರುಗೇಶ್, ಸಣ್ಣ ಓಬಯ್ಯ, ನಾಗೇಶ್, ಯೂ .ತಿಪ್ಪೇಸ್ವಾಮಿ, ಹಾಗೂ ಪಿಡಿಒ ಮೋಹನ್ ದಾಸ್, ಕಾಯಕ ಮಿತ್ರ ಕಾರ್ಯಕರ್ತರು ಹಾಗೂ ಬಿಎಫ್ ಟಿ ಕಾರ್ಯಕರ್ತರು ಉಪಸ್ಥಿತರಿದ್ದರು.