ಚಳ್ಳಕೆರೆ : ತಮ್ಮ ಮಕ್ಕಳು ವಿಕಲಚೇತನರು ಎಂದು ಮನೆಯಲ್ಲಿಯೇ ಉಳಿಸಿಕೊಳ್ಳದೆ ಅವರ ನ್ಯೂನ್ಯತೆ ಸರಿಪಡಿಸಿ ಸಾಮಾನ್ಯ ಮಕ್ಕಳಂತೆ ಸ್ವಾಲಂಬಗಳಾಗಿ ಬೆಳೆಯಲು ಪೋಷಕರು ಸಹಕರಿಸಿಸಬೇಕು ಎಂದು ಜಿಲ್ಲಾ ಉಪಯೋಜನೆ ಸಮನ್ವಯಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಿಕಲಚೇತರನ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶೇಷ ಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅನುವಂಶಿಯತೆ ಹಾಗೂ ಸಂಬAದಿಕರಲ್ಲಿ ವಿವಾಹದಿಂದಾಗಿ ಹುಟ್ಟುವ ಮಕ್ಕಳು ವಿಕಲಚೇತನರಾಗಿ ಹುಟ್ಟುತ್ತಿದ್ದು ಸಂಬAಧಿರರಲ್ಲಿ ಮದುವೆಯಾಗುವುದನ್ನು ತಪ್ಪಿಸುವಂತೆ, ಇಂತಹ ವಿಕಲಚೇತನ ಮಕ್ಕಳಿಗಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಶಾಲೆಯ ತಂತ್ರಾAಶದಲ್ಲಿ ಆಧಾರ್ ಜೋಡಣೆuಟಿಜeಜಿiಟಿeಜಯೊಂದಿಗೆ ನೊಂದಣೆಯಾಗಿದೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳ ಬೇಕು. ನೊಂದಾಯಿತ ವಿದ್ಯಾರ್ಥಿಗಳಿಗೆ ಮಾತ್ರ ಸರಕಾರ ಸೌಲಭ್ಯ ನೀಡುತ್ತಿದೆ ಜಿಲ್ಲೆಯಲ್ಲಿ 2806 ಮಕ್ಕಳು ವಿಕಲಚೇತನರಿದ್ದು.
ಅತಿ ಹೆಚ್ಚು ನ್ಯೂತನತೆ ಇರುವ ಮಕ್ಕಳು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ ಅಂತಹ ಮಕ್ಕಳ ಮನೆಗೆ ಹೋಗಿ ಶಿಕ್ಷಣ ಕೊಡಲಾಗುವುದು. ಅಂಗ ನ್ಯೂತನತೆ ಆಧಾರದ ಮೇಲೆ ಅಗತ್ಯ ಸಾಮಾಗ್ರಿಗಳನ್ನು ಕೊಡಲಾಗುವುದು ಎಂದು ತಿಳಿಸಿದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ದೈಹಿಕ ವಿಕಲಚೇತನರಲ್ಲಿ ದೇಹಕ್ಕೆ ಮಾತ್ರ ಶಕ್ರಿ ಇರುವುದಿಲ್ಲ, ಭೌದ್ಧಿಕ ಶಕ್ತಿ ಹೆಚ್ಚು ಇರುತ್ತದೆ. ದೈಹಿಕ ವಿಕಲಚೇತನ ಮಕ್ಕಳನ್ನು ಕಲಿಕೆಯಲ್ಲಿ ಮುನ್ನೋಟಕ್ಕೆ ತರಬೇಕು. ಅಂಗವಿಕಲತೆ ದೇಹಕ್ಕೆ ಮಾತ್ರ ಅನೇಕ ವಿಕಲಚೇತರು ರಾಜಕೀಯ, ಕ್ರೀಡೆ, ವಿಜ್ಞಾನ, ಶಿಕ್ಷಣ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿಕಲಚೇತನ ಮಕ್ಕಳು ಜನಿಸಿರುವುದು ನಾವು ಮಾಡಿದ ಪಾಪಕ್ಕೆ, ಶಾಪಕ್ಕೆ ಎಂದು ಕೊಳ್ಳದೆ, ಅವರು ಜನಿಸಿರುವುದು ನಮ್ಮ ವರ ಎಂದು ವಿಕಲಚೇತನರನ್ನು ಪೋಷಣೆ ಮಾಡಬೇಕು ಎಂದು ಹೇಳಿದರು.
ಕೀಲು ಮೂಳೆ ತಜ್ಞ ಡಾ.ಮಂಜಪ್ಪ ಮಾತನಾಡಿ ಮಗುವಿನ ಎಳೆಯ ಕಾಲುಗಳು ಇದ್ದಾತೆ ನ್ಯೂನ್ಯೆತೆಗಳನ್ನು ಸರಿಪಡಿಸಹುದು ಪೋಷಕರು ಮಕ್ಕಳ ಹಾರೈಕೆ ಮಾಡಲು ಮುಂದಾಗಬೇಕು, ಗರ್ಭಾವಸೆಯಲ್ಲಿ ಸರಿಯಾದ ಪೌಷ್ಠಿಕ ಆಹಾರ, ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಮಂಜಣ್ಣ ಮಾತನಾಡಿದರು. ಮುಖ್ಯ ಶಿಕ್ಷಕಿ ಪದ್ಮಾವತಿ, ಕಣ್ಣಿನ ತಜ್ಞೆ ಡಾ. ಝಾನ್ಸಿ ರೇಷ್ಮಾ, ಕಿವಿಮೂಗು ಗಂಟಲು ತಜ್ಞೆ ಡಾ.ಜಯಲಕ್ಷಿö್ಮ, ಶಿಕ್ಷಕರಿ ಚಾರುಮತಿ ಹಾಗು ವಿಕಲಚೇತನ ಮಕ್ಕಳು ಮತ್ತು ಪೋಷಕರು ಇತರರಿದ್ದರು.

Namma Challakere Local News
error: Content is protected !!