ಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸುಸುತ್ರವಾಗಿ ನಡೆಯಬೇಕಾದರೆ ಅದರ ಪೂರ್ವಭಾವಿಯಾಗಿ ಮತದಾರರ ಪಟ್ಟಿ ಸಂಪೂರ್ಣವಾಗಿ ಪರಿಪಕ್ವವಾಗಿರಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಗಡಿ ಗ್ರಾಮಗಳ ವ್ಯಾಪ್ತಿಯ ತಹಶೀಲ್ದಾರ್‌ಗಳ ಸಭೆಯಲ್ಲಿ ಮಾತನಾಡಿದರು. ಆಂದ್ರ ಪ್ರದೇಶದ ರಾಯದುರ್ಗ, ಮಡಕಶಿರ, ಸೇರಿದಂತೆ ಮೊಳಕಾಲ್ಮೂರÀÄ, ಹಿರಿಯೂರು, ಪಿ.ಮಹೇದೇವಪುರ, ದೊಡ್ಡಚೆಲ್ಲೂರು ಆಂದ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ನಿಖರವಾದ ದಾಖಲೆಗಳನ್ನು ಪಡೆದು ಎರಡು ಕಡೆ ಮತದಾರರ ಪಟ್ಟಿಯಲ್ಲಿರುವವರನ್ನು ಗುರುತಿಸಿ ಒಂದೇ ಕಡೆ ಇರುವಂತೆ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ಮತದಾರರ ಪಟ್ಟಿಯನ್ನು ಸಿದ್ದತೆಪಡಿಸಬೇಕು, ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಹೆಸರುಗಳು ತಪ್ಪಾಗದಂತೆ ಮತದಾರರ ಪಟ್ಟಿಯನ್ನು ಸಿದ್ದತೆ ಸರಿಪಡಿಸಬೇಕು ಎಂದು ಹೇಳಿದರು.
ಈ ವೇಳೆ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ರಾಯದುರ್ಗ ತಹಶಿಲ್ದಾರ್ ಮಾರುತಿ, ಕಲ್ಯಾಣದುರ್ಗ ತಹಶಿಲ್ದಾರ್ ಶಂಕರಯ್ಯ, ಮೊಳಕಾಲ್ಮೂರು ತಹಶಿಲ್ದಾರ್ ಸುರೇಶ್, ಶೇಟ್ಟೂರು ತಹಶಿಲ್ದಾರ್ ಮಹೇಶ್ವರರೆಡ್ಡಿ, ಹಿರಿಯೂರು ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ್, ಮಡಕಶಿರಾ ಚುನಾವಣೆ ಶಾಖೆಯ ರಾಮಕೃಷ್ಣಾ, ಹಾಗೂ ಗಡಿ ಭಾಗದ ಗ್ರಾಮಗಳ ಮತಗಟ್ಟೆ ಅಧಿಕಾರಿಗಳು, ಚುನಾವಣೆ ಶಾಖೆಯ ಶಿರಸ್ತೆದಾರ್ ಶಕುಂತಲಾ ಉಪಸ್ಥಿತರಿದ್ದರು