ಚಳ್ಳಕೆರೆ : ಈಡೀ ವಿಶ್ವಕ್ಕೆ ವಿಶ್ವಮಾನವರಾದ ರಾಷ್ಟçಕವಿ ಕುವೆಂಪುರವರ ನೆನಪು ಅಮರ, ಅವರು ಬರೆದ ಹಲವು ಲೇಖನಗಳು ಇಂದು ಜನಮಾಸದಲ್ಲಿ ಸಾಕ್ಷಿಕರಿಸುತ್ತವೆ ಆದ್ದರಿಂದ ಅವರ ದಿನಾಚರಣೆ ಅರ್ಥಗರ್ಭಿತವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಅಡಳಿತ ವತಿಯಿಂದ ವಿಶ್ವಮಾನವ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಾಡು ಮೆಚ್ಚುವಂತ, ರಾಷ್ಟçಕವಿ ಕುವೆಂಪುರವರ ದಿನ ಪುಣ್ಯ ದಿನವಾಗಬೇಕು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಅರ್ಥಗರ್ಭಿತವಾಗಿ ಆಚರಿಸಲಾಗುವುದು ಎಂದರು.
ಇನ್ನೂ ಮೈತ್ರಿ ದ್ಯಾಮಣ್ಣ ಮಾತನಾಡಿ, ಸಮಕಾಲಿನರಾದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪುರವರು ಕೂಡ ಸಾಹಿತ್ಯದ ಚಿಲುಮೆ ಮೂಲಕ ಸಮಾಜದ ಒಳಿತಿಗೆ ಶ್ರಮಿಸಿದ ದೀಮಂತ ವ್ಯಕ್ತಿ ಅವರ ಆಚರಣೆ ತಾಲೂಕಿನ ಪ್ರತಿಯೊಬ್ಬರಲ್ಲಿ ಹಾಸುಕೊಕ್ಕಾಗಬೇಕು ನಾಲ್ಕು ಜನ ಮಹಾತ್ಮರ ಭಾವಚಿತ್ರಗಳ ಮೂಲಕ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಸರಸ್ವತಿ, ಕರ‍್ಲಕುಂಟೆ ತಿಪ್ಪೆಸ್ವಾಮಿ, ಪ್ರಸನ್ನ ಕುಮಾರ, ಉಪನ್ಯಾಕರುಗಳು ಸಲಹೆ ನೀಡಿದರು,.
ಇನ್ನೂ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಮಂಜುನಾಥ್, ಮ್ಯಾನೇಜರ್ ದಯಾನಂದ, ಪಶು ಇಲಾಖೆ ಅಧಿಕಾರಿ ರೇವಣ್ಣ, ರೇಷ್ಮೆ ಇಲಾಖೆ ಅಧಿಕಾರಿ ಕೆಂಚಾಜಿರಾವೋ, ಬಿಸಿಎಂ ಅಧಿಕಾರಿ ದಿವಾಕರ್, ತಾಪಂ.ಸಿಬ್ಬAದಿ ಮುಖಂಡ ಮಂಜುನಾಥ್ ಚಾರ್ ಪ್ರಸನ್ನ, ವಿಶ್ವಕರ್ಮಸಮಾಜದ ವೆಂಕಟೇಶ, ಸರಸ್ವತಿ, ಇತರರು ಇದ್ದರು.

About The Author

Namma Challakere Local News
error: Content is protected !!