ಚಳ್ಳಕೆರೆ : ತಾಲೂಕಿನ ತಳಕು ಹೋಬಳಿಯ ವಲಸೆ ಗ್ರಾಮದಲ್ಲಿ ಇಂದು ಶ್ರೀ ವೀರಭದ್ರಸ್ವಾಮಿ ಕಾರ್ತಿಕೋತ್ಸವ ಹಾಗೂ ನೂತನ ರಥೋತ್ಸವ ಅದ್ದೂರಿಯಾಗಿ ಸಾವರಾರು ಭಕ್ತಾಧಿಗಳ ಸಮ್ಮುಖದಲ್ಲಿ ಜರುಗಿತು.
ನೂತನ ರಥೋತ್ಸವಕ್ಕೆ ಗ್ರಾಮದ ಹಿರಿಯರು ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು,
ಇನ್ನೂ ವಿವಿಧ ಬಣ್ಣ ಬಣ್ಣದ ಬಾವುಟಗಳಿಂದ ಅಲಕೃತಗೊಂಡ ನೂತನ ತೇರಿನ ವೈಭೊಗ ನೋಡಲು ಸುತ್ತಲಿನ ಗ್ರಾಮಗಳ ಭಕ್ತಾಧಿಗಳು ಸಾಕ್ಷಿಯಾದರು,
ನೂತನ ರಥೋತ್ಸವಕ್ಕೆ ಭಕ್ತಿಗಳು ಮಲ್ಲಿಗೆ ಹೂವಿನ ಹಾರ, ಸೇಬಿನ ಹಾರ ಈಗೇ ವಿವಿಧ ಪರಮಳ ಬೀಸುವ ಹೂವುಗಳಿಂದ ಅಲಕೃತಗೊಳಿಸಿದ್ದರು.
ರಥೋತ್ಸವದ ಮಣಿ (ಹಗ್ಗ) ಹಿಡಿದ ಭಕ್ತರು ಉಗೇ ಉಗೇ ವೀರಭದ್ರ ಎನ್ನುತಾ ರಥವನ್ನು ಮುಂದೆ ಎಳೆದರು.
ಇನ್ನೂ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು, ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು,
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿದ ಅವರು, ಭಾರತದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿರುವ ಎಲ್ಲ ಹಬ್ಬಗಳೂ ಸಾಮಾನ್ಯವಾಗಿ ಆಚರಣೆಯಲ್ಲಿವೆ. ಅಲ್ಲದೆ ಹಲವು ಮತ ಪಂಥಗಳ ಜನರು ಶತಶತಮಾನಗಳಿಂದ ಇಲ್ಲಿ ನೆಲೆಸಿರುವ ಕಾರಣ ಅವರ ಇತಂಹ ಹಬ್ಬ ಹರಿದಿನಗಳು ಆಚರಣೆಯಲ್ಲಿವೆ. ಚಳ್ಳಕೆರೆ ತಾಲ್ಲೂಕಿನ ಈ ಭಾಗಗಳಲ್ಲಿ ಹಬ್ಬಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಪ್ರತಿ ಗ್ರಾಮಗಳಲ್ಲೂ ಈ ಸಂದರ್ಭದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮದ ನಿಮಿತ್ತ ರಥೋತ್ಸವ, ದೀಪೋತ್ಸವ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತದೆ. ಇಂದು ಈ ವಲಸೆ ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ಕಾರ್ತಿಕೋತ್ಸವದ ಹಿನ್ನೆಲೆ ನೂತನ ರಥೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಹಬ್ಬಗಳು ಬಂತೆAದರೆ ಗ್ರಾಮದ ಪ್ರತಿಯೊಬ್ಬ ಸಮುದಾಯವೂ ಒಗ್ಗಟ್ಟಾಗಿ ಅದ್ದೂರಿಯಾಗಿ ಆ ಸಡಗರ ಸಂಭ್ರಮದಿAದ ಆಚರಣೆ ಮಾಡುತ್ತಾರೆ. ಇಂತಹ ಹಬ್ಬಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಪುಣ್ಯ ಎಂದು ಹೇಳಿದರು.
ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಮಾತನಾಡಿದರು,
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾದೇವಿ ತಿಮ್ಮಾರೆಡ್ಡಿ, ಸದಸ್ಯರ ಲೋಕೇಶ್, ರುದ್ರೇಶ್, ಅಜ್ಜಯ್ಯ, ತಿಪ್ಪೇಸ್ವಾಮಿ, ಲಕ್ಷ್ಮಯ್ಯ, ಅಶ್ವತ ನಾಯಕ್, ಅಶ್ವತ್ ರೆಡ್ಡಿ, ಹೊನ್ನೂರ್‌ಗೋವಿಂದಪ್ಪ, ಶಂಕರ್‌ನಾಯ್ಕ, ವಿಜಯ್ ಕುಮಾರ್, ಕರಿಯಣ್ಣ, ಜಯಣ್ಣ, ರುದ್ರಪ್ಪ, ಮಹಾಂತೇಶ್ ಮುನಿಯಪ್ಪ, ಲಕ್ಷಣ್‌ರೆಡ್ಡಿ, ಯುವ ಪತ್ರಕರ್ತೆ ಕಲ್ಪನ, ಹಾಗೂ ಭಕ್ತರು ಇದ್ದರು.