ಚಳ್ಳಕೆರೆ: ಅಧಿಕಾರಿಗಳು ಸಾರ್ವಜನಿಕರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸುವುದು, ಸುಖಾ ಸುಮ್ಮನೆ ಕಾರಣವಿಲ್ಲದೆ ಕಡತಗಳನ್ನು ವಿಲೆ ಮಾಡದೆ ಇರುವುದು ಪ್ರಕರಣಗಳು ಕಂಡು ಬಂದರೆ ಲೊಕಾಯುಕ್ತ ಇಲಾಕೆ ತಿಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲೋಕಾಯುಕ್ತ ಪಿಐ ಬಿಕೆ.ಲತಾ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಪೋಲಿಸ್ ಇಲಾಖೆಯಿಂದ ಸಾರ್ವಜನಿಕರಿಂದ ಕುಂದು ಕೊರತೆ ಸಭೆಯಲ್ಲಿ ದೂರು ಸ್ವೀಕರಿಸಿ ಮಾತನಾಡಿದರು. ಸಾರ್ವಜನಿಕನ್ನು ಪದೇ-ಪದೇ ಅಲೆದಾಡಿಸದೇ ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು. ಅಧಿಕಾರಿಗಳು ಕೆಲಸ ಕಾರ್ಯಗಳು ಮಾಡಿಕೊಡಲು ಹಣಕ್ಕೆ ಭೇಡಿಕೆ ಇಟ್ಟರೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಹೇಳಿದರು.
ಸಾರ್ವಜನಿಕರು ಸರಕಾರಿ ಸೌಲಭ್ಯಗಳನ್ನು ಭೂದಾಖಲೆ ಸೇರಿದಂತೆ ಇತರೆ ಸೌಲತ್ತುಗಳನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಅಲೆದಾಡಿಸುವುದು ವಿಳಂಬದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಬೇಕು ಆಗ ಮಾತ್ರ ಅಧಿಕಾರಿಳು ಎಚ್ಚೆತ್ತುಕೊಳ್ಳುತ್ತಾರೆ,
ಅಧಿಕಾರಿಗಳು ಕೆಲಸ ಮಾಡಲು ನಿರ್ಲಕ್ಷö್ಯ ತೋರಿದರೆ. ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿಬೇಕು. ದೂರು ನೀಡಿಲು ಯಾರು ಎದರಬಾರದು ಎಂದು ಹೇಳಿದರು.
ಈ ವೇಳೆ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರುಗಳು ಸಲ್ಲಿಸಿದರು.