ಚಳ್ಳಕೆರೆ : ಬಿಡುವಿಲ್ಲದ ಕ್ಷೇತ್ರ ಪರಿರ್ಯಾಟನೆ ಮಾಡುತ್ತಿರುವ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪ್ರತಿ ನಿತ್ಯವೂ ಜನರ ಒಡನಾಡಿಯಾಗಿ ಕೆಲಸ ಮಾಡುವ ಮೂಲಕ ಜನರ ಮನಸಲ್ಲಿ ಮನೆ ಮಾಡಿದ್ದಾರೆ.
ಕಳೆದ ಹತ್ತು ವರ್ಷಗಳ ಸಾಧನೆಯ ಶಿಖರ ಏರುವ ಮೂಲಕ ಈಡೀ ಕ್ಷೇತ್ರದ ಸುತ್ತಲೂ ಸುತ್ತಾಡುವ ಶಾಸಕರು ವಿವಿಧ ಸರಕಾರಿ ಕಾರ್ಯಗಳ ಜೊತೆಗೆ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕರ ಸೇವಕನಾಗಿ ತನ್ನ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ.
ಇನ್ನೂ ರಾಜಕೀಯ ಕಣ ರಂಗೇರುತ್ತಿರುವುದು ಒಂದೆಡೆಯಾದರೆ ಸ್ಥಳೀಯ ವಿರೋಧ ಪಕ್ಷದ ಟೀಕೆಗಳಿಗೆ ಕಿವಿಗೊಡದೆ ತನ್ನ ಕಾಯಕದಲ್ಲಿ ತನ್ನಿಲಿನಾಗಿರುವ ಶಾಸಕರು ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕರ ಮಾತಾಗಿದೆ.
ಅದರಂತೆ ಇಂದು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬೊಸಯ್ಯ ಮಗಳ ಮದುವೆ ಕಾರ್ಯಕ್ರಮ, ನಗರದ ನಿರ್ಮಲ ಕಾನ್ವೆನ್ಷನ್ ಹಾಲ್‌ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮ, ಶ್ರೀ ರಾಮ ಮಂದಿರದಲ್ಲಿ ನಡೆದ ಮದುವೆ ಕಾರ್ಯಕ್ರಮ, ಚಿತ್ರದುರ್ಗ ನಗರದ ಕೆ.ಇ.ಬಿ. ಸಮುದಾಯ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರೊಂದಿಗೆ ಬೆರೆತು ವಧು ವರರನ್ನು ಆರ್ಶಿವದಿಸಿದರು, ನಂತರ ಚೌಳೂರು ಗ್ರಾಮದ ಶ್ರೀ ವೀರಭದ್ರಸ್ವಾಮಿ ರಥೋತ್ಸವಕ್ಕೆ ಬೇಟಿ ನೀಡಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಕೆಎನ್.ರಾಜಣ್ಣ ಮುಖಂಡರಾದ ರುದ್ರಮುನಿಯಪ್ಪ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕ ರೂಪ ಸ್ಥಿತರಿದ್ದರು.

About The Author

Namma Challakere Local News
error: Content is protected !!