ಚಳ್ಳಕೆರೆ : ಹೆಣ್ಣು ಮಕ್ಕಳು ಶಿಕ್ಷಣದ ರಾಜಕೀಯ ಆಯಾಮಗಳು ಎಂಬ ವಿಷಯದ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗದ ರಾಜ್ಯಶಾಸ್ತ್ರ ವಿಷಯದಲ್ಲಿ ಡಾ. ಕೆ ಬಾಬು ರಾಜೇಂದ್ರ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ ರಾಧಮ್ಮ ಪಿ ಇವರು ಮಂಡಿಸಿದ ಮಹಾ ಪ್ರಬಂಧಕ್ಕೆ ಡಿಸೆಂಬರ್ 8 ರಂದು ಹಂಪಿಯಲ್ಲಿ ನಡೆದ 31ನೇ ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲರಿಂದ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ರಾಧಮ್ಮ ಪಿ ಇವರಿಗೆ ಈ ಪ್ರತಿಷ್ಠಿತ ಪಿಎಚ್‌ಡಿ.ಪದವಿ ಲಭಿಸಿರುವುದಕ್ಕೆ ತಂದೆ ತಾಯಿಯವರಾದ ಹವಳೇನಹಳ್ಳಿ ಗ್ರಾಮದ ಶ್ರೀಮತಿ ಬಸಮ್ಮ ಶ್ರೀ ಪೂಜಾರಿ ಪಾಪಯ್ಯ ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳಾದ ಶ್ರೀಮತಿ ವೈ ಬಿ ದಿವ್ಯ ಸರಸ್ವತಿ, ಮತ್ತು ಶ್ರೀ ಎಸ್ ಸಂದೀಪ್, ಶ್ರೀಮತಿ ಹೇಮಾವತಿ, ಕುವೆಂಪು ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ ಜಿ ದಾಸಯ್ಯ, ಹಾಗೂ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಅಭಿನಂದಗಳನ್ನು ಸಲ್ಲಿಸಿದ್ದಾರೆ

Namma Challakere Local News
error: Content is protected !!