ಚಳ್ಳಕೆರೆ : ಹೋಬಳಿಯ ಮತ್ಸಮುದ್ರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರ ಕಡೇ ಕಾರ್ತಿಕೋತ್ಸವ, ರಥೋತ್ಸವ ಹಾಗೂ ಮನೋರಂಜನೆಯ ಉಟ್ಲಕಂಬ ಏರುವ ಉತ್ಸವ ಶನಿವಾರ ಬೆಳಗಿನಜಾವ ದಿಂದ ಭಾನುವಾರ ಸಂಜೆವರೆಗೆ ವಿಜೃಂಭಣೆಯಿAದ ಜರುಗಿದವು.
ಶ್ರೀ ದೇಗುಲದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಮೂಲಕ ಭಕ್ತರು ದೇವರಿಗೆ ಹಣ್ಣುಕಾಯಿ ಸಮರ್ಪಿಸಿದರು. ಬಳಿಕ ಬೆೆಳಗಿಜಾವ ರಥೋತ್ಸವದ ವೇಳೆ ಅಪಾರ ಸಂಖ್ಯೆಯ ಭಕ್ತರು ಭಾಗಿಯಾಗಿ ರಥೋತ್ಸವದಲ್ಲಿ ತೇರಿಗೆ ಸೂರುಬೆಲ್ಲ ಸೂರುಮೆಣಸ್ಸು ಎರಚುವ ಮೂಲಕ ಮೂಲಕ ಭಕ್ತಿ ಸಮರ್ಪಿಸಿದರು.
ಇನ್ನೂ ಪ್ರಖ್ಯಾತ ಮತ್ಸಮುದ್ರ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಮುಕ್ತಿ ಬಾವುಟವನ್ನು ಸು.3ಲಕ್ಷದ 15 ಸಾವಿರೂಪಾಯಿಗೆ ಪಡೆದ ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಸಮರ್ಥ್ರಾಯ್ ದೇವರ ಕೃಪೆಗೆ ಪಾತ್ರರಾದರು. ಜೊತೆಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಕೂಡ ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಮುಖಂಡ ಕೆಟಿ.ಕುಮಾರಸ್ವಾಮಿ, ಜೆಡಿಎಸ್.ಮುಖಂಡ ಎಂ.ರವೀಶ್ ಕುಮಾರ್, ಪಿಟಿ.ತಿಪ್ಪೆಸ್ವಾಮಿ, ಇತರರು ಪಾಲ್ಗೊಂಡಿದ್ದರು.
ಇನ್ನೂ ಕಾಡುಗೊಲ್ಲರು ಮತ್ತು ಮ್ಯಾಸ ಬೇಡರ ಯುವಕರ ಗುಂಪು (ಆರರಿಂದ ಒಂಭತ್ತು ಮಂದಿ) ಉಟ್ಲಕಂಬ ಪೂಜಿಸಿ ಹತ್ತುವ ಮೂಲಕ ಕಂಬದ ತುದಿಯಲ್ಲಿ ಕಟ್ಟಿರುವ ನಾಲ್ಕು ತೆಂಗಿನ ಕಾಯಿ ಮುಟ್ಟಿ ವಿಜಯೋತ್ಸವ ಆಚರಿಸಿದರು.
ಉಟ್ಲಕಂಬದ ವಿಶೇಷವೆಂದರೆ : ಉಟ್ಲಕಂಬ ಸುಮಾರು 25 ಅಡಿ ಎತ್ತರವಿದ್ದು, ಕಂಬದ ಸುತ್ತಲೂ ಬುಡದಲ್ಲಿ ಜೇಡಿಮಣ್ಣು ಮಿಶ್ರಿತ ಕೆಸರು ಪಾತಿಮಾಡಿ ಅದರಲ್ಲಿ ಲೋಳೆಸರ, ಹರಳೆಣ್ಣೆ ಮತ್ತು ಜೇಡಿಮಣ್ಣು, ನೀರನ್ನು ಒಟ್ಟಿಗೆ ಉಟ್ಟ ಕಂಬದ ತುತ್ತ ಸೇರಿಸಲಾಗುತ್ತದೆ. ತುದಿಯಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ಮೇಲಿನಿಂದ ಕಂಬದ ಮೂಲಕ ಇಳಿಯುವಂತೆ ಲೋಳೇಸರ, ಹರಳೆಣ್ಣೆ ಸುರಿಯುತ್ತಿದ್ದರೆ ಇತ್ತ ಕೆಳಗಿನಿಂದ ಯುವಕ ಗುಂಪು ಕಂಬವನು ತಾಮುಂದು ನಾಮುಂದು ಎಂದು ಮಾನವ ಸರಪಳಿ ಮೂಲಕ ಸ್ಪರ್ಧಿಗಳು ಹತ್ತಲು ಪ್ರಯತ್ನಿಸುವುದೇ ಉಟ್ಲಕಂಬ.
ಬಾಬು ಎಂಬುವ ಯುವಕ ಕಂಬಕ್ಕೆ ಕಟ್ಟಿರುವ ನಾಲ್ಕು ತೆಂಗಿನಕಾಯಿ ಮುಟ್ಟಿ ಜಯಶಾಲಿಯಾದರು. ರಥೋತ್ಸವ ಹಾಗೂ ಉಟ್ಲಕಂಬ ಉತ್ಸವ ನೋಡಲು ನೆರೆ ಸೀಮಾಂದ್ರ, ತೆಲಗಾಂಣ, ಬಳ್ಳಾರಿ, ದಾವಣಗೆರೆ, ಬೆಂಗಳೂರು ಮತ್ತಿತರೆ ಕಡೆಯಿಂದ ಸಹಸ್ರಾರು ಭಕ್ತರು ಸ್ಥಳೀಯರು ಸೇರಿದಂತೆ ನಾನಾ ಪಕ್ಷಗಳ ಮುಖಂಡರು ಹಾಗೂ ದೇವಸ್ಥಾನ ಕಮಿಟಿಯವರು, ಊರಿನ ಪ್ರಮುಖರು ಗ್ರಾಮಸ್ಥರು ಭಾಗವಹಿಸಿದ್ದರು.