ಚಳ್ಳಕೆರೆ : ತಂದೆ ತಾಯಿ ಎಂದರೆ ದೇವರ ಸಮಾನ ಅವರನ್ನ ಪೂಜಿಸಿ ಗೌರವಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಸಮೀಪದ ಕುದಾಪುರ ಗ್ರಾಮದ ಸಿಪಿಐ ಜಿಬಿ ಉಮೇಶ್ ರವರ 43ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಕ್ ಕತ್ತರಿಸುವ ಮೂಲಕ ಸಂತಸ ಹಂಚಿಕೊAಡಿದ್ದಾರೆ. ಜಿಬಿ.ಉಮೇಶ್ ರವರು ಉತ್ತಮ ದಕ್ಷ ಅಧಿಕಾರಿ ಬಡವರ ಪರ ನೊಂದವರ ಪರ ಧ್ವನಿ ಎತ್ತಿ ಕೆಲಸ ಮಾಡಿದವರು ಅವರು ಇಂದು ಹುಟ್ಟು ಹಬ್ಬವನ್ನ ಆಚರಿಸಿ ಕೊಳ್ಳುತ್ತಿರುವುದು ಸಂತಸ ತಂದಿದೆ ಭಗವಂತ ಅವರಿಗೆ ಇಂಥ ನೂರಾರು ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳುವ ಶಕ್ತಿ ಕರುಣಿಸಿಲಿ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಶುಭ ಹಾರೈಸಿದ್ದಾರೆ.

ಈ ವೇಳೆ ಸಿಪಿಐ ಜಿಬಿ.ಉಮೇಶ್ ಮಾತನಾಡಿ ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಹುಟ್ಟಿದ ದಿನವನ್ನು ಆಚರಿಸಲೇಬೇಕು ಈ ಭೂಮಿಗೆ ಬಂದ ದಿನವನ್ನ ನಾವು ಯಾವತ್ತೂ ಮರೆಯಬಾರದು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನಮ್ಮ ಕುಟುಂಬಸ್ಥರು ನನ್ನ ಜನ್ಮದಿನವನ್ನು ಸಂಭ್ರಮ ಸಡಗರದಿಂದ ಪ್ರತಿ ವರ್ಷವೂ ಆಚರಿಸುತ್ತಾ ಬಂದಿದ್ದಾರೆ ನಮ್ಮ ತಂದೆ ತಾಯಿ ಆಶೀರ್ವಾದದಿಂದ ಇವತ್ತು ನಾನು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರೆ ಅವರ ಪರಿಶ್ರಮದ ಫಲದಿಂದ ನಾನು ಹುದ್ದೆಯನ್ನು ಅಲಂಕರಿಸಿದ್ದೇನೆ ಎಂದು ಸಿಪಿಐ ಜಿ ಬಿ ಉಮೇಶ್ ಭಾವುಕರಾದರು.
ಈ ಸಂದರ್ಭದಲ್ಲಿ ಜಿ ಪಾಪನಾಯಕ, ಗ್ರಾಮ ಪಂಚಾಯತಿ ಸದಸ್ಯ ಪಾಲಯ್ಯ, ಜಿ ಬಿ ಬೋರ ನಾಯಕ, ಲೋಕೇಶ್ ನಾಯಕ, ಹಾಗೂ ಪಂಚಾಕ್ಷರಿ ಸ್ವಾಮಿ. ಕಲಾವಿದರಾದ ಗಂಗಾಧರ್ ನುಂಕೇಶ್, ಗಾಯಕಿ ನಾಗವೀಣಾ ಹಿರಿಯೂರು, ಮುತ್ತುಗಾರಹಳ್ಳಿ ಕಾಂಗ್ರೆಸ್ ಮುಖಂಡ ಸಿಓ ನಾಗೇಶ , ಸೇರಿದಂತೆ ಮುಂತಾದವರು ಇದ್ದರು

About The Author

Namma Challakere Local News
error: Content is protected !!