ಕಾಯಿ ಕಟ್ಟದ ತೋಗರಿ ಗಿಡ : ರೈತ ಆತಂಕ
ಚಳ್ಳಕೆರೆ : ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ರೈತರಾದ ವೆಂಕಟೇಶ್‌ರೆಡ್ಡಿ ಸೇರಿದ ಸರ್ವೇ ನಂಬರ್ 62ರಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ.

ಆದರೆ ಬೀಜವನ್ನು ಕೃಷಿ ಇಲಾಖೆ ವತಿಯಿಂದ ಖರೀದಿಸಲಾಗಿದೆ. ಬೀಜದಲ್ಲಿ ಕಳಪೆ ಗುಣಮಟ್ಟದ ಬೀಜಗಳನ್ನು ರೈತರಿಗೆ ನೀಡಿದ್ದಾರೆ ಎಂದು ವೆಂಕಟೇಶ್ ರೆಡ್ಡಿ ಅವರು ಆರೋಪಿಸಿದ್ದಾರೆ.
ಇದರಿಂದ ರೈತರು ವಿಷ ಕುಡಿಯೋ ಪರಿಸ್ಥಿತಿ ಉಂಟಾಗಿದೆ. ದಯವಿಟ್ಟು ಸಂಬAಧಪಟ್ಟ ಮುಖ್ಯ ಅಧಿಕಾರಿಗಳು ಗಮನ ಆರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ವೆಂಕಟೇಶ್ ರೆಡ್ಡಿ ಅವರು ಮನವಿ ಮಾಡಿದ್ದಾರೆ.

ಇಂದು ಸ್ಥಳಕ್ಕೆ ಚಳ್ಳಕೆರೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

About The Author

Namma Challakere Local News
error: Content is protected !!