ನರೇಗಾ ಕೂಲಿ ಹಣ ಕೊಡಿ ಸ್ವಾಮಿ..! ಕೂಲಿ ಕಾರ್ಮಿಕರಿಂದ ಪ್ರತಿಭಟನೆ
ಚಳ್ಳಕೆರೆ : ತಾಲೂಕಿನ ಸಿದ್ದೇಶ್ವರನದುರ್ಗ ಗ್ರಾ.ಪಂ ವ್ಯಾಪ್ತಿಯ ಪಿ.ಗೌರಿಪುರ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ನೀಡುವಂತೆ ಆಗ್ರಹಿಸಿ ಕೂಲಿ ಕಾರ್ಮಿಕರ ಸಂಘಟನೆವತಿಯಿAದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತಾಲೂಕಿನ ಸಿದ್ದೇಶ್ವರನದುರ್ಗ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡಿದ ಕಾಮೀಕರಿಗೆ ಮೂರು ತಿಂಗಳು ಕಳೆದರೂ ಕೂಲಿ ಹಣ ನೀಡದೆ ಗ್ರಾಪಂ ಕಚೇರಿಗೆ ಅಲೆದಾಡಿಸುತ್ತಿದ್ದಾರೆ.

ಗ್ರಾಪಂ ಕಚೇರಿಗೆ ಹೋದರೆ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಇರುವುದಿಲ್ಲ ಕಚೇರಿಗೆ ಪಿಡಿಒ ಇಲ್ಲದೆ ಇರುವುದರಿಂದ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರ ಹಾಜರಾತಿ, ಎಂಐಎಸ್ ಮಾಡಲು ಪಿಡಿಒ ಇಲ್ಲದೆ ಇರುವುದರಿಂದ ಕೂಲಿ ಕಾರ್ಮಿಕರ ಹಾಜರಾರಿ ಜೂರೋ ಮಾಡಿರುವುದರಿಂದ ದುಡಿದ ಕೈಗಳಿಗೆ ಸಕಾಲಕ್ಕೆ ಕೂಲಿ ಹಣವಿಲ್ಲದೆ ಕೂಲಿ ಕೆಲಸವಿಲ್ಲದಂತಾAಗಿದೆ ಎಂದು ಕೂಲಿ ಹಣ ನೀಡಿದ ಪಿಡಿಒಗೆ ದಿಕ್ಕಾರ ಕೂಡಲೆ ಪಿಡಿಒ ಬದಲಾವಣೆ ಮಾಡುವಂತೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಮೌರ್ಯ ಮಾತನಾಡಿ ಈ ಹಿಂದೆ 2018ನೇ ಸಾಲಿನಲ್ಲಿ ಪಿಡಿಒ ಮಹಂತೇಶ್ ಕರ್ತವ್ಯ ನಿರ್ವಹಿಸುವ ವೇಳೆ ನರೇಗಾ ಯೋಜನೆ ಕೂಲಿ ಕಾರ್ಮಿಕರಿಗೆ ಸಿಗದೆ ಅವ್ಯವಸ್ಥೆಯಾಗಿ ದೂರಿನ ಮೇರೆಗೆ ವರ್ಗಾವಣೆ ಮಾಡಲಾಗಿತ್ತು

ಮತ್ತೆ ಈಗ ಅದೇ ಪಿಡಿಒ ಮಹಂತೇಶ್‌ರನ್ನು ಹಾಕಿರುವುದರಿಂದ ಕಚೇರಿಗೆ ಸರಿಯಾಗಿ ಬಾರದೆ ಇರುವುದರಿಂದ ನರೇಗಾ ಯೋಜನೆ ಕಾಮಗಾರಿ ಸರಿಯಾಗಿ ಅನುಷ್ಠಾನವಾಗದೆ ಕೂಲಿ ಕಾರ್ಮಿಕರು ಪರದಾಡುವಂತ ಪರಿಸ್ಥಿತಿ ಇದ್ದು ಕೂಡಲೆ ಬೇರೆ ಪಿಡಿಒ ನಿಯೋಜನೆ ಮಾಡುವಂತೆ ಒತ್ತಾಯಿಸಿದ್ದಾರೆ.

ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಕಾಲಕ್ಕೆ ಹಣ ಜಮ ಮಾಡಬೇಕು ವಿಳಂಭವಾದರೆ ದಂಡ ಸೇರಿಸಿ ಕೊಡ ಬೇಕೆಂಬ ನಿಯವಿದ್ದರೂ, ದುಡಿದ ಕೂಲಿ ಕಾರ್ಮಿಕರಿಗೆ ಸುಮಾರು ನಾಲ್ಕು ತಿಂಗಳು ಕಳೆದರೂ ಕೂಲಿ ಹಣ ನೀಡಿಲ್ಲ ಎಂದು ಕಮಲಮ್ಮ, ಮಂಜುಳ, ಕರಿಯಮ್ಮ,ಸಾವಿತ್ರಮ್ಮ, ಪುಟ್ಟಮ್ಮ ನೇತ್ರಾವತಿ, ರಂಗಸ್ವಾಮಿ, ಅಶ್ವಿನಿ, ಜಯಮ್ಮ ಇತರರಿದ್ದರು

Namma Challakere Local News
error: Content is protected !!