ಚಳ್ಳಕೆರೆ : ಧಾರ್ಮಿಕ ಕೆಲಸಗಳು ಸೇರಿದಂತೆ ಸಮಾಜದಲ್ಲಿನ ಬದುಕಿಗೆ ಅಗತ್ಯವಿರುವಂತ ಕೆಲಸ ಕಾರ್ಯಗಳನ್ನು ನೇಕಾರ ಸಮಾಜ ನಿರ್ವಹಿಸಿಕೊಂಡು ಬಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಚಳ್ಳಕೆರೆ ನಗರದ ತಿಪ್ಪೆಸ್ವಾಮಿ ಕಲ್ಯಾಣ ಮಂಟಪದಲ್ಲಿ ನೇಕರ ಸಮಾಜವು ಹಮ್ಮಿಕೊಂಡಿದ್ದಂತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಮನುಷ್ಯನಿಗೆ ಪಂಚೇಂದ್ರಿಯಗಳು ಹಾಗೂ ಭೂಮಂಡಲದ ಪಂಚಭೂತಗಳು ಮನುಷ್ಯನ ದೈನಂದಿನ ಹಾಗೂ ಭೂಮಂಡಲದ ನಿರ್ವಹಣೆಗೆ ಎಷ್ಟು ಅಗತ್ಯವಿದೆಯೋ ಹಾಗೆಯೇ ಈ ಸಮಾಜಕ್ಕೆ ಸ್ಫೂರ್ತಿ ಹಾಗೂ ಅಂತ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದೆ ಎಂದರು.
ತಹಶಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಈ ಸಮಾಜ ಸಾಂಸ್ಕೃತಿಕವಾಗಿ ಶ್ರೀಮಂತ ವಾದಂತ ಸಮಾಜ, ಈ ಸಮಾಜದ ಮೂಲಪುರುಷ ಜೇಡರ ದಾಸಿಮಯ್ಯನವರು ಈ ಸಮಾಜಕ್ಕೆ ಸ್ಪೂರ್ತಿ ಇವರು ರಕ್ಷಿಸುವಂತಹ ವಚನಗಳು ಬದುಕಿಗೆ ಸ್ಪೂರ್ತಿ ತುಂಬುತ್ತವೆ,
ಜೀವನದ ಪ್ರತಿಯೊಂದು ಸಂದರ್ಭಕ್ಕೂ ಅಗತ್ಯವೆನಿಸಿರುವಂತಹ ಮತ್ತು ವ್ಯಕ್ತಿತ್ವವನ್ನು ಪ್ರೇರೇಪಣೆಗೊಳಿಸುವಂತಹ ವಚನಗಳನ್ನು ರಚಿಸಿದ್ದಾರೆ,
ಈ ವಚನಗಳು ಬದುಕಿಗೆ ದಾರಿ ದೀಪವಾಗಿವೆ ಎಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಬೀಸುವ ಸುಳಿಗಾಳಿ ನಿಮ್ಮ ದಾನ ನಿಮ್ಮ ದಾನವ ಉಂಡುಅನ್ಯರ ಬೊಗಳುವ ಕುನ್ನಿಗಳೇನೆಂಬೆ ರಾಮನಾಥ ಮತ್ತು ಇನ್ನು ಮುಂತಾದ ವಚನಗಳು ಮಾನವೀಯ ಮೌಲ್ಯಗಳು ಬಹಳ ಹತ್ತಿರವಾಗಿವೆ,
ಇಂತಹ ಧಾರ್ಮಿಕರ ಕುಲದಲ್ಲಿ ಹುಟ್ಟಿರುವ ಈ ಸಮಾಜ ಇಂದಿನ ದಿನ ಸಮಾಜದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಮತ್ತೆ ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತುಂಬಾ ಔಚಿತ್ಯಪೂರ್ಣವಾಗಿದೆ,
ಸಮಾಜದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಹೆಚ್ಚು ಹೆಚ್ಚು ಉನ್ನತ ಶಿಕ್ಷಣವನ್ನ ಕೊಡಿಸುವುದರ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ಕೂಡ ನೀಡಬೇಕು ಮಾನವೀಯ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಸ್ವಾಭಿಮಾನದಿಂದ ಸ್ವಾವಲಂಬನೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಪ್ರೇರೇಪಣೆಗೊಳ್ಳಬೇಕೆಂದು ಮನವಿ ಮಾಡಿದರು,
ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಈ ಸಮಾಜ ಮುಂದಿನ ದಿನಗಳಲ್ಲಿ ಪ್ರಬುದ್ಧತೆಗೆ ಬರಬೇಕೆಂದು ಆಶಯ ಭಾಷಣ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ,ಇತಿಹಾಸ ಇರುವ ಈ ಸಮಾಜದಿಂದ ಇಂತ ಒಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಅತ್ಯಂತ ಪ್ರಶಂಷಣೆಯವಾಗಿದೆ ಹೆಚ್ಚು ಹೆಚ್ಚು ಇಂತಹ ಪ್ರೋತ್ಸಾಹದ ಕೆಲಸಗಳು ಆಗಬೇಕೆಂದು ಹೇಳಿದರು
ಈ ಸಮಾರಂಭದಲ್ಲಿ ಬೆಂಗಳೂರಿನ ಡಿವೈಎಸ್ಪಿ ರಂಗಪ್ಪ, ತಹಸಿಲ್ದಾರ್ ಎನ್.ರಘುಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಸಮಾಜದ ಎಲ್ಲಾ ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು