ಚಳ್ಳಕೆರೆ : ಭವ್ಯ ಭಾರತದ ಪ್ರಬುದ್ಧ ಸಂವಿಧಾನದ ಮೂಲ ಆಶಯ ಮತದಾನ, ಈ ಮತದಾನ ಪರಿಪೂರ್ಣವಾಗಬೇಕಾದಲ್ಲಿ ಮತದಾನ ಪಟ್ಟಿಯ ಪರಿಷ್ಕರಣೆ ದೋಷ ರಹಿತವಾಗಿರಬೇಕು ಎಂದು ಜಿಲ್ಲಾ ಉಪವಿಭಾಗಧಿಕಾರಿ ಚಂದ್ರಯ್ಯ ಹೇಳಿದ್ದಾರೆ.
ಅವರು ನಗರದ ಬಾಪೂಜಿ ಆರ್ಯವೇಧ ಕಾಲೇಜ್, ಪ್ರಥಮ ದರ್ಜೆ ಕಾಲೇಜು ಹಾಗೂ ಶಾಲಾ ಆವರಣದಲ್ಲಿ ೧೮ ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಸೇರಿಸುವ ವಿಶೇಷ ಆಂದೋಲನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಸಿದ್ದಪಡಿಸಿರಬೇಕು ಎಂದರು
ಇನ್ನೂ ತಹಶಿಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದ ಆಶಯದಂತೆ, 18 ವರ್ಷ ತುಂಬಿರುವಂತಹ ಎಲ್ಲಾ ಯುವಕ ಯುವತಿಯರು ತಮ್ಮ ಕುಟುಂಬದವರು ಇರುವಂತಹ ಮತಗಟ್ಟೆಯಲ್ಲಿ ಅವರ ಹೆಸರುಗಳನ್ನು ನೋಂದಾವಣೆ ಮಾಡಿಕೊಳ್ಳಬೇಕು ಇದರ ಮುಖಾಂತರ ಆದರ್ಶ ನಾಗರೀಕರಾಗಬೇಕೆಂದು ಹೇಳಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕ್ಷೇತ್ರದ ಯಾವುದೇ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿಗಳು ಮತದಾರರ ಪಟ್ಟಿಯಿಂದ ಹೊರಗಳಿಯದಂತೆ ಎಲ್ಲರೂ ಕೂಡ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಹಾಗೂ ದೋಷ ರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಎಲ್ಲ ಸರ್ಕಾರಿ ಅಧಿಕಾರಿ ನೌಕರರು ಇಂದು ಸಂಕಲ್ಪವನ್ನು ಮಾಡಿ ದೀಕ್ಷೆ ಪಡೆಯೋಣವೆಂದು ಹೇಳಿದರು.
ಇದೇ ಸಂಧರ್ಭದಲ್ಲಿ
ವಿದ್ಯಾರ್ಥಿಗಳು ಮತ್ತು ಅಧಿಕಾರಿ ನೌಕರರೊಂದಿಗೆ ಸರ್ವರೂ ಪ್ರತಿಜ್ಞಾವಿಧಿ ಪಡೆದುಕೊಂಡರು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ನಗರಸಭೆಯ ಪೌರಾಯುಕ್ತ ಸಿ.ಚಂದ್ರಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು