ರೈಲು ನಿಲ್ಲಿಸಿ ಪ್ರತಿಭಟನೆ :
ರೈಲ್ವೇ ಮೇಲ್ಸುತುವೆಗಾಗಿ ಸಾರ್ವಜನಿಕರ ಒತ್ತಾಯ
ರಾಮಾಂಜನೇಯ ಕೆ,ಚನ್ನಗಾನಹಳ್ಳಿ
ಚಳ್ಳಕೆರೆ : ನಾವು ಬಸ್ ನಿಲ್ಲಿಸೋದು, ಆಟೋ ನಿಲ್ಲಿಸೋದು ಕಂಡಿದ್ದೆವೆ ಆದರೆ ದಾರಿ ಮಧ್ಯೆದಲ್ಲಿ ರೈಲು ನಿಲ್ಲಿಸಿರುವುದು ಇದೇ ಮೊದಲು ಕಾಣಬಹುದು.
ಹೌದು ಇದು ನಿಜಕ್ಕೂ ಮೆಲ್ನೋಟಕ್ಕೆ ನಗೆಯ ವಿಷಯವಾದರೂ ಅತೀ ಗಂಭಿರವಾದ ಘಟನೆ ಒಂದು ಕ್ಷಣ ತಡವಾದರೂ ಪ್ರಾಣ ಕಳೆದು ಕೊಳ್ಳಬೇಕಾಗುತ್ತದೆ ಅಂತಹ ದೊಡ್ಡ ರಹದಾರಿಯಾದ ಈ ಮಾರ್ಗವೂ
ನಗರದ ಪಾವಗಡ ರಸ್ತೆಯಿಂದ ಆಂಧ್ರಕ್ಕೆ ಕರೆದೊಯ್ಯುವ ಈ ರಸ್ತೆ ರಾಜ್ಯದ ಮಧ್ಯ ಕರ್ನಾಟಕದ ಸಂಪರ್ಕ ರಸ್ತೆಯಾಗಿದೆ ಆದರೆ ಇಂತಹ ಮಾರ್ಗವೂ ಒಂದು ಕ್ಷಣವೂ ಬಿಡುವಿಲ್ಲದೆ ವಾಹನಗಳ ಸಂಚಾರ ವಿರುವ ಈ ಮಾರ್ಗವೂ ರೈಲು ಸಂಚಾರದಿAದ ಹಲವು ಗಂಟೆಗಳ ಕಾಲ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ.
ಅದರೆ ಇಂದು ಅರ್ಧ ಗಂಟೆಗೂ ಅಧಿಕ ಕಾಲ ರೈಲ್ವೆ ಗೇಟ್ ಹಾಕಿರುವ ಸಿಬ್ಬಂದಿಗೆ ತರಾಟೆ ತೆಗೆದುಕೊಂಡು ಚಲಿಸುವ ಗೂಡ್ಸ್ ರೈಲು ಗಾಡಿಗೆ ಅಡ್ಡವಾಗಿ ನಿಂತು ಪ್ರತಿಭಟಿಸಿದ ಘಟನೆ ಜರುಗಿದೆ,
ರೈಲ್ವೆ ಗೇಟ್ ಬಂದ್ :
ನಗರದ ಪಾವಗಡ ರಸ್ತೆಯಿಂದ ಅತೀ ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದ ಮಕ್ಕಳು ನಗರದ ಶಾಲಾ ಕಾಲೇಜುಗಳಿಗೆ ಆಗಮಿಸುತ್ತಾರೆ, ಸಾರ್ವಜನಕರು, ಹಾಗೂ ಆಸ್ವತ್ರೆಗೆ ತೆರಳುವ ವಯೋವೃದ್ದರ, ಬಾಂಣತಿಯರು ಇದೇ ಮಾರ್ಗವನ್ನು ಅವಲಂಬಿಸುತ್ತಾರೆ, ಆದರೆ ಈ ಮಾರ್ಗ ಬಿಟ್ಟರೆ ಅನ್ಯ ಮಾರ್ಗ ಎಲ್ಲಿಯೂ ಇಲ್ಲ ಇದರಿಂದ ಕಳೆದ ವರ್ಷಗಳಿಂದ ಇದೇ ರೈಲ್ವೆ ಗೇಟ್ ಪರಿಣಾಮದಿಂದ ಹಲವು ಸಾವು ನೋವುಗಳಾಗಿವೆ.
ಚಿಕ್ಕ ಹಳ್ಳಿಗೂ ಅಂಡರ ಪಾಸ್ :
ಇನ್ನೂ ಹೊಸಪೇಟೆ ಹಾಗೂ ಬೆಂಗಳೂರು ಮಾರ್ಗದ ರೈಲು ಗೂಡ್ಸ್ ಗಾಡಿಗಳು ಪ್ರಯಾಣಿಕರ ರೈಲು ಗಾಡಿಗಳು ಚಳ್ಳಕೆರೆ ತಾಲೂಕು ಹಾಗೂ ಮೊಳಕಾಲ್ಮೂರು ತಾಲೂಕಿನ ಹಲವು ಹಳ್ಳಿಗಳ ಮೂಲಕ ಹಾದು ಹೊಗುತ್ತದೆ ಆದರೆ ಹಲವು ಹಳ್ಳಿಗಳ ಮಾರ್ಗಕ್ಕೆ ಅವೈಜ್ಞಾನಿಕ ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸಿದ್ದಾರೆ ಆದರೆ ದಿನದ ಒಂದು ಕ್ಷಣವೂ ಬಿಡುವಿಲ್ಲದೆ ಸಂಚಾರ ಇರುವ ಈ ಪ್ರದೇಶಕ್ಕೆ ಜನಪ್ರತಿನಿಧಿಗಳ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯೋ ಗೊತ್ತಿಲ್ಲ, ಹಳ್ಳಿ ಹಳ್ಳಿಗೂ ಅಂಡರ್ ಪಾಸ್ ವ್ಯವಸ್ಥೆ ಇದೆ ಆದರೆ ದೊಡ್ಡದಾದ ಈ ಮಾರ್ಗಕ್ಕೆ ಕನಿಷ್ಠ ಅಂಡರ್ಪಾಸ್, ಆಗಲಿ ಮೇಲು ಸೇತುವೆ ಹಾಗಲಿ ಮಾಡಲು ಸರಕಾರಗಳು ಜನಪ್ರತಿನಿಧಿಗಳು ಮುಂದೆ ಬಂದಿಲ್ಲ, ಇದರಿಂದ ಈಡೀ ಜನರು ಶಾಪ ಹಾಕಿಕೊಂಡು ಮುಂದೆ ಸಾಗುತ್ತಿದ್ದಾರೆ.
ಇನ್ನೂ ಕ್ಷೇತ್ರದ ಶಾಸಕರ ಇಚ್ಚಾಶಕ್ತಿ :
ಕಳೆದ 2014ರಲ್ಲಿ ಶಾಸಕರಾದ ಟಿ.ರಘುಮೂರ್ತಿ ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರಕ್ಕೆ ಪತ್ರ ರವಾನೆ ಮಾಡಿ ಇಂತಹ ಸೂಕ್ಷö್ಮ ಸಮಸ್ಯೆಯನ್ನು ಪರಿಗಣಿಸುವಂತೆ ಸರಕಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ, ಆದರೆ ಬದಲಾಗುತ್ತಿರುವ ಸರಕಾರಗಳ ವೈಪಲ್ಯಗಳಿಂದ ಇಂದು ಜನಪ್ರತಿನಿಧಿಗಳ ಕೊಟ್ಟ ಮಾತು ಉಳಿಸಿಕೊಳ್ಳಲು ಅರಸಾಹಸ ಪಡುವಂತಾಗಿದೆ.
ಬಾಕ್ಸ್ ಮಾಡಿ :
- ಕಳದೆ 2013 ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆದ ನಂತರ ನಾನು ಕೇಂದ್ರ ಸರಕಾರಕ್ಕೆ ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಪತ್ರ ರವಾನೆ ಮಾಡಿದ್ದೆ ಚಳ್ಳಕೆರೆ ನಗರದಿಂದ ಚಿಕ್ಕನಾಯಕನಹಳ್ಳಿಯವರೆಗೆ ನೇರÀರೈಲು ಮಾರ್ಗವನ್ನು ಅವರು ಸೂಚಿಸಿದರು, ಆದರೆ ಸರಕಾರಗಳ ಬದಲಾವಣೆಯಿಂದ ಕೊಂಚ ವಿಳಭವಾಗಿದೆ, ಮುಂದಿನ ದಿನಗಳಲ್ಲಿ ಅತೀ ಶಿಘ್ರದಲ್ಲಿ ಮೇಲ್ಸೆತುವೆಗೆ ಒತ್ತಾಯ ಮಾಡಲಾಗುವುದು..— ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
- ಪ್ರತಿನಿತ್ಯವೂ ಇದೇ ಮಾರ್ಗವನ್ನೆ ನಾವು ಅಂವಲAಬಿಸಿದ್ದೆವೆ ನಮ್ಮ ಮಕ್ಕಳ ಇದೇ ಮಾರ್ಗದಿಂದ ಶಾಲೆಗೆ ಹೋಗಬೇಕು ಆದರೆ ಇದೇ ಸಮಯದಲ್ಲಿ ರೈಲು ಬರುವುದೆಂದು ಅರ್ಧ ಗಂಟೆಗೂ ಮುಂಚೆಯೇ ಗೇಟ್ ಕ್ಲೋಸ್ ಮಾಡಿ ಕೂರುತ್ತಾರೆ ಇದರಿಂದ ನಮ್ಮ ಮಕ್ಕಳ ಪ್ರತಿನಿತ್ಯವೂ ಶಾಲೆಗೆ ತಡವಾಗಿ ಹೋಗಬೇಕು ಇನ್ನೂ ಪರೀಕ್ಷೆ ಸಮಸಯದಲ್ಲಿ ನಮ್ಮ ಮಕ್ಕಳ ಕಷ್ಟ ಹೇಳತೀರದು.—ಶಿವಕುಮಾರ್ ಛೆಂಬರ್ ಆಪ್ ಕಾಮರ್ಸ್ ಅಧ್ಯಕ್ಷ
- ಸ್ವಾಮಿ ಅತೀ ತುರ್ತಾಗಿ ಸುಮಾರು 30ಕಿಲೋ ದೂರದಿಂದ ಚಳ್ಳಕೆರೆ ಸಾರ್ವಜನಿಕ ಆಸ್ವತ್ರೆಗೆ ರೋಗಿಯನ್ನು ಕರೆ ತಂದರೆ, ಆದರೆ ಇಲ್ಲಿ ಮಾತ್ರ ರೈಲು ಬರುವುದು ಎಂದು ಗೇಟ್ ಹಾಕಿದ್ದಾರೆ ಸುಮಾರು ಅರ್ಧ ಗಂಟೆಯಿAದ ಕಾಯುತ್ತಿದ್ದೆವೆ ಆದರೆ ಗೇಟ್ ತೆಗೆಯಲಿಲ್ಲ, ಪ್ರತಿ ದಿನವೂ ಇದೇ ತರ ನಮ್ಮ ಪ್ರಾಣಗಳು ಈ ರೈಲು ಮಾರ್ಗದಿಂದ ಹೋಗುತ್ತವೆ ಇನ್ನಾದರೂ ಕೇಂದ್ರ ಸಚಿವರು ನಮ್ಮ ಮತದಾರರ ಋಣ ತೀರಿಸಲು ಈ ರೈಲು ಮೆಲ್ಸೆತುವೆ ಮಾಡಿಸಲಿ..—ಮಂಜುನಾಥ್ ವಾಹನ ಸಾವರ