ಪರಶುರಾಮಪುರ
ಕನ್ನಡ ನಾಡು ನುಡಿ ನೆಲ ಜಲ ಕುರಿತು ಎಲ್ಲರೂ ಅಭಿಮಾನ ರೂಢಿಸಿಕೊಳ್ಳಬೇಕು ಎಂದು ಪಿಆರ್‌ಪುರ ಆರಕ್ಷಕ ಠಾಣೆ ಪಿಎಸ್‌ಐ ಎಸ್ ಕಾಂತರಾಜು ಹೇಳಿದರು
ಸಮೀಪದ ಕ್ಯಾದಿಗುಂಟೆ ಗ್ರಾಮದ ಮುಖ್ಯವೃತ್ತದಲ್ಲಿ ಗ್ರಾಮದ ಗಡಿನಾಡು ಕನ್ನಡ ಗೆಳೆಯರ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು
ಆಂಧ್ರ ಗಡಿಗೆ ಹೊಂದಿಕೊAಡ ಕ್ಯಾದಿಗುಂಟೆ ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಕನ್ನಡ ಗೆಳೆಯರ ಬಳಗ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬಂದು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಿ ಭಾಷಾಭಿಮಾನ ಮೆರೆದಿದ್ದಾರೆ ಎಂದರು
ಎಸ್‌ದುರ್ಗ ಗ್ರಾಪಂ ಅಧ್ಯಕ್ಷ ಪಿಲ್ಲಹಳ್ಳಿಮೌರ್ಯ ಮಾತನಾಡಿ ಗ್ರಾಪಂ ವ್ಯಾಪ್ತಿಯ ಶಾಲಾ ಕಾಲೇಜು ಜನವಸತಿ ಪ್ರದೇಶಗಳಲ್ಲಿ ನಮ್ಮ ನಾಡಹಬ್ಬವನ್ನು ಸಂಭ್ರಮದಿAದ ಆಚರಿಸಿ ಎಲ್ಲರಿಗೂ ಕನ್ನಡದ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು
ಬಿಎಲ್‌ಗೌಡ ಪಿಯು ಕಾಲೇಜು ಪ್ರಾಚಾರ್ಯ ಡಿ ತಿಮ್ಮಯ್ಯ ಕನ್ನಡ ಭಾಷೆ ಕುರಿತು ಉಪನ್ಯಾಸ ನೀಡಿ ಗಡಿಭಾಗದ ಕನ್ನಡಿಗರು ತೆಲುಗು ಭಾಷೆಗೆ ಮಾರು ಹೋಗದೇ ಕನ್ನಡದಲ್ಲೇ ಕಲಿತು ಗಡಿಭಾಗದಲ್ಲೂ ಕನ್ನಡವನ್ನು ಶ್ರೀಮಂತವನ್ನಾಗಿಸುತ್ತಿದ್ದಾರೆ ಎಂದರು
ಇದೇ ವೇಳೆ ಕ್ಯಾದಿಗುಂಟೆ ಗಡಿನಾಡು ಕನ್ನಡ ಗೆಳೆಯರ ಬಳಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗ್ರಾಮದ ವಿವಿಧ ಸಂಘಟನೆಗಳ ವತಿಯಿಂದ ತಾಯಿ ಭುವನೇಶ್ವರಿ ಮೂರ್ತಿಯನ್ನು ಅಲಂಕರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು
ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮೌರ್ಯ, ಉಪಾಧ್ಯಕ್ಷ ನಾಗಬೋವಿ, ಪ್ರಾಚಾರ್ಯ ಡಿ ತಿಮ್ಮಯ್ಯ, ಉಪನ್ಯಾಸಕ ಹನುಮಂತರಾಯ ಮುಖ್ಯಶಿಕ್ಷಕರಾದ ಆರ್ ಮಂಜುಳಾ, ವಿ ಸಿ ಕೆಂಚಣ್ಣ, ಶಿಕ್ಷಕರಾದ ಚಿಕ್ಕಣ್ಣ, ನಾಗರತ್ನಾ, ಮಂಜುಳಾ, ಪುಷ್ಪಾವತಿ, ಕ್ಯಾದಿಗುಂಟೆ ಗಡಿನಾಡ ಕನ್ನಡ ಗೆಳೆಯರ ಬಳಗದ ಪದಾಧಿಕಾರಿಗಳು ಕ್ಯಾದಿಗುಂಟೆ-ಎಸ್‌ದುರ್ಗ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಿಬ್ಬಂದಿ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!