ಗ್ರಾಮದ ಶಾಂತಿ ಕೇಂದ್ರಗಳು ದೇವಾಸ್ಥಾನಗಳು : ಶಾಸಕ ಟಿ.ರಘುಮೂರ್ತಿ ಹೇಳಿಕೆ
ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗ್ರಾಮದಲ್ಲಿ ನಡೆದ ನೂತನ ಶ್ರೀ ಮಾರಿಕಾಂಬ ದೇವಸ್ಥಾನ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
2017-18 ನೇ ಸಾಲಿನ ಬಿ. ಎನ್. ಚಂದ್ರಪ್ಪ ಮಾಜಿ ಸಂಸದರ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ನಿರ್ಮಿಸಲಾದ ಶ್ರೀ ಮಾರಿಕಾಂಬ ದೇವಿಯ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ಜನರ ಭಾವನೆಗಳಿಗೆ ಅನುಗುಣವಾಗಿ ಭಕ್ತಿ ಕೇಂದ್ರಗಳನ್ನು ನಿರ್ಮಿಸಿರುವುದು ಸಂತಸ ತಂದಿದೆ, ಜನರ ಮನಸ್ಸುಗಳನ್ನು ಹಿಡಿದಿಡುವ ಹಾಗೂ ಶಾಂತಿ, ನೆಮ್ಮದಿ ನೀಡುವ ಕೇಂದ್ರಗಳ ಇವಾಗಿವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತ್ಯಾಗರಾಜ್, ಉಪಾಧ್ಯಕ್ಷ ರತ್ನಮ್ಮ, ಸದಸ್ಯ ಹನುಮಂತರಾಯ, ಬೈಲಮ್ಮ ನಿಂಗಣ್ಣ, ಪಾಪಣ್ಣ ,ಗುಂಡಮ್ಮ ಹನುಮಂತಪ್ಪ, ಹಾಗೂ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮಾರೇಗೌಡ , ಉಪಾಧ್ಯಕ್ಷರಾದ ಪರಶುರಾಮಪ್ಪ ಮತ್ತು ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಖಜಾಂಚಿ ಹಾಗು ಮುಖಂಡರುಗಳಾದ ಕೇಶವಣ್ಣ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಯಕುಮಾರ್, ತಿಮ್ಮಣ್ಣ, ಏಕಾಂತಪ್ಪ, ನಾಗರಾಜ್, ಪುತರಾಜ್ ಮತ್ತು ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.