ಚಳ್ಳಕೆರೆ :
ಬೆಳಂ ಬೆಳ್ಳಿಗ್ಗೆ ಹೃದಯ ವಿದ್ರವಕ ಘಟನೆ
ಒಂದೇ ಕುಟುಂಬದ ಮೂರು ಜನ ಮಹಿಳೆಯರು ಆತ್ಮಹತ್ಯೆ
ನೀರಿನಲ್ಲಿ ವಿಷ ಬೇರಿಸಿ ಸೇವಿಸಿರುವ ಶಂಖೆ
ಚಳ್ಳಕೆರೆ ತಾಲೂಕಿನ
ಗೋಪನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ
ಎಸ್ಸಿ ಸಮುದಾಯದ ಮೂರು ಜನ ಮಹಿಳೆಯರ ದಾರುಣ ಸಾವು
ಪೊಲೀಸರ ತನಿಖೆಯಿಂದ ಸತ್ಯ ಹೊರಬಿಳಲಿದೆ
ಹೌದು
ಒಂದೇ ಕುಟುಂಬದ ಮೂರು ಜನ ಮಹಿಳೆಯರು ನೀರಿನಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುರುವಾರ ನಡೆದಿದೆ..
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಮಂಗೇರ ತಾಯಿ ತಿಪ್ಪಮ್ಮ(70) ಮಕ್ಕಳಾದ.ಮಾರಕ್ಕ(45).ದ್ಯಾಮಕ್ಕ(43) ಮೂರು ಜನರು ಬೆಳಗಿನ ಜಾವ 4ಗಂಟೆ ಸುಮಾರಿನಲ್ಲಿ ಶ್ಯಾಲು ಹೊದ್ದು ಹೊರಗೆ ಹೋಗಿ ಬಂದು ಮನೆಯೊಳಗೆ ಹೋದವರು ರಾತ್ರಿಯಾದರೂ ಬಾಗಿಲು ತೆಗೆಯದೆ.
ಹೊರಗೂ ಬಾರದೆ ಇರುವುದರಿಂದ ಅಕ್ಕ ಪಕ್ಕದವರು ಕದ ತಟ್ಟಿದರೂ ಕಿಟಕಿ ಯಿಂದ ನೀರು ಹುಗ್ಗಿದರೂ ಎಚ್ಚರವಾಗದ ಕಾರಣ ಚಳ್ಳಕೆರೆ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಚಳ್ಳಕೆರೆ ಪೋಲಿಸರು ಬಂದು ಬಾಗಿಲು ಹೊಡೆದು ಒಳ ಪ್ರವೇಶ ಮಾಡಿದಾಗ ನೀರಿನಲ್ಲಿ ವಿಷಬೆರೆಸಿ ಕುಡಿದಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಅಕ್ಟೋಬರ್ 6 ರಂದು ತಿಪ್ಪಮ್ಮನ ಮಗ ದ್ಯಾಮಣ್ಣ(46) ಅನಾರೋಗ್ಯದಿಂದ ಮೃತಪಟ್ಟು ಒಂದು ತಿಂಗಳು ಮುಗಿಯುವ ಮುನ್ನವೇ ಮೂರು ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು
ಮೃತರ ಮನೆ ಮುಂದೆ ಇಡೀ ಊರಿನ ಜನ ಮಮ್ಮುಲು ಮರಗುತ್ತಿದ್ದಾರೆ.
ಇನ್ನೂ ಈ ಘಟನೆಯನ್ನು ಚಳ್ಳಕೆರೆ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದಾರೆ