ಬೆಳೆವಿಮೆ ಹಾಗೂ ಪರಿಹಾರಕ್ಕೆ ರೈತ ಸಂಘದಿAದ ಪ್ರತಿಭಟನೆ : ಈ ತಿಂಗಳ ಅಂತ್ಯದಲ್ಲಿ ಪರಿಹಾರ ನೀಡುವ ಭರವಸೆ ಸೂಚಿಸಿದ ತಹಶಿಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘದಿAದ ತಾಲೂಕಿನ ರೈತರ ಬೆಳೆ ವಿಮೆ ಹಾಗೂ ನಷ್ಟ ಪರಿಹಾರ ನೀಡುವಲ್ಲಿ ವಿಮಾ ಕಂಪನಿಗಳು ಅವಜ್ಞಾನಿಕ ಷರತ್ತು ವಿಧಿಸಿ ರೈತರಿಗೆ ವಂಚನೆ ಮಾಡುತ್ತಿರುವುದನ್ನು ಖಂಡಿಸಿ ಚಳ್ಳಕೆರೆ ತಾಲೂಕು ಕಚೇರಿ ಮುಂದೆ ನೂರಾರು ರೈತರು ಪ್ರತಿಭಟಿಸಿ ತಹಶಿಲ್ದಾರ್ ಎನ್.ರಘುಮೂರ್ತಿ ಗೆ ಮನವಿ ಸಲ್ಲಿಸಿದ್ದಾರೆ .
ಇನ್ನು ರಾಜ್ಯ ಉಪಾಧ್ಯಕ್ಷ ಬೇಡರಹಳ್ಳಿ ಬಸವರೆಡ್ಡಿ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರ ಶೇಂಗಾ ಬೆಳೆ ನಷ್ಟ ಪರಿಹಾರಕ್ಕೆ ಅವೈಜ್ಞಾನಿಕ ಷರತ್ತು ವಿಧಿಸಿ ರೈತರಿಗೆ ಮೋಸ ಮಾಡುವ ತಂತ್ರ ಮತ್ತು ವಿಮಾ ಕಂಪನಿಗಳಿಗೆ ಲಾಭದ ಸಮೀಕ್ಷೆ ಮಾಡುತ್ತಿರುವುದನ್ನು ಖಂಡಿಸಿ ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ, ಸರ್ಕಾರಗಳು ರೈತರಿಗೆ ಮೋಸವಾಗದಂತೆ ಕಾನೂನು ರೂಪಿಸಿ ನೈಜವಾದ ಬೆಳೆ ನಷ್ಟ ಪರಿಹಾರ ನೀಡಬೇಕು ಕಳೆದ ಏಳು ವರ್ಷಗಳ ಶೇಂಗಾ ಬೆಳೆ ಇಳುವರಿ ಸರಾಸರಿ ತೆಗೆದುಕೊಳ್ಳುವುದನ್ನು ಕೈ ಬಿಡಬೇಕು, ವಾರ್ಷಿಕ ಮಳೆಯ ಲೆಕ್ಕ ಮಾಪನ ಆಧರಿಸಿ ವಿಮಾ ಕಂಪನಿಯ ನಿಯಮಗಳನ್ನು ಅಂದಾಜು ಮಾಡುವುದು ಅವೈಜ್ಞಾನಿಕ ಪದ್ಧತಿಯಾಗಿದ್ದು ತಕ್ಷಣವೇ ಇಂತಹ ನಿಯಮಾಳಿಗಳನ್ನು ರದ್ದು ಮಾಡಿ ಹಾಲಿ ಬೆಳೆ ನಷ್ಟವನ್ನು ವಿಮಾ ಕಂಪನಿ ಕೂಡಿ ಕೊಡಬೇಕು,
ವಿಮಾ ಕಂಪನಿಗಳು ಕಂಪನಿಗೆ ಲಾಭವಾಗುವ ನಿಯಮಗಳನ್ನು ರೂಪಿಸಿಕೊಂಡಿದ್ದು ಸರ್ಕಾರ ಇದಕ್ಕೆ ಕಡಿವಾಣ ಹಾಕಿ ರೈತರಿಗೆ ಆಗಿರುವ ನಷ್ಟ ಪರಿಹಾರಕ್ಕೆ ಸೂಕ್ತ ಕಾನೂನು ರೂಪಿಸಬೇಕು,
ಚಳ್ಳಕೆರೆ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿ ಮೊಳಕಾಲ್ಮೂರು ತಾಲೂಕಿನ 2 ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರಿಗೆ ವಿಮಾ ಹಣ ಬಿಡುಗಡೆ ಮಾಡಿ ಉಳಿದ ರೈತರಿಗೆ ವಂಚನೆ ಮಾಡಿರುವುದು ರೈತರಿಗೆ ಮಾರಕವಾಗಿದೆ.
ತಹಶಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಅತೀ ಶೀಘ್ರದಲ್ಲೇ ರೈತರ ಬೆಳೆ ವಿಮಾ, ಹಾಗೂ ಪರಿಹಾರ ದೊರಕಿಸಲು
ಈಗಾಗಲೇ ತಾಲೂಕು ಮಟ್ಟದಲ್ಲಿ ವರದಿ ರೂಪಿಸಿ ಸರಕಾರಕ್ಕೆ ರವಾನಿಸಲಾಗುವುದು, ಇನ್ನೂ ನಿಮ್ಮ ಮನವಿಯನ್ನು ಕೂಡ ಪರಿಗಣಿಸಿ ತಕ್ಷಣವೇ ಸರಕಾರಕ್ಕೆ ಪರಿಹಾರಕ್ಕಾಗಿ ಈ ತಿಂಗಳ ಅಂತ್ಯದಲ್ಲಿ ಪರಿಹಾರ ನೀಡುವ ಎಲ್ಲಾ ಹಂತದಲ್ಲಿ ಇದೆ ಎಂದರು.
ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವರೆಡ್ಡಿ, ಕಾರ್ಯದರ್ಶಿ ಜಿಬಿ ಹನುಮಂತ್ ರೆಡ್ಡಿ, ತಾಲೂಕು ಅಧ್ಯಕ್ಷ ಡಿ.ಚಂದ್ರಶೇಖರ ನಾಯಕ, ಬಿವಿ ತಿಪ್ಪೇಸ್ವಾಮಿ, ನವೀನ್, ನಾಗರಾಜ್, ರವಿಕುಮಾರ್ , ಮಂಜುನಾಥ್, ಶಿವಮೂರ್ತಿ , ಮೀಟೇ ನಾಯ್ಕ, ಅಟ್ಟಿ ನಿಂಗಣ್ಣ , ರಾಮರೆಡ್ಡಿ , ಅಶೋಕ ರೆಡ್ಡಿ ಇನ್ನು ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಪೋಟೋ ಚಳ್ಳಕೆರೆ ತಾಲೂಕು ಕಛೇರಿ ಮುಂದೆ ರೈತ ಸಂಘದಿAದ ಬೆಳೆವಿಮೆಗೆ ಪರಿಹಾರಕ್ಕಾಗಿ ಪ್ರತಿಭಟನೆ