ಕೋಟಿಕಂಠ ಗೀತ ಗಾಯನ
ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ ಸಾಕ್ಷಿ

ಸು10.ಸಾವಿರ ವಿದ್ಯಾರ್ಥಿಗಳೊಂದಿಗೆ ಗೀತ ಗಾಯನ

ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ ಗೀತೆಗಳ ವಾಚನ
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಗೀತೆ ಜೊತೆಗೆ ಐದು ಗೀತೆಗಳ ಗಾಯನ

ಚಳ್ಳಕೆರೆ : ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸುಮಾರು 10,000 ವಿದ್ಯಾರ್ಥಿಗಳೊಂದಿಗೆ ಗಾಯನ ಮಾಡಲಾಯಿತು.
ತಾಲೂಕು ಆಡಳಿತದ ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರದಮಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದರು.
ಇನ್ನೂ ತಾಲೂಕಿನ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕೂಡ ಧ್ವನಿ ಗೂಡಿಸಿದವು,
ಈ ಬಾರಿಯ ಕೋಟಿಕಂಠ ಗೀತ ಗಾಯನಕ್ಕೆ ವಿಶೇಷವಾಗಿ ಹತ್ತು ಸಾವಿರ ವಿದ್ಯಾರ್ಥಿಗಳೊಂದಿಗೆ ಹತ್ತು ಜನ ಕಲಾವಿದರು ಹಾಡಿದರು.
ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ವಿಶೇಷವಾಗಿ ಆಚರಿಸಲಾಗುವುದು ಕನ್ನಡ ಗೀತ ಗಾಯನದ ಮೂಲಕ ಸುಮಾರು ಹತ್ತು ಜನ ಗಾಯಕರೊಂದಿಗೆ ಹುಯಿಲಗೋಲ್ ನಾರಾಯಣರಾವ್ ರವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯು ಸೇರಿದಂತೆ ಐದು ಕನ್ನಡ ಗೀತೆಗಳ ಗಾಯನದ ಮೂಲಕ ಪ್ರಸ್ತುತಪಡಿಸಿದರು.
ಇನ್ನೂ ನವಂಬರ್ 1ನೇ ತಾರೀಕು ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕರ್ನಾಟಕ ಏಕೀಕರಣಕ್ಕೆ ಸಂಬAಧಿಸಿದAತೆ ಶ್ರಮಿಸಿದಂತಹ ಮಹಾನೀಯರನ್ನು ಸ್ಮರಿಸುವಂತಹ ಮತ್ತು ಮುಂದುವರೆದು ಕನ್ನಡದ ಉಳಿವಿಗೆ ಹೋರಾಟ ಮಾಡಿದಂತ ಅದಮ್ಯ ಚೇತನಗಳನ್ನು ಸ್ಮರಿಸಲಾಗುವುದು ಇದಕ್ಕೂ ಪೂರ್ವದಲ್ಲಿ ಭುವನೇಶ್ವರಿಯ ಫೋಟೋವನ್ನು ಸಾರೋಟಿನಲ್ಲಿ ಅಲಂಕರಿಸಿ ತರಲಾಗುವುದು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಯ್ದ ಐದು ಮನೋರಂಜನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಕನ್ನಡ ನಾಡುನುಡಿ ಪರಂಪರೆಯ ಬಗ್ಗೆ ಕನ್ನಡ ಸಾಹಿತಿಗಳು ಮಾತನಾಡಲಿದ್ದಾರೆ ಕನ್ನಡ ಉಳಿವಿಗೆ ಹೋರಾಟ ಮಾಡಿದಂತ ಕನ್ನಡ ಭಾಷೆಯಲ್ಲಿ ಡಾಕ್ಟರೇಟ್ ಪಡೆದಂತಹ ಅನೇಕರನ್ನು ಸನ್ಮಾನಿಸಲಾಗುವುದು ಹೊರ ರಾಜ್ಯಗಳಿಂದ ಬಂದು ಚಳ್ಳಕೆರೆ ತಾಲೂಕಿನಲ್ಲಿ ವಾಸಿಸುತ್ತಾ ಕನ್ನಡದ ಉಳಿವಿಗೆ ಸೇವೆ ಸಲ್ಲಿಸಿರುವ ಅಂತಹ ಗಣ್ಯರನ್ನು ಸನ್ಮಾನಿಸಲಾಗುವುದು ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಸಂಪೂರ್ಣ ಕಾರ್ಯಕ್ರಮ ನಡೆಯಲಿದ್ದು ಎಲ್ಲ ಕನ್ನಡಪರ ಸಂಘಟನೆಗಳು ಎಲ್ಲ ಸರ್ಕಾರಿ ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಒಡಗೂಡಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಅಯೋಜಿಸಿದ್ದು ಇದಕ್ಕೆ ಎಲ್ಲರೂ ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ಮನವಿ ಮಾಡಿದರು

Namma Challakere Local News
error: Content is protected !!