ದ್ವಾಪರಯುಗದ ಶ್ರೀ ಕೃಷ್ಣನಿಗೆ ಮತ್ತು ಮ್ಯಾಸ ಬೇಡ ಕುಲದ ಬುಡಕಟ್ಟು ಸಂಸ್ಕೃತಿಗೂ ಅವಿನಭಾವ ಸಂಬಂಧವಿದೆ

ದ್ವಾಪರ ಯುಗದಲ್ಲಿ ಜಾನುವಾರುಗಳು ಅದರಲ್ಲೂ ಗೋವುಗಳಿಗೆ ಅಗ್ರಸ್ಥಾನವಿದೆ ಮ್ಯಾಸ ಕುಲದ ಬುಡಕಟ್ಟು ಸಂಸ್ಕೃತಿಯಲ್ಲಿಯೂ ಕೂಡ ದೇವರ ಎತ್ತುಗಳಿಗೆ ವಿಶೇಷ ಸ್ಥಾನವಿದೆ ಭಗವಾನ್ ಶ್ರೀ ಕೃಷ್ಣನ ಆರ‍್ಶಗಳು ಮತ್ತು ಆಚರಣೆಗಳನ್ನು ಬುಡಕಟ್ಟು ಸಂಸ್ಕೃತಿಯಲ್ಲಿ ಪ್ರತಿಬಿಂಬಿಸಲಾಗಿದೆ ಹಾಗಾಗಿ ದೀಪಾವಳಿಯ ದಿನ ಬದುಕಿನ ಅಂಧಕಾರವನ್ನು ತೊರೆದು ಬೆಳಕಿನ ಕಡೆ ಮುಖ ಮಾಡುವಂತ ಈ ಒಂದು ಆಚರಣೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಬಿಟ್ಟರೆ ದಕ್ಷಿಣ ಭಾರತದಲ್ಲೇ ಇಲ್ಲ ಹಾಗಾಗಿ ಈ ದೈವಿಕ ಪರಂಪರೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿಕೊಂಡು ಹೋಗುವಂತ ಜವಾಬ್ದಾರಿ ಇಂದಿನ ಪೀಳಿಗೆಗೆ ಅಗತ್ಯವಾಗಿದೆ ಎಂದು ತಹಸಿಲ್ದಾರ್ ಎನ್ ರಘುಮರ‍್ತಿ ಹೇಳಿದರು

ಅವರು ನನ್ನಿವಾಳ ಗ್ರಾಮದ ವರವಿನರ‍್ವನರಹಟ್ಟಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಟ್ಟೆ ಮನೆ ಯವರು ಹಮ್ಮಿಕೊಂಡಿದ್ದಂತಹ ಗೋ ಪೂಜಾ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು

ಧರ‍್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮನೆ ಮಾಡಲು ಕಾರಣವಾಗಿವೆ ಇಂತಹ ಆಚರಣೆಗಳಿಂದ ದೇಹ ಮತ್ತು ಮನಸ್ಸು ಶುದ್ಧಿಯಾಗುತ್ತದೆ ಏಕಾಗ್ರತೆ ಹೆಚ್ಚುತ್ತದೆ

ದುರಾಲೋಚನೆಗಳು ದೂರವಾಗುತ್ತವೆ ವಿಶ್ವಶಾಂತಿಗೆ ಎಲ್ಲಾ ಆಚರಣೆಗಳು ಪೂರಕವಾಗಿವೆ ಬುಡಕಟ್ಟು ಸಂಸ್ಕೃತಿಯಿಂದ ಸಂಸ್ಕೃತಿಕ ಶ್ರೀಮಂತಿಕೆ ಹಚ್ಚುತ್ತದೆ ಪರಂಪರೆಯನ್ನು ಹಪ್ಪಿಕೊಂಡು ಹೋಗುವ ಅಗತ್ಯವಿದೆ ಯುವ ಪೀಳಿಗೆಯ ಕೂಡ ಆಚರಣೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು

ಈ ಕರ‍್ಯಕ್ರಮದಲ್ಲಿ ಮಾಜಿ ಮಂಡಲ ಪಂಚಾಯತಿ ಅಧ್ಯಕ್ಷರಾದ ದೊರೆಬಯಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕರ‍್ಯರ‍್ಶಿ ಜಯಪಾಲಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಬಿಜೆಪಿ ಮುಖಂಡರಾದ ಜಯರಾಮ್ , ಮಂಜುನಾಥ್, ದೊರೆ ನಾಗರಾಜ್ ಮತ್ತು ಬುಡಕಟ್ಟು ಸಮುದಾಯದ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!