ಶ್ರೀರಾಮುಲು ಕಪ್ ಕ್ರೀಕೆಟ್ ಪಂದ್ಯಾವಳಿ ಆಯೋಜಿಸಿರುವುದು ಸಂತಸ ತಂದಿದೆ ಪಾಪೇಶ್ ನಾಯಕ ಹೇಳಿಕೆ

ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಗ್ರಾಮದ ಹೊರವಲಯದ ಏಕಾಂತೇಶ್ವರ ದೇವಾಲಯದ ಪಕ್ಕದ ಕ್ರೀಡಾಂಗಣದಲ್ಲಿ ಎಂ.ಸಿ.ಸಿ ಕ್ರಿಕೆರ‍್ಸ್ ಆಯೋಜಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಗೆ ಸಚಿವರ ಆಪ್ತಸಹಾಯಕರಾದ ಪಾಪೇಶ್ ನಾಯಕ ಚಾಲನೆ ನೀಡಿದರು.
ಎಂ.ಸಿ.ಸಿ ಕ್ರಿಕೆರ‍್ಸ್ ವತಿಯಿಂದ ಶ್ರೀರಾಮುಲು ಕಪ್ 2022ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳನ್ನು ಕುರಿತು ಮಾತನಾಡಿದ ಅವರು ಸಾರಿಗೆ ಸಚಿವ ಬಿ.ಶ್ರೀರಾಮುಲು ಅಪ್ಪಟ ಕ್ರಿಕೆಟ್ ಆಟಗಾರರು ಅವರಿಗೆ ಕ್ರಿಕೆಟ್ ಅಂದರೆ ಇಷ್ಟ ಅವರು ಚಿಕ್ಕಂದಿನಿAದಲೇ ಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದು ಉತ್ತಮ ಆಟಗಾರರಾಗಿದ್ದರು

ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಕ್ರೀಡೆಗಳನ್ನು ನಡೆಸಲಾಗುತ್ತಿರಲಿಲ್ಲ ಈಗ ಕಾಲಾವಕಾಶ ಸಿಕ್ಕಿದೆ ಗ್ರಾಮೀಣ ಪ್ರದೇಶದ ಯುವಕರು ಗ್ರಾಮೀಣ ಕ್ರೀಡಾ ಕ್ರೀಡೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಪ್ರತಿಯೊಬ್ಬ ಯುವಕರು ಕೂಡ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಕೊಂಡರೆ ಕ್ರೀಯಶೀಲರಾಗಿ ಆರೋಗ್ಯವಂತರಾಗಿರಲು ಸಾಧ್ಯ

ಗ್ರಾಮೀಣ ಪ್ರದೇಶದಲ್ಲಿ ಕಬ್ಬಡಿ, ಖೋಖೋ, ವಾಲಿಬಾಲ್ ಹೀಗೆ ಹಲವಾರು ಕ್ರೀಡಾಕೂಟಗಳಲ್ಲಿ ಆಯೋಜಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳು ಕಣ್ಮರೆಯಾಗಿವೆ ಆದ್ದರಿಂದ ಯುವ ಪೀಳಿಗೆ ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಉಳಿಸಲು ಮುಂದಾಗಬೇಕು ಮುಂದಿನ ದಿನಗಳಲ್ಲಿ ಕ್ರೀಡೆಗಳಿಗೆ ನನ್ನ ಕೈಲಾದಷ್ಟು ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಈ ವೇಳೆ ಪಟೇಲ್ ಜಿಎಂ.ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿ ಮನುಷ್ಯ ಆರೋಗ್ಯವಂತನಾಗಿರಲು ಕ್ರೀಡೆಗಳು ಅಗತ್ಯವಾದದ್ದು ಗ್ರಾಮದ ಯುವಕರು ಆಯೋಜಿಸಿದ ಶ್ರೀ ರಾಮುಲು ಕಪ್ ಎಂಬ ಕ್ರೀಡಾಕೂಟವು ಪ್ರತಿ ವರ್ಷವೂ ನಡೆಯುವಂತಾಗಬೇಕು ಎಂದು ಪಟೇಲ್ ಜಿಎಂ.ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ತಿಳಿಸಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಎಂವೈಟಿ ಸ್ವಾಮಿ, ನಗರ ಘಟಕ ಅಧ್ಯಕ್ಷರಾದ ಎನ್.ಮಹಾಂತಣ್ಣ, ಬಿಜೆಪಿ ಸೋಮು ಚಿತ್ರದುರ್ಗ, ಓಬಿಸಿ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ, ಉಮೇಶ್ ನಾಯಕನಹಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ನಿರಂಜನ್, ಮತ್ತು ತ್ರಿಶೂಲ್ ಕುಮಾರ್, ವಿಷ್ಣುಸಿಂಹ, ವೆಂಕಟೇಶ್ ,ಮಹೇಶ್, ಮನಮೈನಹಟ್ಟಿ ಗ್ರಾಮದ ಹಾಗೂ ನಾಯಕನಹಟ್ಟಿ ಹೋಬಳಿಯ ಸಮಸ್ತ ಕ್ರಿಕೆಟ್ ಆಟಗಾರರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!