ದೊಡ್ಡಚೆಲ್ಲೂರು ಗ್ರಾಮ, ಧಾರ್ಮಿಕ ನೆಲೆಗಟ್ಟಿಗೆ ಹೆಸರುವಾಸಿಯಾಗಿದೆ: ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿಕೆ
ಚಳ್ಳಕೆರೆ : ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಯಾವ ಗ್ರಾಮಗಳು ಮುನ್ನಡೆ ಸಾಧಿಸುತ್ತವೆಯೋ ಅಂತಹ ಗ್ರಾಮಗಳಲ್ಲಿ ಸಾಮಾಜಿಕ ಬದಲಾವಣೆಯನ್ನು ಕಂಡುಕೊAಡು ಗ್ರಾಮಗಳ ಅಭಿವೃದ್ಧಿ ಪಥದತ್ತ ಕೊಂಡುಯ್ಯುವಲ್ಲಿ ಶ್ರಮಿಸಬೇಕು ಎಂದು ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಪರಶುರಾಂಪುರ ಹೋಬಳಿ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಬೈಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜಾ ಮಹೋತ್ಸವ ಹಾಗೂ ಅಖಂಡ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಎಲ್ಲೆಲ್ಲಿ ಧಾರ್ಮಿಕ ಕ್ಷೇತ್ರಗಳಿವೆಯೋ ಅಲ್ಲೆಲ್ಲಿ ಧಾರ್ಮಿಕ ಭಾವನೆಗಳಿವೆ ಇಂತಹ ಗ್ರಾಮಗಳಲ್ಲಿ ಶೈಕ್ಷಣಿಕ ನೆಲೆಗಟ್ಟು ವೃದ್ಧಿಯಾಗುತ್ತದೆ, ಇಂತಹ ಗ್ರಾಮಗಳಲ್ಲಿ ಸಾಮಾಜಿಕ ಬದಲಾವಣೆ ಪರಿವರ್ತನೆಯಾಗುತ್ತದೆ ಹಾಗಾಗಿ ಇದೊಂದು ಗ್ರಾಮ ಸಾಂಸ್ಕೃತಿಕವಾಗಿ ಶ್ರೀಮಂತವಾದAತ ಗ್ರಾಮ,
ಈ ಗ್ರಾಮದ ಎಲ್ಲ ಸಾರ್ವಜನಿಕರು ಕೂಡ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಿ ಇದರ ಮುಖಾಂತರ ಉನ್ನತ ಶಿಕ್ಷಣ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಬೇಕು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈ ಗ್ರಾಮಕ್ಕೆ ವಿಶೇಷವಾದ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ
ಅವರ ಆಶಯದಂತೆ ಇಡೀ ದೊಡ್ಡ ಚೆಲ್ಲೂರು ಪಂಚಾಯಿತಿಯನ್ನು ಕಂದಾಯ ಇಲಾಖೆಯ ಸಮಸ್ಯೆಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬರೂ ಕೂಡ ತಮ್ಮ ನಿರ್ದಿಷ್ಟ ಕೆಲಸ ಕಾರ್ಯಗಳ ಸಮಸ್ಯೆಗಳನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವಾಮಿರೀಕ್ಷಕರ ಹತ್ತಿರ ತಿಳಿಸಬೇಕು
ಮುಂದಿನ ಒಂದು ವಾರಗಳ ಕಾಲ ಕಂದಾಯ ಇಲಾಖೆಯ ಅಧಿಕಾರಿಗಳು ಈ ಪಂಚಾಯತಿ ವ್ಯಾಪ್ತಿಯಲ್ಲಿ ಇರುತ್ತಾರೆ ಅವರುಗಳಿಗೆ ಸಮಸ್ಯೆಗಳ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ನೀಡಬೇಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಪೌತಿ ಖಾತೆ, ಪೋಡಿ, ದಾರಿವಿವಾದಗಳು, ಸ್ಮಶಾನ ರೈತರ ಬೆಳೆಪರಿಹಾರ ಮುಂತಾದ ಎಲ್ಲಾ ಕೆಲಸಗಳನ್ನು ಕೂಡ ಶೇಕಡ ನೂರಕ್ಕೆ ನೂರರಷ್ಟು ಪೂರೈಸಿ ಶಾಸಕರ ಅಧ್ಯಕ್ಷತೆಯಲ್ಲಿ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗುವುದು ಪಂಚಾಯಿತಿ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾದ್ಯಕ್ಷ ಪ್ರಸನ್ನ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ಮಹಾಂತೇಶ್ ಗೊಂಚಿಕಾರ್‌ರುದ್ರಣ್ಣ, ಗ್ರಾಮ ಲೆಕ್ಕಾಧಿಕಾರಿ ಪರಮಶಿವ ಮುಂತಾದವರು ಉಪಸ್ಥಿತರಿದ್ದರು.
ಪೋಟೋ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಬೈಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜಾ ಮಹೋತ್ಸವ ಹಾಗೂ ಅಖಂಡ ಭಜನೆ ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿದ್ದರು.

About The Author

Namma Challakere Local News
error: Content is protected !!