ಕುದಾಪುರ ಗ್ರಾಮಸ್ಥರ ಗೋಳು ಕೇಳುವವರು ಯಾರು
ಚಳ್ಳಕೆರೆ : ಸರ್ಕಾರ ಗ್ರಾಮಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ಸ್ವಚ್ಛತೆ ಸೇರಿದಂತೆ ಸಾಕಷ್ಟು ಹಣವನ್ನು ಸರ್ಕಾರ ಗ್ರಾಮ ಪಂಚಾಯತಿಗಳಿಗೆ ನೀಡುತ್ತದೆ ಆದರೆ ಸಮರ್ಪಕವಾಗಿ ಅಭಿವೃದ್ದಿ ಮಾಡಬೇಕಾದರವು ಮಾಡುತ್ತಿಲ್ಲ ಎಂದು ಜಿ ಪಾಪನಾಯಕ ಆರೋಪ ಮಾಡಿದರು.
ಅವರು ನಾಯಕನಹಟ್ಟಿ ವ್ಯಾಪ್ತಿಯ ಗ್ರಾಮದ ಸಮಸ್ಯೆಗಳ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಕುದಾಪುರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ ಸ್ವಚ್ಛತೆ ಬಗ್ಗೆ ಕಾಳಜಿ ಇಲ್ಲ ಬಾರಿ ಸೊಳ್ಳೆಗಳ ಆರ್ಭಟದಿಂದ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ
ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ ಗ್ರಾಮದಲ್ಲಿ ಅಣ್ಣತಮ್ಮಂದಿರತ್ತೆ ಬಾಳುತ್ತಿದ್ದ ನಮಗೆ ಚರಂಡಿಗಳ ವ್ಯವಸ್ಥೆಯಿಂದ ಅಣ್ಣ ತಮ್ಮಂದಿರೇ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ದಯಮಾಡಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಹಳ್ಳಿಮೇಷ್ಟ್ರು ಕುದಾಪುರ ರವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥ ಜಿ.ಪಾಪನಾಯಕ, ಹಳ್ಳಿ ಮೇಷ್ಟ್ರು , ಜಿಬಿ.ಬೋರಣ್ಣ, ಬಿ ಓಬಣ್ಣ, ಕೆ ಜಿ ಪ್ರಕಾಶ್, ಲಕ್ಷ್ಮಮ್ಮ, ಭಾಗ್ಯಮ್ಮ, ಚೌಳಕೆರೆ ಬಸಯ್ಯ, ಸೇರಿದಂತೆ ಮುಂತಾದವರು ಇದ್ದರು