ಮನೆಗಳು ಜಾಲವೃತಗೊಂಡ ತಪಗೊಂಡನಹಳ್ಳಿ ಗ್ರಾಮಕ್ಕೆ : ತಹಶೀಲ್ದಾರ್ ಎನ್.ರಘುಮೂರ್ತಿ ಬೇಟಿ
ಚಳ್ಳಕೆರೆ : ತಪ್ಪಗೊಂಡನಹಳ್ಳಿ ಗ್ರಾಮದ ಕೆರೆಯ ಭರ್ತಿಯಾದ ಹಿನ್ನೆಲೆಯಲ್ಲಿ ಮತ್ತು ಅತಿವೃಷ್ಟಿಯಿಂದ ಈ ಗ್ರಾಮದ ವಾಸದ ಮನೆಗಳು ನೀರು ನುಗ್ಗಿ ವಾಸಿಸಲು ಅನಾನುಕೂಲವಾದ ಹಿನ್ನೆಲೆಯಲ್ಲಿ ಸದರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶಿಲ್ದಾರ್ ಎನ್.ರಘುಮೂರ್ತಿ, ಗ್ರಾಮಕ್ಕೆ ವ್ಯವಸ್ಥಿತವಾಗಿ ಹೊಸ ಬಡಾವಣೆ ನಿರ್ಮಾಣಕ್ಕೆ ಸರ್ವೇ ನಂಬರ್ 24ರಲ್ಲಿ 20 ಎಕರೆ ಸರ್ಕಾರಿ ಜಮೀನನ್ನು ಪಂಚಾಯಿತಿಗೆ ಮೀಸಲಿರಿಸಲು ಎರಡು ದಿನಗಳೊಳಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು
ಪ್ರತಿವರ್ಷ ಈ ಕೆರೆಬರ್ತಿ ಆದಾಗಲೆಲ್ಲ ಇಂತಹದೇ ಕಷ್ಟವನ್ನು ಈ ಗ್ರಾಮದ ಜನರು ಅನುಭವಿಸುತ್ತಾರೆ ಈ ಗ್ರಾಮದ ಜನರು ಈ ಸಮಸ್ಯೆಯ ಕುರಿತಾದ ಮನವಿಯನ್ನು ಸಾರಿಗೆ ಸಚಿವರಿಗೆ ಸಲ್ಲಿಸಿದ್ದಾರೆ.
ಸಾರಿಗೆ ಸಚಿವರು ಈ ಅನಾನುಕೂಲಕ್ಕೆ ಸಂಬAಧಿಸಿದAತೆ ಶಾಶ್ವತವಾದ ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದಾರೆ ಅದರಂತೆ ಸಚಿವರ ಸೂಚನೆಯಂತೆ ಇಡೀ ಗ್ರಾಮದ ಬಡಾವಣೆಗೆ 20 ಎಕರೆ ಜಾಗವನ್ನು ಗುರುತಿಸಲಾಗಿದೆ
ಈ ಗ್ರಾಮದಲ್ಲಿ ಇರುವಂತಹ ಸಾರ್ವಜನಿಕರ ಭೌತಿ ಖಾತೆ ಪೋಡಿ ದಾರಿ ಸ್ಮಶಾನ ಪಿಂಚಣಿ ಮುಂತಾದ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವಂತೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷೆಕರಿಗೆ ಸೂಚಿಸಲಾಗಿದೆ
ಇದೇ ಸರ್ವೆ ನಂಬರ್‌ನಲ್ಲಿ ರೈತರ ಜಮೀನುಗಳಿಗೆ ಹೋರಾಡಲು ದಾರಿ ಅಡ್ಡಿಪಡಿಸುತ್ತಿರುವುದಾಗಿ ದೂರು ಬಂದಿದ್ದು ಇದು ಸರ್ಕಾರಿ ಸರ್ವೇ ನಂಬರ್‌ನಲ್ಲಿ ಮುಂಜೂರಾಗಿರುವAತಹ ಜಮೀನ್ ಆಗಿರುವುದರಿಂದ ಇಲ್ಲಿ ಯಾರೇ ಆಗಲಿ ಓಡಾಡಲು ದಾರಿಗೆ ನಿರ್ಬಂಧ ಏರುವಂತಿಲ್ಲ ತಕ್ಷಣವೇ ಪಂಚಾಯಿತಿ ವತಿಯಿಂದ ಎನ್ಆರ್ಐಜಿ ಹಣದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಪಂಚಾಯಿತಿ ಸದಸ್ಯರಿಗೆ ಸೂಚನೆ ನೀಡಿದರು
ಇಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಇದಕ್ಕೆ ಸಂಬAಧಿಸಿದ ಅರ್ಜಿ ಸಲ್ಲಿಸಲು ಸ್ಥಳೀಯ ಪಂಚಾಯಿತಿಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಈ ಅವಕಾಶವನ್ನು ಗ್ರಾಮದ ಎಲ್ಲ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು.
ಮನೆಗಳಿಗೆ ನೀರು ತುಂಬಿರುವುದರಿAದ ಕೆರೆ ನೀರು ಕಡಿಮೆಯಾಗುವವರೆಗೆ ಅಂತರ ಕಾಯ್ದುಕೊಳ್ಳಬೇಕು ಇಡೀ ತಾಲೂಕು ಆಡಳಿತ ಗ್ರಾಮದ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದರು
ಈದೇ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಪಂಚಾಯತಿ ಸದಸ್ಯ ಜಗಳೂರಪ್ಪ, ರಂಗನಾಥ, ತಿಪ್ಪೇಶಪ್ಪ ಮತ್ತು ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು