ಚಳ್ಳಕೆರೆಯಲ್ಲಿ ಮದಕರಿ ನಾಯಕ ಜಯಂತಿ ಆಚರಣೆ : ವಿವಿಧ ಗಣ್ಯರು ಬಾಗಿ

ಚಳ್ಳಕೆರೆ : ಕಾಮಗೇತಿ ವಂಶಕ್ಕೆ ಸೇರಿದ ಚಿತ್ರದುರ್ಗದ ಸಂಸ್ಥಾನದ ದೊರೆ ಚಿತ್ರನಾಯಕನು, ಮದಿಸಿದ ಆನೆಯನ್ನು ಪಳಗಿಸಿದ್ದರಿಂದ ಅವರಿಗೆ ಮದಕರಿ ಎಂಬ ಬಿರುದು ಬಂತು ಎಂದು ಇತಿಹಾಸ ಹೇಳುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮುದಾಯ ಹಾಗು ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ ಮಧಕರಿ ನಾಯಕ ಜಯಂತಿ ಕಾರ್ಯಕ್ರದಲ್ಲಿ ಮದಕರಿ ನಾಯಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು

ಚಿತ್ರದುರ್ಗದ ನಾಯಕ ಧೀರ, ಶೋರ ಆಗಿದ್ದನು ಇವನ ಮರಣದ ನಂತರ ಇವನ ಮಗ ಅಧಿಕಾರಕ್ಕೆ ಬಂದನಾದರೂ ಮಕ್ಕಳಿಲ್ಲದೆ ಬಹು ಬೇಗ ತೀರಿಕೊಂಡ, ಸಿಂಹಾಸನ ಬರಿದಾಯಿತು. ಅಗ ರಾಜ ಮಾತೆ ಓಬವ್ವ ನಾಗತಿ ತನ್ನ ವಂಶಕ್ಕೆ ಸೇರಿದ ಜಾನಕಲ್ಲಿನಲ್ಲಿ ವಾಸವಾಗಿದ್ದ ಭರಮಣ್ಣ ನಾಯಕನ ಮಗ ಚಿಕ್ಕಮದಕರಿ ನಾಯಕನನ್ನು ದತ್ತು ತೆಗೆದುಕೊಂಡು ಪಟ್ಟ ಕಟ್ಟಿ ಸಿಂಹಾಸನದಲ್ಲಿ ಕೂರಿಸಿ,

ಮದಕರಿಯು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಅಧಿಕಾರವನ್ನು ನೋಡಿಕೊಂಡರು. ಅಪಾರ ಐಶ್ವರ್ಯದಿಂದ ತುಂಬಿ ತುಳುಕುತ್ತಿದ್ದ ಚಿತ್ರದುರ್ಗವನ್ನು ಪಡೆಯುವ ಹಂಬಲ ಹಲವು ರಾಜರಿಗೆ ಇತ್ತು.

ಅದರಲ್ಲಿ ರಾಯದುರ್ಗದ ಕೃಷ್ಣಪ್ಪ ಒಬ್ಬನು, ಸಮಯ ಸಾಧಿಸಿ ಚಿತ್ರದುರ್ಗದ ಗಡಿಯನ್ನು ಮುತ್ತಿ ಮದಕರಿಯ ಗೋವುಗಳನ್ನು ಹಿಡಿದ ರಾಜಮಾತೆಯು ಶತ್ರುಗಳನ್ನು ನಿರ್ನಾಮ ಮಾಡಿ ಗೋವುಗಳನ್ನು ಬಿಡಿಸಿಕೊಂಡು ಬರುವಂತೆ ಆಜ್ಞೆಯಿತ್ತರು.

ಕೇವಲ ಹನ್ನೆರಡು ವಯಸ್ಸಿನ ಬಾಲಕ ಸೇನೆಯನ್ನು ಮುನ್ನೆಡೆಸಿ ಶತ್ರುಗಳನ್ನು ಸದೆಬಡಿದು ಗೋವುಗಳನ್ನು ಬಿಡಿಸಿಕೊಂಡು ಬಂದನು. ಮುಂದೆ ಬಾಲಕ ವಜ್ರಕಾಯನಾಗಿ , ತೇಜಸ್ವಿಯಾಗಿ ಬೆಳೆದು ನಿಲ್ಲುತ್ತಾರೆ
ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿಯಾದ ದೊರೆ ಮದಕರಿ ನಾಯಕ 77 ಪಾಳೇಗಾರರಲ್ಲಿ ಬಲಿಷ್ಠ ನಾಯಕ ಮದಕರಿ ನಾಯಕ ಚಿತ್ರದುರ್ಗದ ನಾಯಕರಲ್ಲಿ ಒಬ್ಬರಾದ ನಾಯಕರಾಗಿದ್ದ ಮದಕರಿ ನಾಯಕ ಚಿತ್ರದುರ್ಗದ ಸಿಂಹಾಸವನ್ನು ಅಲಂಕರಿಸಿದಾಗ 12 ವರ್ಷ ವಯಸ್ಸು ಆಗಿದ್ದರು.

ಚಿತ್ರದುರ್ಗದ ವೈರಿಗಳು ಮತ್ತೊಮ್ಮೆ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಬೇಡರ ಸಮುದಾಯ ತಮ್ಮ ನಾಯಕನಿಗೆ ನಿಷ್ಠಾವಂತರಾಗಿ ಉಳಿದ ಚಿತ್ರದುರ್ಗ ಕೋಟೆಯನ್ನು ಕೊಟೆಯನ್ನು ರಕ್ಷಿಸುತ್ತಾರೆ.

ಮದಕರಿ ನಾಯಕರು ಕೆರೆಕಟ್ಟೆ ಮಠ ಮಂದಿರಗಳನ್ನು ನಿರ್ಮಿಸಿ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು ನಾಯಕರನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸದೆ ಅವರು ಮಾಡಿದಂತಹ ಕಾರ್ಯಗಳನ್ನು ಸ್ಮರಿಸಬೇಕು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಟಿಜೆ ವೆಂಕಟೇಶ್ , ಮಾಜಿ ಪುರಸಭೆ ಸದಸ್ಯ ಚೇತನ್ ಕುಮಾರ್ ಕುಮ್ಮಿ , ಮುಖಂಡರಾದ ಶಿವಣ್ಣ , ಶ್ರೀಧರಾಚಾರ್ , ಪ್ರಶಾಂತ ನಾಯಕ್, ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಹಾಗೂ ಸಮುದಾಯದ ಮುಖಂಡ ಮದಕರಿ ಪಾಪಣ್ಣ, ಶಿವರಾಜ್, ಹರೀಶ್, ಬುಜ್ಜಿ , ಮಂಜುನಾಥ್ ಪಾಪಣ್ಣ, ಸೇರಿದಂತೆ ವಿವಿಧ ಸಮುದಾಯದ ಮುಖಂಡರು ನಾಯಕ ಸಮುದಾಯದ ಮುಖಂಡರು ಇದ್ದರು

About The Author

Namma Challakere Local News
error: Content is protected !!