ಕುಡಿಯುವ ನೀರು ಬಂದ್ : ಸಾರ್ವಜನಿಕರ ಆಕ್ರೊಶ
ಚಳ್ಳಕೆರೆ : ನಗರದಲ್ಲಿ ಹಾದು ಹೊಗಿರುವ ನ್ಯಾಷನಲ್ ಹೈವೆ ಕಾಮಗಾರಿಗೆ ಮಣ್ಣು ಸಾಗಟ ಮಾಡುವ ಟಿಪ್ಪರ್ ಲಾರಿಗಳ ಎಡವಟ್ಟಿನಿಂದ ರಸ್ತೆ ಪಕ್ಕದಲ್ಲಿದ್ದ ಕುಡಿಯುವ ನೀರಿನ ಬೋರ್ ವೆಲ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗ್ರಾಮಕ್ಕೆ ಸರಬಾರಜು ಹಾಗುವ ನೀರು ಸಂಪೂರ್ಣವಾಗಿ ಬಂದ್ ಹಾಗಿದೆ.
ಇನ್ನೂ ಈ ಘಟನೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಂಗ್ಲೋರಹಟ್ಟಿಯಲ್ಲಿ ನಡೆದಿದೆ.
ರಸ್ತೆ ಪಕ್ಕದಲ್ಲಿದ್ದ ಕುಡಿಯುವ ನೀರಿನ ಕೊಳವೆ ಬಾವಿಗೆ ಪಿಎನ್‌ಸಿ ಕಂಪನಿಯ ಲಾರಿ ಡಿಕ್ಕಿಯಾದ ಪರಿಣಾಮ, ಕೊಳೆವೆ ಬಾವಿ ಪೈಪ್‌ಗಳು ಮುರಿದು ಮೋಟರ್ ಮತ್ತು ಪಂಪ್ ಕೊಳವೆ ಬಾವಿ ಒಳಗಡೆ ಬಿದ್ದಿದ್ದು, ಗ್ರಾಮಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಂಬAಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ.
ಪೋಟೋ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಂಗ್ಲೋರಹಟ್ಟಿಯಲ್ಲಿ ಕೊಳವೆಬಾವಿಗೆ ಲಾರಿಯಿಂದ ಡಿಕ್ಕಿ