ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ..?
ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ ಕಡಿವಾಣ ಹಾಕಬೇಕಾದ ಇಲಾಖೆ ಮಾತ್ರ ಮೌನ ವಹಿಸಿದೆ ಆದ್ದರಿಂದ ಅತೀ ತುರ್ತಾಗಿ ಕ್ರಮಕೈಗೊಳ್ಳಿ ಎಂದು ತಹಶೀಲ್ದಾರ್ ಗೆ ಮನವಿ ನೀಡಲು ಬಂದ ಹಳ್ಳಿ ಹೈದರ ಕಥೆ ಇದು.
ಹೌದು ನಿಜಕ್ಕೂ ಗ್ರಾಮೀಣ ಬದುಕು ತುಂಬಾ ಶೋಚನೀಯ ಒಂದು ಒತ್ತಿನ ಊಟ ಮಾಡಲು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿರುತ್ತದೆ ಆದರೆ ಇಂತಹ ಸಂದಿಗ್ಧತ ಪರಸ್ಥಿತಿಯಲ್ಲಿ ಮಾತ್ರ ಯುವಕರು ಮದ್ಯ ವ್ಯಸನಿಗಳಾಗಿರುವುದು ವಿಪರ್ಯಸವೇ ಸರಿ.
ಇಂತಹ ಘಟನೆಯನ್ನು ನಾವು ತಾಲೂಕಿನ ಮಿರಸಾಬಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ವಿಶ್ವೇಶ್ವರಪುರ ಗ್ರಾಮಲ್ಲಿ ಕಾಣಬಹುದು.
ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಅಪ್ರಪ್ತ ಬಾಲಕರು ಸಹ ಮದ್ಯ ಕುಡಿತದ ಚಟಕ್ಕೆ ಬಲಿಯಾಗಿದ್ದು ಸಂಜೆಯಾದ ತಕ್ಷಣ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡುವಂತಿಲ್ಲ, ಕುಡಿತದಿಂದ ಗ್ರಾಮದಲ್ಲಿ ಗಲಾಟೆ ಗದ್ದಲಗಳಿಂದ ಅಶಾಂತಿ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಶುದ್ಧ ಕುಡಿಯುವ ನೀರಿನ ಘಟಕ ವಿದ್ದು ದುರಸ್ಥಿ ಕಾಣದೆ ಎಷ್ಟೋ ದಿನಗಳು ಕಳೆದಿದ್ದು ಶುದ್ದ ಕುಡಿಯುವ ನೀರಿಗಾಗಿ ಎರಡು ಕಿ.ಮೀ ದೂರದ ಕರಿಕೆರೆ ಗ್ರಾಮಕ್ಕೆ ಹೋಗಿ ತರಬೇಕಿದೆ.
ಇನ್ನು ಅನಿವಾರ್ಯವಾಗಿ ಪ್ಲೋರೈಡ್ ಯುಕ್ತ ನೀರು ಕುಡಿದು ಕೆಮ್ಮು, ನೆಗಡಿ, ಕೈಕಾಲು, ಮಂಡಿನೋವಿನAತಹ ಕಾಯಿಲೆಗಲಿಗೆ ಗ್ರಾಮಸ್ಥರು ತುತ್ತಾಗಿ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದು ಮನೆಗಳ ಬಳಿ ಯಾವುದೇ ವಾಹನಗಳು ಬಾರದಂತಾಗಿದ್ದು ಕೂಡಲೆ ಸಂಬAಧಪಟ್ಟ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ರಸ್ತೆ ಒತ್ತುವರಿ ತೆರವು ಹಾಗೂ ಶುದ್ದ ಕುಡಿಯುವ ನೀರಿನ ಘಟಕ ದುರಸ್ಥಿ ಪಡಿಸುವಂತೆ ಈಶ್ವರಪ್ಪ, ತಿಪ್ಪಣ್ಣ, ಕೆಂಚಪ್ಪ, ಚಂದ್ರಪ್ಪ, ಲೋಕಪ್ಪ, ವೆಂಕಟೇಶ್ ರೆಡ್ಡಿ, ಜಯರಾಮಪ್ಪ ಕೆ.ಈಶ್ವರಪ್ಪ ಇತರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಪೋಟೋ ಚಳ್ಳಕೆರೆ ತಾಲೂಕಿನ ಮಿರಸಾಬಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ವಿಶ್ವೇಶ್ವರಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸಾರ್ವಜನಿಕರಿಂದ ಮನವಿ

About The Author

Namma Challakere Local News
error: Content is protected !!