ರಾಜ್ಯ ಮಟ್ಟಕ್ಕೆ ಖೋಖೋ ಪಂಧ್ಯದಲ್ಲಿ ಆಯ್ಕೆಯಾದ ದೊಡ್ಡ ಉಳ್ಳಾರ್ತಿ ಸರಕಾರಿ ಶಾಲೆ ಕ್ರೀಡಾ ಪಟುಗಳು
ಚಳ್ಳಕೆರೆ ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಬಿಇಒ ಕೆ.ಎಸ್.ಸುರೇಶ್ ಚಾಲನೆ ನೀಡಿ ಮಾತನಾಡಿದ ಅವರು ಸೋಲು ಗೆಲವುವನ್ನು ಕ್ರೀಡಾ ಪಟುಗಳು ಸಮಾನವಾಗಿ ಸ್ವಿಕರಿಸಬೇಕು, ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೆ ಕ್ರೀಡೆ ಸಹಕಾರಿ ಆಗಲಿದೆ ಎಂದರು.
ಮಕ್ಕಳಿಗೆ ಮೊದಲನೇ ದಿನವಾಗಿ, ಖೋ-ಖೋ ಮತ್ತು ಕಬಡ್ಡಿ ಆಟಕ್ಕೆ ಜಿಲ್ಲೆಯ 6 ತಾಲೂಕುಗಳಿಂದ 40 ತಂಡಗಳನ್ನು ಆಹ್ವಾನ ಮಾಡಲಾಗಿದೆ. ವಿಜೇತರಾಗುವ ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಯಾವುದೇ ಒತ್ತಡ ಮಾಡದಂತೆ ವಿಶಾಲ ಮನೋಭಾವದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ಮಾಡಬೇಕು. ಗೆಲುವಿಗಾಗಿ ಬಹುಮಾನಕ್ಕಾಗಿ ಕ್ರೀಡೆಯನ್ನು ಸೀಮಿತಗೊಳಿಸದೆ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಎಲ್ಲರ ಸಹಕಾರ ಇರಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕ ಶಿವಮೂರ್ತಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ವ್ಯವಸ್ಥಿತವಾಗಿ ಸೌಕರ್ಯ ಕಲ್ಪಿಸಲಾಗಿದೆ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕೆಲಸ ಆಗಬೇಕು. ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಶಾಲೆ ಮತ್ತು ಜಿಲ್ಲೆಯ ಕೀರ್ತಿ ಬೆಳೆಸುವ ಸಂಕಲ್ಪ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳಿದರು.
ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮಾರುತೇಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಮಹಾಲಿಂಗಪ್ಪ, ಶ್ರೀನಿವಾಸ್, ಪ್ರಾಣೇಶ್ ಮತ್ತಿತರರು ಇದ್ದರು.

ಇನ್ನೂ ಜಿಲ್ಲಾ ಮಟ್ಟದ ಖೋಖೋ ಪಂಧ್ಯಾವಳಿಯಲ್ಲಿ ದೊಡ್ಡ ಉಳ್ಳಾರ್ತಿ ಸರ್ಕಾರಿ ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಖೋಖೋ ಪಂಧ್ಯದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಶಾಲೆಗೆ ಹಾಗೂ ಗ್ರಾಮದ ಕೀರ್ತಿ ಪಾಥಕೆ ಏರಿಸಿದ್ದಾರೆ. ಇದರಿಂದ ಗ್ರಾಮದ ಸಾರ್ವಜನಿಕರಿಂದ ಕ್ರೀಡಾ ಪಟುಗಳಿಗೆ ಸ್ವಾಗತ ನೀಡಿ ಅಭಿನಂಧಿಸಿದ್ದಾರೆ.
ಇದೇ ಸಂಧರ್ಭದಲ್ಲಿ ದೈಹಿಕ ಶಿಕ್ಷಕಎಸ್.ಶ್ರೀರಾಮನಾಯಕ, ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕ ರಾಜಗೋಪಾಲ, ಪ್ರಭು, ಉಮಾ, ಸವಿತ, ಮಂಜುವಾಣಿ, ವಿಜಯಮ್ಮ, ಷಹಿರಾಬಾನು, ತಿಪ್ಪಮ್ಮ, ಎಸ್‌ಡಿಎಮ್‌ಸಿ ಅಧ್ಯಕ್ಷ ಎಸ್.ಗೀತಾ, ಗೌರಮ್ಮ, ಗೌರಿಶಂಕರ್, ಸಣ್ಣ ತಿಮಣ್ಣ, ಸಮಾದಪ್ಪ, ಉಮೇಶ್, ವೆಂಕಟೇಶ್, ಪಾಲಯ್ಯ ಇತರರು ಸಂತಸ ವಕ್ತಪಡಿಸಿದ್ದಾರೆ.

ಪೋಟೋ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿಯ ಸರಕಾರಿ ಶಾಲೆಯ ಕ್ರೀಡಾ ಪಟುಗಳು ಖೋಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

About The Author

Namma Challakere Local News
error: Content is protected !!