ರೆಬೀಸ್ ರೋಗಕ್ಕೆ ತಪಾಸಣೆ ಮುಖ್ಯ : ಎಂ.ರವೀಶ್
ಚಳ್ಳಕೆರೆ : ಮನುಷ್ಯ ಪ್ರಾಣಿಪ್ರಿಯ ಆದ್ದರಿಂದ ಮೊದಲು ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ಮೊದಲು ಡಾಕ್ಟರ್ ಬಳಿ ತಪಾಸಣೆ ಮಾಡಿಸುವುದು ಒಳ್ಳೆಯದು ಎಂದು ಕಾಲೇಜಿನ ಪ್ರಾಚಾರ್ಯರಾದ ಎಂ.ರವೀಶ್ ಹೇಳಿದ್ದಾರೆ.
ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಳೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಹಯೋಗದಲ್ಲಿ ರಾಬೀಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತ್ಯಕ್ಷ ಕಂಡ ರಾಬಿಟ್ ನಾಯಿಗಳ ಪರಿಣಾಮವನ್ನು ಅವರು ತಿಳಿಸಿದರು.
ಇನ್ನೂ ತಾಲೂಕು ಆರೋಗ್ಯ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಸಾಕು ಪ್ರಾಣಿಗಳಿಂದ ರಾಬಿಸ್ ಹರಡುವ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತ್ ರಾಜ್ ಮಾತನಾಡಿ, ಸಾಕು ಪ್ರಾಣಿಗಳನ್ನು ಅದರಲ್ಲೂ ನಾಯಿಗಳನ್ನು ಸಾಕುವ ಮೊದಲು ಅವುಗಳಿಗೆ ಲಸಿಕೆ ಹಾಕಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಈದೇ ಸಂಧರ್ಭದಲ್ಲಿ ಇತಿಹಾಸ ಉಪನ್ಯಾಸಕ ಚಂದ್ರಶೇಖರ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಶಾಂತಕುಮಾರಿ ಬಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸಂಜಯ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪೋಟೋ ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಳೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಹಯೋಗದಲ್ಲಿ ರಾಬೀಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಂ.ರವೀಶ್ ಮಾತನಾಡಿದರು.