ಎ.ಬಿ.ವಿ.ಪಿ. ಸಂಘಟನೆಯವರು ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡಿದ್ದು ಸರಿಯಲ್ಲ ಎನ್‌ಎಸ್‌ಯುಐ ಆರೋಪ

ಚಳ್ಳಕೆರೆ : ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಪಡೆದುಕೊಳ್ಳಲು ಯಾವ ರೀತಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕೆಂದು ವಿವರಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಪ್ಯಾರಿಸ್ ನೆಲ್ಪಡ್ ರವರು ರಾಜಾಕೀಯ ಭಾಷಣ ಮಾಡಿದ್ದಾರೆ ಎಂದು ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ತಾಲೂಕು ಯುವ ಕಾಂಗ್ರೇಶ್ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ
ಅವರು ನಗರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ಗೆ ಮನವಿ ನೀಡಿ ಮಾತನಾಡಿದರು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಸಮಸ್ಯೆಗಳಿದ್ದರೆ ಎನ್.ಎಸ್.ಯು.ಐ. ತಂಡ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ಧರಿರುತ್ತಾರೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅದನ್ನು ಬಗೆಹರಿಸಿಕೊಡುವ ಕರ್ತವ ಎನ್.ಎಸ್.ಯು.ಐ.ರವರದ್ದಾಗಿರುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿ ಪರ ಸಂಘಟನೆಗಳದ್ದಾಗಿರುತ್ತದೆ ಹಾಗೂ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷಾತೀಥವಾಗಿ ಭಾರತದ ಐಕ್ಯತೆಗಾಗಿ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದ್ದು, ರಾಹುಲ್‌ಗಾಂಧಿಯವರು ದಾರಿಯುದ್ದಕ್ಕೂ ರೈತರನ್ನು ಮತ್ತು ಕಾರ್ಮಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಎಲ್ಲಾ ವರ್ಗದ ಜನರ ಮಧ್ಯೆ ಸಂಪಾದ ನಡೆಸಿಕೊಂಡು ಬರುತ್ತಿದ್ದಾರೆ. ಇದರನುಸಾರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಹೋದಾಗ ಪಕ್ಷಾತೀಥವಾಗಿ ಭಾರತ್ ಜೋಡೋ ಪಾದಯಾತ್ರೆಗೆ ಭಾಗವಹಿಸಲು ಮನವಿ ಮಾಡಿಕೊಂಡರು ಎಂದು ಹೇಳಿದರು.

ಯಾವುದೇ ರಾಜಕೀಯ ಪ್ರೇರಿತ ವಿಚಾರಗಳನ್ನು ವಿದ್ಯಾರ್ಥಿಗಳ ಬಳಿ ಚರ್ಚಿಸಿರುವುದಿಲ್ಲ. ಈ ವಿಚಾರವನ್ನು ರಾಜಕೀಯ ಪ್ರೇರಿತ ಚರ್ಚೆ ನಡೆಸಿದ್ದಾರೆಂದು ತಪ್ಪಾಗಿ ತಿರುಚಿ ಹಾಕಿದ ಎ.ಬಿ.ವಿ.ಪಿ. ಸಂಘಟನೆಯವರು ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡಿದ್ದು ಪ್ರತಿಭಟನೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಕಂಡು ಬಂದಿದ್ದು ಖಂಡನೀಯ, ವಿದ್ಯಾರ್ಥಿ ಪರ ಸಂಘಟನೆಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಧ್ವನಿ ಎತ್ತುವುದು ಸಂವಿಧಾನಿಕ ಹಕ್ಕು ಆಗಿರುತ್ತದೆ ಎಂದರು.
ಹೆಚ್.ಪಿ.ಪಿ.ಸಿ. ಪಡೆದು ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಮುಗಿದು ಸಂಜೆ 4:30ಘಂಟೆಗೆ ವಿದ್ಯಾರ್ಥಿಗಳು ಕೊಠಡಿಯಿಂದ ಕಾಲೇಜಿನ ಆವರಣದಲ್ಲಿ ಬಂದಾಗ ಎನ್.ಎಸ್.ಯು.ಐ. ತಂಡ ಸಮಸ್ಯೆಗಳನ್ನು ಆಲಿಸಿದರು.
ಇದಕ್ಕೆ ಕಾಲೇಜಿನ ಆಡಳಿತಾಧಿಕಾರಿಯಾಗಲೀ, ಪ್ರಾಂಶುಪಾಲರಾಗಲೀ ಸಂಬAಧವಿರುವುದಿಲ್ಲ ಮತ್ತು ಅವರ ಗಮನಕ್ಕೂ ಸಹ ಬಂದಿರುವುದಿಲ್ಲ, ಎ.ಬಿ.ವಿ.ಪಿ. ಸಂಘಟನೆಯು ಸಹ ವಿದ್ಯಾರ್ಥಿಗಳ ಪರ ಸಂಘಟನೆ, ಅದೇ ರೀತಿ ಎನ್.ಎಸ್.ಯು.ಐ. ಸಹ ವಿದ್ಯಾರ್ಥಿಗಳ ಪರ ಸಂಘಟನೆಯಾಗಿದ್ದು, ಎ.ಬಿ.ವಿ.ಪಿ.ಯವರು ಸಹ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುತ್ತಾರೆ.
ಅದೇ ರೀತಿ ಎನ್.ಎಸ್.ಯು.ಐ. ತಂಡವು ಸಹ ಕಾಲೇಜಿಗೆ ಭೇಟಿ ನೀಡಿದ್ದು, ಅದನ್ನು ತಪ್ಪಾಗಿ ಅವಲೋಕಿಸಿ ಎ.ಬಿ.ವಿ.ಪಿ. ಸಂಘಟನೆಯು ಕಾಲೇಜಿನ ವಿರುದ್ಧ ಪ್ರತಿಭಟಿಸಿರುವುದು ಖಂಡನಿಯ ಎಂದು ಆರೋಪಿಸಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ನಾಗರಾಜ್, ಚೌಳೂರು ಪ್ರಕಾಶ್, ವಿರೇಶ್, ಓಬಳೇಶ್, ಕರಿಕೆರೆ ರಾಜಪ್ಪ, ನರಹರಿ ರಂಗಸ್ವಾಮಿ, ಸಿಬಿ.ಶಿವರಾಜ್, ದರ್ಶನ್, ಆನಂದ, ಎನ್‌ಎಸ್ ಯು ಐ ಪದಾಧಿಕಾರಿಗಳು ನವಾಜ್, ರಂಜಿತ್ ನಾಗರಾಜ್, ರಾಠೋಡ್, ಪ್ರಭು, ಅಕ್ಬರ್, ಇತರರು ಪಾಲ್ಗೊಂಡಿದ್ದರು.
ಪೋಟೋ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ಗೆ ಭಾರತ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟ ದಿಂದ ಮನವಿ ಸಲ್ಲಿಸಿದರು.

Namma Challakere Local News
error: Content is protected !!