ನಲ್ಪಡ್ ವಿರುದ್ದ ಬಿಜೆಪಿ ಆಕ್ರೊಶ ; ಕಾಲೇಜಿನಲ್ಲಿ ರಾಜಾಕೀಯ ಭಾಷಣ!! ಪ್ರಾಶುಂಪಾಲರ ಅಮನಾತಿಗೆ ತಹಶೀಲ್ದಾರ್‌ಗೆ ಮನವಿ

ಚಳ್ಳಕೆರೆ : ಕಾಲೇಜಿನಲ್ಲಿ ಪದವಿ ಸೆಮಿಸ್ಟರ್‌ಗಳ ಪರೀಕ್ಷೆಗಳು ನೆಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಸೆ.26 ರಂದು ಕಾಂಗ್ರೇಸ್ ರಾಜ್ಯ ಯುವ ಘಟಕದ ಅಧ್ಯಕ್ಷರು ಹಾಗೂ ಕಾಂಗ್ರೇಸ್ ಮುಖಂಡರಿಗೆ ಕಾಲೇಜಿನ ಪ್ರಾಂಶುಪಾಲರು ಕಾಂಗ್ರೇಸ್ ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಕಾಲೇಜಿನ ಆವರಣದಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಟ್ಟು ರಾಜಕೀಯ ಭಾಷಣವನ್ನು ಮಾಡಿಸಿರುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿಧರ್ ಆರೋಪ ಮಾಡಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ಗೆ ಮನವಿ ನೀಡಿ ಕಾಲೇಜಿನ ಪ್ರಾಶುಂಪಾಲರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ, ವಿಶ್ವ ವಿದ್ಯಾಲಯಗಳ ನಿಯಮಗಳ ಅನುಸಾರ ಯಾವುದೇ ರಾಜಕೀಯ ಪಕ್ಷಗಳ ರಾಜಕೀಯ ಸಭೆ ಸಮಾರಂಭಗಳನ್ನು ಕಾಲೇಜಿನ ಆವರಣದಲ್ಲಿ ಕೊಠಡಿಗಳಲ್ಲಿ ಮಾಡುವಂತಿಲ್ಲ ಎಂಬ ನಿಯಮವನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಕ್ಕೆ ಕಾಲೇಜಿನಲ್ಲಿ ಈ ರೀತಿಯ ಅಕಾಶವನ್ನು ಮಾಡಿಕೊಟ್ಟಿರುವುದು ಕಾಲೇಜಿನ ಪ್ರಾಂಶುಪಾಲರ ಬೇಜಾವಾಬ್ದಾರಿಯುತ ನಡೆ ಮತ್ತು ಈ ರೀತಿಯಲ್ಲಿ ಒಂದು ಪಕ್ಷದ ಪರವಯಿಸುವುದು ಅವರ ಸ್ಥಾನದ ಘನತಗೆ ದಕ್ಕೆ ತಂದಿರುತ್ತಾರೆ.

ಈ ರೀತಿಯ ಘಟನೆ ಸಂಭವಿಸಲು ಸಹಕಾರ ನೀಡಿದ ಹಾಗೂ ಸರ್ಕಾರಿ ಕಾಳೇಜನ್ನು ರಾಜಕೀಯ ಗೊಳಿಸಿರುವ ಪ್ರಾಂಶುಪಾಲರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೋರುತ್ತಾ. ಇಲ್ಲವಾದಲ್ಲಿ ಮುಂದಿನ ದಿನ ಜಿಲ್ಲಾದ್ಯಾಂತೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈದೇ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪಾಲಯ್ಯ, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಜ್ಯೋತಿ ಪ್ರಕಾಶ್, ಮರಿಸ್ವಾಮಿ, ನಾಗಭೂಷಣ್, ಚಿದಂನದ, ನಾಗರಾಜ್ ದೊರೆ, ನವೀನ್, ಪಾಲನೇತ್ರ, ಇಂದ್ರೀಶ್, ಕೃಷ್ಣೆಗೌಡ್ರು, ವೀರೇಶ್, ಈಶ್ವರ್ ನಾಯಕ, ಜೆಕೆ.ತಿಪ್ಪೆಶ್ ಇತರರು ಪಾಲ್ಗೊಂಡಿದ್ದರು.
ಪೋಟೋ ಚಳ್ಳಕೆರೆ ನಗರದ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲರ ಮೇಲೆ ಶುಸ್ತು ಕ್ರಮ ಜರುಗಿಸುವಂತೆ ತಹಶೀಲ್ದಾರ್‌ಗೆ ಮನವಿ ನೀಡಿದರು.

About The Author

Namma Challakere Local News
error: Content is protected !!