ಕುಲ ಕಸುಬಿನ ಜೋತೆಗೆ ಮಕ್ಕಳ ವ್ಯಾಸಂಗಕ್ಕೆ ಆಧ್ಯತೆ ನೀಡಿ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಯಾವುದೇ ಸಮಾಜವನ್ನು ಗೌರವಿಸುವ ಮೂಲಕ ಸಮಾಜದ ಹಿರಿಯನ್ನು ಹಾಗೂ ಸಾಧಕರನ್ನು ನೆನೆಯುವ ಮೂಲಕ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ವಿಶ್ವಮರ್ಕ ಸಮುದಾಯಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು, ಸಮುದಾಯದ ಎಲ್ಲಾ ಭಾಂಧವರು ಸೇರಿ ಅರ್ಥಗರ್ಭಿತವಾಗಿ ಜಯಂತಿಯನ್ನು ಆಚರಿಸಿರುವುದು ಸಂತಸ ತಂದಿದೆ ಆದೇ ರೀತಿಯಲ್ಲಿ ಮಕ್ಕಳನ್ನು ಕೂಡ ಉನ್ನತ ಮಟ್ಟದ ವ್ಯಾಸಂಗ ಕೊಡಿಸವ ಮೂಲಕ ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ವಿಶ್ವಕರ್ಮ ಸಮುದಾಯದ ತಾಯಿ ಸಮಾಜವನ್ನು ಮೊದಲು ನಾವು ಗೌರವಹಿಸಬೇಕು ಇದು ಸಣ್ಣ ಸಮುದಾಯವಾದರೂ ಜಗತ್ತಿಗೆ ತನ್ನ ಕಸೂತಿ ಮೂಲಕ ಬೆಳಕು ಚೆಲ್ಲಿದೆ, ಇಡೀ ಪ್ರಪಂಚದಲ್ಲಿ ಸುಮಾರು ದೇವರಿಗೆ ತನ್ನ ರಕ್ಷಣೆಯ ವಸ್ತುಗಳನ್ನು ನೀಡಿದ ಮಹಾನ್ ಕಾಯಕ ಸಮಾಜ ವಿರ್ಶವಕರ್ಮ ಸಮಾಜ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಮಾತನಾಡಿ, ದೇವಾನು ದೇವತೆಗಳನ್ನು ನಿರ್ಮಾಣ ಮಾಡಿದ ನಿರ್ಮಾಮೃತರು ಎಂದರೆ ವಿಶ್ವಕರ್ಮರು, ಈಡೀ ಜಗತ್ತಿನಲ್ಲಿ ದೇವರಿಗೆ ಪರಿಕರಗಳನ್ನು ಮಾಡಿದಂತ ವಿಶ್ವಕರ್ಮ ಸೃಷ್ಠಿಗೆ ಜಗತ್ತಿನಲ್ಲಿ ಸರಿಸಾಟಿ ಯಾರು ಇಲ್ಲ, ಇಂದು ಈ ಸಮಾಜವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಬಲ ಪಡಿಸುವ ಅನಿವಾರ್ಯತೆ ಇದೆ. ಇಂದಿಗೂ ನಗರದಲ್ಲಿ ಶೇಕಡ 80 ರಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಾರೆ ಆದ್ದರಿಂದ ಸರಕಾರಿಂದ ಭೂಮಿ ಮಂಜೂರು ಮಾಡಬೇಕಾದ ಅನಿವಾರ್ಯವಿದೆ ಎಂದರು.
ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಮಾತನಾಡಿ, ಕೌಶಲ್ಯ ಅಧಾರಿತ ಕೆಲಸ ಈ ಸಮಾಜಕ್ಕೆ ಅನಿವಾರ್ಯತೆ, ಮುಂದಕ್ಕೂ ಈ ಸಮಾಜದ ಮಕ್ಕಳನ್ನು ಉನ್ನತ ಶಿಕ್ಷಣದ ಜೊತೆಗೆ ಕೊಂಡುಯ್ಯವ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಪ್ರಮುಖ್ಯತೆ ನೀಡಬೇಕು, ಈ ಸಮಾಜದ ಜನರು ಅನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರುವ ವಿಶ್ವಕರ್ಮ ಸಮಾಜ ಶ್ರೇಷ್ಟ ಸಮಾಜ ಎಂದರು.
ಮುAಬವರುವ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಅಂತರಾಳದಲ್ಲಿ ಇರುವ ಒಂದು ಕೌಶಲ್ಯವನ್ನು ಹೊರ ಜಗತ್ತಿಗೆ ತೋರಿಸುವ ಮೂಲಕ ಸಮುದಾಯ ಶ್ರೇಯಸ್ಸಿಗೆ ಸಹಾಕಾರ ಅಗತ್ಯವಾಗಿದೆ, ವಿಶ್ವಕರ್ಮ ಈ ಸಮುದಾಯ ಅತೀಸೂಕ್ಷö್ಮವಾದ ಸಮುದಾಯ ಸಹನೆ, ತಾಳ್ಮೆ ಹಾಗೂ ಪ್ರಯತ್ನಗಳ ಮೂಲಕ ಈ ಜಗತ್ತಿನ ಮೊದಲ ಇಂಜಿನಿಯರ್ ಎಂದರೆ ಅದು ವಿಶ್ವಕರ್ಮ ಸಮಾಜ ಎಂದರು.
ಈದೇ ಸಂಧರ್ಭದಲ್ಲಿ ಜೆಡಿಎಸ್ ಮುಖಂಡ ಪಿ.ತಿಪ್ಪೆಸ್ವಾಮಿ, ಕವಿತಾ ಬೋರಯ್ಯ, ವೃತ್ತ ನೀರೀಕ್ಷ ಉಮೇಶ್ ಮಾತನಾಡಿದರು,
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸದಸ್ಯ ಮಲ್ಲಿಕಾರ್ಜುನಾ, ಕವಿತಾ, ಸುಜಾತಾ, ನಾಗಮಣಿ, ಸುಮಾ, ವಿ.ವೈ.ಪ್ರಮೋದ್, ನಿರ್ಮಾಲ, ಜೈತುನ್‌ಬಿ, ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸಿಇ ಪ್ರಸನ್ನ, ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಮಹಿಳಾ ಜಾಗೃತಿ ಸಂಘದ ಗೌರವಾಧ್ಯಕ್ಷೆ ಸರಸ್ವತಿ, ಬಿಸಿ ವೆಂಕಟೇಶ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ವರ್ತಕರಾದ ಬಿಜಿ.ಶಶಿಕುಮಾರ್, ನಾಗರಾಜ್‌ಚಾರ್, ಪದ್ಮನಾಭಚಾರ್, ಲಕ್ಷö್ಮಣಚಾರ್, ನಾಗರಾಜ್‌ಚಾರ್, ರಾಮಚಾರ್, ಲಕ್ಷಿö್ಮನಾರಾಯಾಣಚಾರ್, ಭರತ್ ರಂಜಿತ್, ಚೇತನ್, ಕಿರಣ್, ಉಮಾದೇವಿ, ಸವಿತ, ಕವಿತಾ, ಶಿವಮ್ಮ, ಲತಮ್ಮ, ರಾಜಮ್ಮ, ಮಂಜುನಾಥ್, ವಿಎ.ಶ್ರೀನಿವಾಸ್, ಆರ್.ಶ್ರೀನಿವಾಸ್, ಪಿಎಸ್‌ಐ ತಿಮ್ಮಣ್ಣ ಇತರರು ಪಾಲ್ಗೊಂಡಿದ್ದರು.
1ಪೊಟೋ ಚಳ್ಳಕೆರೆ ನಗರದ ವಿಶ್ವಮರ್ಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ ಸಮಾಜದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಿದರು.
2 ಪೊಟೋ ಚಳ್ಳಕೆರೆ ನಗರದ ವಿಶ್ವಮರ್ಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.