ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಸಾವಿರಾರು ಜನರು ಬಾಗಿ
ಚಳ್ಳಕೆರೆ : ವಿಶ್ವ ಹಿಂದೂ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು.
ಬೆಳ್ಳಿಗೆ 10 ಗಂಟೆಗೆ ಪ್ರಾರಂಭವಾದ ಬೃಹತ್ ಶೋಭಾಯಾತ್ರೆ ಮೆರವಣಿಗೆಗೆ ತಾಲೂಕಿನ ವಿವಿಧ ಊರುಗಳಿಂದ ಆಗಮಿಸಿದ ಯುವಕರ ಗುಂಪುಗಳು ಮೂರು ಡಿಜೆಗಳ ಸೌಂಡ್‌ಗೆ ಹುಚ್ಚೆದು ಕುಣಿದರು ಇನ್ನೂ ಮಹಿಳಾ ಮಹಿಳೆಯರು ಕೂಡ ಈಭಾರಿ ವಿಶೇಷವಾಗಿ ಡಿಜೆ ಸದ್ದಿಗೆ ಮೈ ಮರೆತು ಕುಣಿಯ ದೃಶ್ಯಗಳು ಎಲ್ಲೆಡೆ ಕಂಡು ಬಂದವು.
ಇನ್ನೂ ನಗರದ ವಾಲ್ಮಿಕಿ ವೃದ್ದದಿಂದ ಪ್ರಾರಂಭವಾದ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ವಿವಿಧ ಜನಪ್ರತಿನಿಧಿಗಳು, ಕಾಲೇಜ್ ಹುಡುಗರು, ಹುಡುಗಿರು ಕುಣಿಯುವುದು ಕಂಡು ಬಂದಿತು ಇನ್ನೂ ಸಾವಿರಾರು ನೋಡುಗರು ತಮ್ಮ ಕಣ್ ತುಂಬಿಸಿಕೊಳ್ಳುವ ಮೂಲಕ ಜನರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಪೋಟೋ ಕ್ಲಿಕಿಸಿಕೊಂಡರು.
ಇನ್ನೂ ವಾಲ್ಮೀಕಿ ವೃತ್ತದಿಂದ ಪ್ರಾರಂಭವಾದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಅಧ್ಯಕ್ಷ ಬಾಳೆಕಾಯಿ ರಾಮದಾಸ್, ಬಿಜೆಪಿ ಮುಖಂಡರಾರ ಸಂಜೀವ ಮೂರ್ತಿ, ಜಯಪಾಲಯ್ಯ, ಸೋಮಶೇಖರ್ ಮಂಡಿಮಠ್, ಕೃಷ್ಣೇಗೌಡ, ಮಾತೃಶ್ರೀ ಮಂಜುನಾಥ್, ಹಾಗೂ ವಿವಿಧ ಪದಾಧಿಕಾರಿಗಳು, ಸಾರ್ವಜನಿಕರು, ಮಹಿಳಾ ಮಣಿಯರು ಈ ಭಾರಿ ವಿಶೇಷವಾಗಿ ಮೆರಣಿಗೆಗೆ ಆಗಮಿಸಿರುವುದು ಕಳೆ ಕಟ್ಟಿತ್ತು.
ಸೂಕ್ತ ಬಂದ್‌ಬಸ್ತ್ :
ಯಾವುದೇ ಅಹಿತಕರ ಘಟನೆ ಜರುಗಂತೆ ಪೊಲೀಸ್ ಇಲಾಖೆ ಸೂಕ್ತ ಬಂದ್ ಬಸ್ತ್ ನೀಡುವ ಮೂಲಕ ಡಿಜೆಗಳ ಸುತ್ತ ರಕ್ಷಣೆ ಹೊದಗಿಸಿದ್ದರು, 300 ಕಾನ್‌ಸ್ಟೆಬಲ್, ನಾಲ್ಕು ಡಿಎಆರ್ ತುಕಡಿ, 29 ಪಿಎಸ್‌ಐ , 4 ಸಿಪಿಐ, ಒಂದು ಡಿವೈಎಸ್‌ಪಿ ಈಗೇ ಹಿಂದೂ ಮಹಾಗಣಪತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿವೈಎಸ್‌ಪಿ ರಮೇಶ್ ಕುಮಾರ್ ಹೇಳಿದ್ದಾರೆ.
ಕೇಸರಿಮಯ ಮಾಡಿದ ಬಜರಂಗಳ :
ನಗರದ ತುಂಬೆಲ್ಲಾ ಬಜರಂಗದಳ, ಬಿಜೆಪಿ ಮುಖಂಡರು ಕೇಸರಿ ಬಾವುಟಗಳ ಬಂಟಿಗ್, ಪ್ಲೆಕ್ಸ್ ಬ್ಯಾನರ್ ಕಟ್ಟಿವುದರ ಮೂಲಕ ಈಡೀ ನಗರ ಕೇಸರಿಮಯ ಮಾಡಿದ್ದರು. ಇನ್ನೂ ಎಲ್ಲೂ ನೋಡಿದರು ರಾರಧಿಸುವ ಕೆಸರಿ ಬಾವುಟಗಳನ್ನು ಹಿಡಿದು ಹುಚ್ಚೆದು ಕುಣಿಯುವ ಯುವಕರ ಕೈಯಲ್ಲಿ ದೊಡ್ಡ ಬಾವುಟಗಳು ರಾರಾಜಿಸಿದವು.
ಶಾಸಕ ಜಿ.ಚ್.ತಿಪ್ಪಾರೆಡ್ಡಿ ಬಾಗಿ :
ಬೃಹತ್ ಶೋಭಾಯಾತ್ರೆ ಮೆರಣಿಗೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬಾಗಿಯಾಗಿ ಹಿಂದೂ ಮಹಾಗಣಪತಿ ಆರ್ಶಿವಾದ ಪಡೆದು ಬೃಹತ್ ಶೋಭಯಾತ್ರೆಯಲ್ಲಿ ಕ್ಷಣಕಾಲ ಬಾಗಿಯಾಗಿದ್ದರು,