ಅವಳಿ ಕ್ಷೇತ್ರದ ಶಾಸಕರ ಸೂಚನೆಯಂತೆ ಕಂದಾಯ ಇಲಾಖೆಯಿಂದ ಸಂತ್ರಸ್ಥರ ರಕ್ಷಣೆ

ರಾಮಾಂಜನೇಯ ಕೆ.ಚನ್ನಗಾನಹಳ್ಳಿ

ಚಳ್ಳಕೆರೆ : ಕಳೆದ ಹತ್ತು ದಿನಗಳಿಂದ ನಿರಂತರ ವರುಣರಾಯನಿಗೆ ರಾಜ್ಯ ತಲ್ಲಣಗೊಂಡಿದೆ.
ಇನ್ನೂ ಬಯಲು ಸೀಮೆಯಲ್ಲಿ ಕೂಡ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ರೈತನ ಮೊಗದಲ್ಲಿ ಸಂತಸ ಮನೆ ಮಾಡಿದೆ, ಆದರೆ ನದಿ ಪಾತ್ರದಲ್ಲಿ ಇರುವ ಹಲವಾರು ಕುಟುಂಬಗಳ ಜೀವನ ಮಾತ್ರ ಚಿಂತಜನಕವಾಗಿದೆ.
ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಜನತೆ ಒಂದು ಕಾಲದಲ್ಲಿ ಬರತ್ಸೋವ ಆಚರಿಸುವ ಕಾಲವದು ಆದರೆ ಇಂದು ಈದೇ ಬಯಲು ಸೀಮೆಯಲ್ಲಿ ಜಲತ್ಸೋವದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ

ವರುಣರಾಯನಿಗೆ ಅವಳಿ ಕ್ಷೇತ್ರದ ಜನರು ತತ್ತರ :

ಮೊಳಕಾಲ್ಮುರು ಹಾಗೂ ಚಳ್ಳಕೆರೆ ಅವಳಿ ಕ್ಷೇತ್ರಗಳು ಇಲ್ಲಿ ವರುಷದ ಉದ್ದಕ್ಕೂ ಬರಗಾಲ ಹಾಸಿ ಹೊದ್ದಿರುತ್ತದೆ ಆದರೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ವೇದಾವತಿ ಒಡಲು ಭರ್ತಿಯಾಗಿ ನದಿ ಇಕ್ಕೆಲಗಳ ಗ್ರಾಮಗಳ ಮೂಲಕ ಬೋರ್ಗರೆತ ನದಿನೀರು ಹಾದು ಹೊಗುತ್ತದೆ,
ಸುಮಾರು 30 ಕಿ.ಮೀ. ವೇದಾವತಿ ನದಿ ಪಾತ್ರದ ದಂಡೆಯಲ್ಲಿರುವ ಹಲವು ಗ್ರಾಮಗಳು ಹಾಗೂ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಪೂರ್ಣವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಪ್ರಕೃತಿ ವಿಕೋಪಕ್ಕೆ ಸಂಪರ್ಕ ರಸ್ತೆಗಳು ಕಟ್ :
ಅದರಂತೆ ಮೊಳಕಾಲ್ಮೂರು ಕ್ಷೇತ್ರವ್ಯಾಪ್ತಿಯ ಒಬ್ಬಳಾಪುರ ಮತ್ತು ದೊಡ್ಡುಳ್ಳಾರ್ತಿ, ಬೂದಿಹಳ್ಳಿ, ಗುಡಿಯಹಳ್ಳಿ, ಮೈಲನಹಳ್ಳಿ, ರೇಣುಕಾಪುರ, ರಸ್ತೆ, ಸಂಪೂರ್ಣ ಸ್ಥಗಿತವಾಗಿದೆ, ಆದೇ ರೀತಿಯಲ್ಲಿ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯ ಬೆಳೆಗೆರೆ, ನಗರಂಗೆರೆ, ಚನ್ನಮ್ಮನಾಗತಿಹಳ್ಳಿ, ಸೋಮಗುದ್ದು ಈಗೇ ಇನ್ನೂ ಅನೇಕ ಗ್ರಾಮಗಳ ಸಂಪರ್ಕ ರಸ್ತೆಗಳು ನೀರಿನಿಂದ ಮುಳುಗಿ ಸಂಪರ್ಕ ಕಡಿತವಾಗಿದೆ.

ಅವಳಿ ಕೇತ್ರದ ಶಾಸಕರ ಇಚ್ಚಾಶಕ್ತಿ :
ಇನ್ನೂ ಜನಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇಂತಹ ಪ್ರಕೃತಿ ಸಂಧರ್ಭದಲ್ಲಿ ಸಂತ್ರಸ್ತರ ಒಟ್ಟಿಗೆ ಇರುವ ಅನಿವಾರ್ಯತೆಯೊಂದಿಗೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು, ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೂಚನೆಯಂತೆ ತಾಲೂಕು ಮಟ್ಟದ ಕಂದಾಯ ಇಲಾಖೆ ಅಧೀನ ಅಧಿಕಾರಿಗಳು ಒಳಗೊಂಡ ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದ ಅಂಧಿಕಾರಿಗಳ ತಂಡ, ತಡ ರಾತ್ರಿವರೆಗೂ ಸಂತ್ರಸ್ತರೊಟ್ಟಿಗೆ ಇದ್ದು ಹಾಲಗೊಂಡನಹಳ್ಳಿ ಸುಮಾರು ಕುಟುಂಗಳ ಸಂತ್ರಸ್ತರಿಗೆ ಆರೈಕೆ ಕೇಂದ್ರಗಳನ್ನು ತೆರೆದು ಪುನರ್ವಸತಿ ಕಲ್ಪಿಸುವ ಮೂಲಕ ನೆರವಾಗಿದ್ದಾರೆ.

ಸಾರಿಗೆ ಸಚಿವ ಬಿ.ಶ್ರೀರಾಮುಲು,

ಶಾಸಕ ಟಿ.ರಘುಮೂರ್ತಿ
ಕಂದಾಯ ಇಲಾಖೆಯಿಂದ ಸೂಚನೆ :
ಆದೇ ರೀತಿಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯಂದಿರಲು ಈಗಾಗಲೇ ಕಂದಾಯ ಇಲಾಖೆಯಿಂದ ನೀಚನೆ ನೀಡಲಾಗಿದೆ, ವೇದಾವತಿ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ಪ್ರವಾಹ ಕಡಿಮೆಯಾಗುವವರೆಗೂ ನದಿ ದಂಡೆಯಲ್ಲಿ ಯಾರು ಇರಕೂಡದು, ಹಾಗೂ ರಸ್ತೆಗಳ ಮೇಲೆ ನೀರು ಹರಿಯುವುದರಿಂದ ರಸ್ತೆಗಳು ಸಂಪೂರ್ಣವಾಗಿ ಮುಳುಗಿವೆ ಆದ್ದರಿಂದ ವಾಹನ ಸಾವರರಿಗೆ ಹಾಗೂ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ನೀಡಲಾಗಿದೆ.


ಪೊಲೀಸರಿಂದ ಸರ್ಪಗವಾಲು :
ರೇಣುಕಾಪುರ ಮತ್ತು ಬೂದಿಹಳ್ಳಿ ಗ್ರಾಮಗಳಿಗೆ ಸೇರಿದಂತೆ ಇನ್ನೂ ಹಲವು ಸಂಪರ್ಕ ರಸ್ತೆಗಳ ಮೇಲೆ ಮೂರು ಅಡಿ ನೀರು ಹರಿಯುತ್ತಿರುವುದರಿಂದ ಯಾವುದೇ ದ್ವಿಚಕ್ರ ವಾಹನ, ಹಾಗೂ ನಾಲ್ಕು ಚಕ್ರಗಳ ವಾಹನವನ್ನು ಓಡಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಇನ್ನೂ ವಾಹನ ಸಾವರರು ದುಸ್ಸ್ ಸಾಹಸಕ್ಕೆ ಪ್ರಯತ್ನ ಪಡುವ ವಾಹನ ಚಾಲಕರಿಗೆ ಪೊಲೀಸರಿಂದ ಸರ್ಪಗವಾಲು ಹಾಕಲಾಗಿದೆ


ಪ್ರಕೃತಿವಿಕೋಪದಿಂದ ಲೆಕ್ಕಕ್ಕೆ ಸಿಗದ ನಷ್ಟ :
ಅತೀವೃಷ್ಠಿಯಿಂದ ಬಾದೀತರಾಗಿರುವಂತ ರೈತರ ತೋಟಗಾರಿಕೆ ಹಾಗೂ ಕೃಷಿಬೆಳೆಗಳು ನಷ್ಟವಾಗಿರುವ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿಯೊAದಿಗೆ ಗ್ರಾಮದಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ ಇನ್ನೂ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದ ಮಾರಕ್ಕ ಎಂಬುವವರ ಗುಡಿಸಲು ವಾಸದಮನೆ ಸಂಪೂರ್ಣವಾಗಿ ಬಿದ್ದು ಆಶ್ರಯ ಇಲ್ಲವಾಗಿದೆ ಇನ್ನೂ ಪರಿಹಾರಕ್ಕಾಗಿ ಸರಕಾರಕ್ಕೆ ಪತ್ರ ರವಾನಿಸಲು ದಿಕ್ಕು ತೋಚದೆ ನಿರಾಶ್ರಿತಳಾಗಿದ್ದಾಳೆ, ಸಂಬAಧಿಸಿದವರು ಪರಿಹಾರ ನೀಡುವರೋ ಕಾದು ನೋಡಬೇಕಿದೆ,ಕೆಲವು ಮನೆಗಳಿಗೆ ನೀರು ನುಗಿದ್ದು ಹಲವಾರು ಮನೆಗಳು ಜಕಂಗೊAಡಿವೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾಳಾಗಿವೆ ಸಾರ್ವಜನಿಕ ರಸ್ತೆಗಳು ಹಾಳಾಗಿವೆ ಇವೆಲ್ಲವುಗಳ ನಿಖರ ಮಾಹಿತಿಯನ್ನು ಕಂದಾಯ ಇಲಾಖೆ, ಕೃಷಿ ಇಲಾಕೆ ಜಂಟಿ ಸಹಯೋಗದೊಂದಿಗೆ ಸಮೀಕ್ಷೆ ಮಾಡಲಾಗುತ್ತದೆ. ಇನ್ನೂ ನದಿ ಪಾತ್ರದ ಜನರು ಪ್ರವಾಹ ಕಡಿಮೆಯಾಗುವವÀರೆಗೆ ನದಿಯನ್ನು ಆಶ್ರಯಿಸಿಕೊಂಡ ಸಾರ್ವಜನಿಕ ಸ್ವತ್ತುಗಳು ನಷ್ಟವಾಗಿರುವ ಬಗ್ಗೆ ಸಾರ್ವಜನಿಕ ರಸ್ತೆಗಳು ಶಾಲಾಕಟ್ಟಡಗಳು, ಬೇರೆ ಬೇರೆ ಇಲಾಖೆಗಳಿಂದ ಅಂದಾಜು ನಷ್ಟದ ಪಟ್ಟಿ ತಯಾರಿಸಲಾಗುವುದು ಎಂಬ ಮಾಹಿತಿ ಹೊರ ಬಿದ್ದಿದೆ.


ಈ ಸಂದರ್ಭದಲ್ಲಿ ಬೂದಿಹಳ್ಳಿ ಮತ್ತು ರೇಣುಕಾಪರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಬೂದಿಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯ ರಾಜು ತಿಮ್ಮರಾಜು, ಯಜಮಾನಪ್ಪರಾಜು, ರಾಜೇಶ್ವ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಹರೀಶ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!