ಶಾಲಾ ಬಾಲಕಿಯರ ಮೇಲೆ ಲೈಂಗಿಕ..! ಮುರುಘಾ ಶ್ರೀಗಳ ಬಂಧನಕ್ಕೆ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಹೆಗ್ಗೇರಿ ಕೆ.ಮಂಜುನಾಥ್ ಕಿಡಿ


ಚಳ್ಳಕೆರೆ: ಮಠದ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ ನಡೆಸಿದ ಆರೋಪ ಹೊತ್ತಿರುವ ಚಿತ್ರದುರ್ಗ ಮುರುಘಾ ಶರಣರ ಮೇಲೆ ಪ್ರಕರಣ ದಾಖಲಾಗಿದ್ದು ಕೂಡಲೇ ಮುರುಘಾ ಶರಣರನ್ನು ಬಂಧನ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಸಂಚಾಲಕರು ತಹಶೀಲ್ದಾರ್ ಗ್ರೇಡ್ 2- ಸಂಧ್ಯಾ ರವರಿಗೆ ಮನವಿ ಸಲ್ಲಿಸಿದ್ದಾರೆ.


ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಹೆಗ್ಗೇರಿ ಕೆ.ಮಂಜುನಾಥ್ ಮಾತನಾಡಿ ಮಠದ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮುರುಘಾ ಶರಣರ ಮೇಲೆ ಪ್ರಕರಣ ದಾಖಲಾಗಿದೆ. ಈ ಕೂಡಲೇ ಮುರುಘಾ ಶರಣರನ್ನು ಬಂಧನ ಮಾಡಬೇಕೆಂದು ಒತ್ತಾಯ ಮಾಡಿದರು.


ಸ್ವಾಮೀಜಿಯವರು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು


ಈ ಸಂದರ್ಭದಲ್ಲಿ ಸಚಾಲಕರಾದ ದ್ಯಾವರನಹಳ್ಳಿ ಸುರೇಶ್, ಸುಮಿತ್ರ ಪಾಲ್, ಟಿ ಮಂಜುನಾಥ ಸೂರನಹಳ್ಳಿ, ನಲಗೇತನಹಟ್ಟಿ ಕೆ.ಟಿ.ಮುತ್ತುರಾಜ್, ಗೋರ್ಲಕಟ್ಟೆ ಇಂದ್ರ, ಡಿ ಎನ್‌ಬಿ.ಮಾರೇಶ್ ಸೇರಿದಂತೆ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!