ಶ್ರೀಕೃಷ್ಣ ಜಯಂತಿ ಅಂಗವಾಗಿ ಬೈಕ್ ಜಾಥ : ಯಾದವ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್‌ರಿಂದ ಚಾಲನೆ
ಚಳ್ಳಕೆರೆ ನಗರದಲ್ಲಿ ಶ್ರೀಕೃಷ್ಣ ಜಯಂತಿ ಪೂರ್ವಭಾವಿಯಾಗಿ ಹಮ್ಮಿಕೊಂಡ ಬೈಕ್ ಜಾಥಕ್ಕೆ ಯಾದವ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಚಾಲನೆ ನೀಡಿದರು.
ನಗರದ ಕಾಟಪ್ಪನಹಟ್ಟಿ ರಂಗನಾಥಸ್ವಾಮಿ ದೇವಸ್ಥಾನದ ಮುಂದೆ ಬೈಕ್ ಜಾಥಕ್ಕೆ ಚಾಲನೆ ನೀಡಿದರು.
ಯಾದವ ಸಮುದಾಯ ಶ್ರೀಕೃಷ್ಣ ನೌಕರರ ಸಂಘ, ತಾಲೂಕು ಗೊಲ್ಲ ಮಹಿಳಾ ಮಂಡಳಿಯಿAದ ಹಮ್ಮಿಕೊಂಡ ಈ ಜಾಥಕ್ಕೆ ತಾಲೂಕಿನ ಸಮಸ್ತ ಜನರು ಪಾಲ್ಗೊಂಡರು.
ಬೈಕ್ ಜಾಥವು ನಗರದ ಕಾಟಪನಹಟ್ಟಿಯಿಂದ ಪ್ರಾರಂಭವಾಗಿ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ಹಾಗೂ ವಾಲ್ಮೀಕಿ ವೃತ್ತ, ಜಗಜೀವನ್ ವೃತ್ತದಿಂದ ಮತ್ತೆ ಎಸ್‌ಆರ್ ರಸ್ತೆ ಹಾಗೂ ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತದ ಮೂಲಕ ಪ್ರಮುಖ ರಾಜಬೀದಿಗಳಲ್ಲಿ ಬೈಕ್ ಜಾಥದ ಮೂಲಕ ಹರಿವು ಮೂಡಿಸುವ ಕಾರ್ಯ ಮಾಡಿದರು.
ಇನ್ನೂ ಬೈಕ್ ಜಾಥಕ್ಕೆ ಚಾಲನೆ ನೀಡಿದ ಯಾದವ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಾಳೆ ನಡೆಯುವ ಕಾರ್ಯಕ್ರಮಕ್ಕೆ ತಾಲೂಕಿನ ಯಾದವ ಸಮುದಾಯದ ಬಂಧುಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಮುದಾಯದ ಸರ್ವ ಜನತೆಯು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವರು ಕರೆ ನೀಡಿದರು.
ಅಲಂಕಾರಗೊAಡ ಶ್ರೀಕೃಷ್ಣನ ಮೆರವಣಿಗೆ ಭಾವಚಿತ್ರ ಕಾಟಪ್ಪನಹಟ್ಟಿಯಿಂದ ಹೊರಟು ಮುಖ್ಯ ರಸ್ತೆಯ ಮೂಲಕ ವೀರಶೈವ ಕಲ್ಯಾಣ ಮಂಟಪಕ್ಕೆ ಬಂದು ತಲುಪುತ್ತದೆ. ನಂತರ ವೀರಶೈವ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಸಭೆ ಕಾರ್ಯಕ್ರಮಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಎಂಎಲ್‌ಸಿ.ನಾಗರಾಜ್‌ಯಾದವ್, ಮಾಜಿ ಎಂಎಲ್.ಸಿ.ಜಯಮ್ಮ ಬಾಲರಾಜ್, ಹಾಗೂ ಸಮುದಾಯದ ಹಿರಿಯ ಮುಖಂಡರು ಜನಪ್ರತಿನಿಧಿಗಳು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇರಲಿದ್ದು ಈ ಕಾರ್ಯಕ್ರಮಕ್ಕೆ ಎಲ್ಲಾ ಹಟ್ಡಿಯ ಮುಖ್ಯಸ್ಥರು, ಸಮುದಾಯದ ಜನಪ್ರತಿನಿಧಿಗಳು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗುವಂತೆ ರವಿಕುಮಾರ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಜಿಕೆ.ವೀರಣ್ಣ, ವಕೀಲರಾದ ಶಶಿಧರ್, ವೀರೇಶ್, ಹಟ್ಟಿ ರುದ್ರಪ್ಪ ಇಂಡಸ್‌ವ್ಯಾಲಿ ಚಿಕ್ಕಣ್ಣ, ಕಾಂತರಾಜ್, ಬಾನುವೀರೇಶ್ ಮಹಾಲಿಂಗಪ್ಪ, ರಾಜು, ನಾಗರಾಜ್, ಮಂಜುನಾಥ, ಶ್ರೀನಿವಾಸ್, ಅಜ್ಜಣ್ಣ, ಮಂಜಣ್ಣ, ಚಂದ್ರಪ್ಪ ಬೂದಿಹಳ್ಳಿ ರಾಜು, ಶ್ರೀಧರ್, ವೀರೇಶ್ ಸೇರಿದಂತೆ ಸಮುದಾಯದ ಮುಖಂಡರು ಯುವಕರು ಇದ್ದರು