ನಾಯಕನಹಟ್ಟಿ : ಪುಟಾಣಿಗಳ ಕೈ ಸೇರಿದ ರಾಷ್ಟçಧ್ವಜ
ಚಳ್ಳಕೆರೆ : 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಅಂಗನವಾಡಿ ಪುಟಾಣಿಗಳ ಕೈಯಲ್ಲಿ ರಾಷ್ಟ್ರಧ್ವಜ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನಿರನ್ನು ಸ್ಮರಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ನಾಗರತ್ನಮ್ಮ ಹೇಳಿದ್ದಾರೆ.
ತಾಲೂಕಿನ ನಾಯಕನಹಟ್ಟಿ ಪಟ್ಟಣದ ಎಫ್, ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಕಾರ್ಯಕರ್ತೆ ಪ್ರಿಯದರ್ಶಿನಿ ಶಾಲೆಯ ಆವರಣದಲ್ಲಿ ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದಾರೆ.
ಈ ವೇಳೆ ಆಶಾ ಕಾರ್ಯಕರ್ತೆ ದ್ರಾಕ್ಷಾಯಿಣಿ ಮಾತನಾಡಿ ನಮ್ಮ ದೇಶ ನಮ್ಮ ಹೆಮ್ಮೆ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದ ಮಹಾತ್ಮ ಗಾಂಧೀಜಿ, ಜವಾಲಾಲ್ ನೆಹರು, ಸುಭಾಷ್‌ಚಂದ್ರ ಬೋಸ್, ಡಾ ಬಿಆರ್.ಅಂಬೇಡ್ಕರ್, ವೀರವನತೆ, ಕಿತ್ತೂರು ರಾಣಿ ಚೆನ್ನಮ್ಮ, ನೆನೆದು ಬೋಲೋ ಭಾರತ್ ಮಾತಾ ಕಿ ಎಂದು ಘೋಷಣೆ ಕೂಗುತ್ತಾ ರಾಷ್ಟ್ರಧ್ವಜ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತೆ ಪ್ರಿಯದರ್ಶಿನಿ, ಶಾಲೆಯ ಶಿಕ್ಷಕಿ ವನಜಾಕ್ಷಿ, ಅಂಗನವಾಡಿ ಸಹಾಯಕಿ ಕೌಸರ್‌ಭಾನು, ಸೇರಿದಂತೆ ಪುಟಾಣಿಗಳು ಉಪಸ್ಥಿತರಿದ್ದರು