ಚಳ್ಳಕೆರೆ : ಕೆರೆ ನೀರು ಸಂರಕ್ಷಣೆಗೆ ಗ್ರಾಮಸ್ಥರ ಮನವಿ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಪರೀಶಿಲನೆ
ಚಳ್ಳಕೆರೆ : ಸತತ ಮಳೆಯಿಂದಾಗಿ ದೊಡ್ಡೆರಿಕೆರೆ ತುಂಬಿದ್ದು ಕೆರೆ ಕೋಡಿ ಬೀಳುವ ಹಂತ ತಲುಪಿದೆ ಈ ಸಮಯದಲ್ಲಿ ಕೆರೆ ಏರಿಯಲ್ಲಿ ಎರಡು ಕಡೆ ನೀರಿನ ಜೋಪಿದೆ ಎನ್ನುವ ಗ್ರಾಮಸ್ಥರು ಮನವಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ತಹಶೀಲ್ದರ್ ಎನ್.ರಘುಮೂರ್ತಿ ಬೇಟಿ ನೀಡಿ ಕೆರೆ ಏರಿ ಪರೀಶಿಲನೆ ನಡೆಸಿದ್ದಾರೆ.
ತಾಲೂಕಿನ ಉಪ್ಪಾರಹಟ್ಡಿ ಸಮೀಪ ಇರುವ ದೊಡ್ಡೇರಿ ಕೆರೆಗೆ ಬೇಟಿ ನೀಡಿ ನೀರು ಜೋಪುತ್ತಿರುವ ಸ್ಥಳವನ್ನು ಪರಿಶೀಲನೆ ನಡೆಸಿದಾಗ ಕೆರೆ ಏರಿಯಲ್ಲಿ ಎರಡು ಕಡೆನೀರು ಸಣ್ಣದಾಗಿ ನೀರು ಹೋರ ಬರುತ್ತಿರುವುದು ಕಾಣಿಸಿದೆ, ನಂತರ ಪರಶೀಲನೆ ನಡೆಸಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡಿ
ಈಗೆ ನೀರು ಜಾಸ್ತಿ ಬಂದರೆ ಕೆರೆ ಏರಿಗೆ ಸಮಸ್ಯೆ ಹಾಗಬಹುದು ಇದನ್ನು ಈಗಿನಿಂದಲೆ ಸರಿಪಡಿಸಬೇಕು, ನೀರು ಜೋಪುತ್ತಿರುವ ಸ್ಥಳದಲ್ಲಿ ಮರಳಿನ ಚೀಲಗಳನ್ನು ಹಾಕಬೇಕು, ಕೆರೆ ಏರಿಗೆ ಯಾವುದೇ ಅಪಾಯವಾಗದಂತೆ ಎಚ್ಚರ ವಹಿಸಬೇಕು, ಕೆರೆಯಲ್ಲಿ ಶೇಖರಣೆಯಾದ ನೀರು ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ರವಿ, ದೊಡ್ಡೇರಿ ಗ್ರಾಮಪಂಚಾಯಿತಿ ಸದಸ್ಯ ಶ್ರೀಶೈಲಪ್ಪ , ಗ್ರಾಮಲೆಕ್ಕಾಧಿಕಾರಿ ಅಜಯ್ ಮತ್ತು ಶಿವಮೂರ್ತಿ ಇದ್ದರು.