ಚಳ್ಳಕೆರೆ : ಕಳೆದ ಐದು ವರ್ಷಗಳ ಚುನಾಯಿತ ಜನಪ್ರತಿನಿದಿಗಳಾಗಿ ಜನರ ಸೇವೆಯಲ್ಲಿ ತೊಡಗಿದ್ದ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಅವಧಿಯಲ್ಲಿ ಉತ್ತಮವಾದ ಕಾರ್ಯಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಹನುಮಂತಪ್ಪ ಹೇಳಿದರು.
ಅವರು ತಾಲ್ಲೂಕಿನ
ಕೋನಸಾಗರ ಗ್ರಾಮ ಪಂಚಾಯತಿಯಲ್ಲಿ ಐದು ವರ್ಷಗಳ ಚುನಾಯಿತ ಸದಸ್ಯರ ಅವಧಿ ಮುಕ್ತಾಯ ವಾದ ಹಿನ್ನೆಲೆಯಲ್ಲಿ ಸರ್ವ ಸದಸ್ಯರಿಗೆ ಬಿಳ್ಕೊಡುಗೆ ನೀಡಿ ಮಾತನಾಡಿದರು,
ಇದೇ ಸಂಧರ್ಭದಲ್ಲಿ ಇಒ ಹೆಚ್ ಹನುಮಂತಪ್ಪ,
ಗ್ಯಾರಂಟಿ ಸಮಿತಿ ಅಧ್ಯಕ್ಷ ಎನ್.ವೈ ಪಿ.ಚೇತನ, ಕೆಡಿಪಿ ಸದಸ್ಯ ರೇಷ್ಮೆ ವಿರೇಶ್, ಗ್ರಾಪಂ.ಅಧ್ಯಕ್ಷೆ ಜಿ.ರೇಣುಕಮ್ಮ, ಉಪಾಧ್ಯಕ್ಷೆ ಶಿವಮ್ಮ, ಪಿಡಿಓ ಆರ್.ಪಿ.ವೇದಮೂರ್ತಿ, ಸದಸ್ಯರಾದ
ರತ್ಮಮ್ಮ, ರಾಮಮೂರ್ತಿ, ಪಾಲಮ್ಮ, ಮಲ್ಲಿಕಾರ್ಜುನ, ಸಣ್ಣ ಪಾಲಯ್ಯ, ರೇವಣ್ಣ, ತಿಪ್ಪೇಸ್ವಾಮಿ, ಸುದ್ದಮ್ಮ, ಮಹಾಂತಮ್ಮ, ಬಸಣ್ಣ, ಸುಧಾ ಗುರುಸ್ವಾಮಿ, ಅಣ್ಣಪ್ಪ ಸ್ವಾಮಿ, ಇತರ ಸದಸ್ಯರು, ಗ್ರಾಮದ
ಮುಖಂಡರಾದ ಜಿ.ಗೋವಿಂದ ನಾಯಕ, ಜಗದೀಶ್, ಇತರರು ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು.

