ಚಳ್ಳಕೆರೆ : ಅಮೃತ ನಡಿಗೆ ಪಾದಯಾತ್ರೆಯು ಇಂದಿಗೆ ಆರನೇ ದಿನಕ್ಕೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಭವ್ಯ ಭಾರತದ 75ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಮೃತ ನಡಿಗೆ ಪಾದಯಾತ್ರೆಯು ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಇಂದು ರಾಮಜೋಗಿಹಳ್ಳಿಯಿಂದ ಪ್ರಾರಂಭವಾಗಿರುವ ಪಾದಯಾತ್ರೆಯು ಸಾವಿರಾರು ಕಾರ್ಯಕರ್ತರೊಂದಿಗೆ ಪೇಲಾರಹಟ್ಟಿಯತ್ತ ಸಾಗಿತು,
ಹೊಸಚೂರಿ ಪಾಪಯ್ಯನಹಟ್ಟಿ, ಹಳೇಚೂರಿಪಾಪಯ್ಯನಹಟ್ಟಿ, ಹಾಯಲ್ಕ್ ಮೂಲಕ ಸಾಗಿ ಬೆಳಗಟ್ಟಕ್ಕೆ ತಲುಪಲಿದೆ
ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ, ಬೆಂಬಲಿಗರ ಹಾಗೂ ಗ್ರಾಮಸ್ಥರ ಬೆಂಬಲದೊAದಿಗೆ ಪಾದಯಾತ್ರೆಯು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಇನ್ನೂ ಶಾಸಕ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಸ್ವಾತಂತ್ರೊö್ಯÃತ್ಸವ ಅಂಗವಾಗಿ ಹಮ್ಮಿಕೊಂಡ ಅಮೃತ ನಡೆಗೆಯ ಪಾದಯಾತ್ರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸುಮಾರು 101 ಕಿಲೋ ಗುರಿಯ ಮೂಲಕ ಜನ ಸಾಗರದ ಮೂಲಕ ಸಾಗುತ್ತಿದೆ, ವಿವಿಧ ಗ್ರಾಮಗಳಲ್ಲಿ ಅದ್ದೂರಿ ಸ್ವಾಗತದ ಮೂಲಕ ಜನರು ಪಾದಯಾತ್ರೆ ಬರಮಾಡಿಕೊಳ್ಳುತ್ತಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ , ಸದಸ್ಯ ರಮೇಶ್ ಗೌಡ, ನನ್ನಿವಾಳ ಬಸವರಾಜ್, ಇತರ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.