ಚಳ್ಳಕೆರೆ : ಅರ್ಥಗರ್ಭಿತವಾಗಿ ಶ್ರೀಕೃಷ್ಣ ಜಯಂತಿ ಆಚರಣೆ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಸರಕಾರದಿಂದ ನಡೆಯುವ ಶ್ರೀಕೃಷ್ಣ ಜಯಂತಿಯಲ್ಲಿ ಗೊಲ್ಲ ಸಮುದಾಯದ ಸರ್ವ ಸದಸ್ಯರು ಪಾಲ್ಗೊಳ್ಳುವ ಮೂಲಕ ಜಯಂತಿಯನ್ನು ಅರ್ಥಗರ್ಭಿತವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಯಾದವ ಸಮುದಾಯದಿಂದ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಳ್ಳಬೇಕು, ಇದೇ ಆಗಸ್ಟ್ 25ರಂದು ನಡೆಯಲಿರುವ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಭಾ ಕಾರ್ಯಕ್ರಮಕ್ಕೆ ಆಗಮಿಸಿಬೇಕು
ತಾಲೂಕಿನ ಯಾದವ ಸಮಾಜದ ಗಣ್ಯವ್ಯಕ್ತಿಗಳನ್ನು ಸನ್ಮಾನಿಸುವ ಮೂಲಕ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರಿಸು ಮೂಲಕ ಜಯಂತಿಯ ಆಶಯ ಈಡೇರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಅಬಕಾರಿ ನಿರೀಕ್ಷಕ ಕೃಷ್ಣಸ್ವಾಮಿ, ಶ್ರೀಕೃಷ್ಣ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಸಮುದಾಯದ ಹಿರಿಯ ಮುಖಂಡ ಬಿ.ವಿ.ಸಿರಿಯಣ್ಣ, ಜಿ.ಕೆ.ವೀರಣ್ಣ, ಸಮುದಾಯದ ಹಿರಿಯ ಮುಖಂಡರಾದ ಹಟ್ಟಿರುದ್ರಪ್ಪ, ನಗರಸಭೆ ನಾಮ ನಿರ್ದೇಶನ ಸದಸ್ಯ ವಿರೇಶ, ಮಹಲಿಂಗಪ್ಪ, ಮಂಜುಸಿದ್ದಾಪುರ, ವಿರೇಶ, ಸಿದ್ದಾಪುರ, ಹುಲಿಕುಂಟೆ ಕಾಂತರಾಜ್, ರಂಗಣ್ಣ, ನಾಗಲಿಂಗಮ್ಮ ಸಿದ್ದಣ್ಣ, ನಾಗರಾಜ್, ಸುರೇಶ, ಲಿಂಗರಾಜ್. ಸುರೇಶಬೆಳಗೆರೆ, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.