ಚಳ್ಳಕೆರೆ :
ದಿನ ನಿತ್ಯ ಹಾಲಿನ ಉತ್ಪನ್ನಗಳನ್ನು ವಾಹನಗಳಲ್ಲಿ ಸಾಗಾಣಿಕೆ ಮಾಡುತಿರುವ ಕಾರ್ಮಿಕರು, ವಾಹನ ಚಾಲಕರು ಯೋಗಕ್ಷೇಮ ಪ್ರಮುಖವಾಗಿದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.

ಅವರು ಚಳ್ಳಕೆರೆ ಮೊಳಕಾಲ್ಮುರು. ಹಿರಿಯೂರು ಭಾಗದ ನಂದಿನಿ ಹಾಲಿನ ಉಪ ವಿಭಾಗ ಚಳ್ಳಕೆರೆಯ ಕಚೇರಿಯಲ್ಲಿ ಹಾಲು. ಮೊಸರು ಹಾಲಿನ ಉತ್ಪನ್ನಗಳು ಗುತ್ತಿಗೆ ಆಧಾರಿತ ವಾಹನಗಳ ಸಾಗಾಣಿಕೆ ಮಾಡುವ ವಾಹನದ(ಕ್ಯಾನು.ಹಾಲಿನ ಟ್ಯಾಂಕ್) ಮಾಲೀಕರು ಹಾಗೂ ಚಾಲಕರಿಗೆ ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿರವರು ಹೊಸ ವರ್ಷದ ಕ್ಯಾಲೆಂಡರ್ ವಿತರಿಸಿ ಮಾತನಾಡಿದರು,

ಶಿಮುಲ್ ನಿಂದ ಅವರಿಗೆ ನೂತನ ವರ್ಷದ ಕ್ಯಾಲೆಂಡರ್ ನೀಡಿ ಅವರೊಂದಿಗೆ ಚರ್ಚಿಸಿ ಕುಂದು ಕೊರತೆಗಳ ಬಗ್ಗೆ ಆಲಿಸಿದರು.

ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಜಿಲ್ಲಾ ವ್ಯವಸ್ಥಾಪಕರಾದ ಹನುಮಂತಪ್ಪ, ಕಚೇರಿ ಉಪ ವಿಭಾಗಾಧಿಕಾರಿಗಳಾದ ಎಂ. ಪುಟ್ಟರಾಜು, ತಾಲೂಕು ಮಾರ್ಕೆಟಿಂಗ್ ಇರ್ಫಾನ್, ಶ್ರೀಧರ್ ಮಾರ್ಗ ವಿಸ್ತಾರಣ ಅಧಿಕಾರಿಗಳಾದ ನಯಾಜ್ ಬೇಗ್ , ಕೃಷ್ಣಕುಮಾರ್ ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!