ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20 ಸೀಟಿಗೆ 20 ಸೀಟು ಗೆಲ್ಲುತ್ತೇವೆ ಪ್ರಭಾಕರ ಮ್ಯಾಸನಾಯಕ ವಿಶ್ವಾಸ

ಮೊಳಕಾಲ್ಮೂರು ಕ್ಷೇತ್ರದ ದೇವಸಮುದ್ರ ಗ್ರಾಮದಲ್ಲಿ ಸಂಘಟನಾ ಪರ್ವ ನಿಮಿತ್ತ ಕಾರ್ಯಕರ್ತರ ಸಭೆಯಲ್ಲಿ ಪ್ರಭಾಕರ ಮ್ಯಾಸನಾಯಕ ಅವರು ಭಾಗವಹಿಸಿ ಮಾತನಾಡಿದರು.

ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20 ಸೀಟುಗಳಿದ್ದು ಇಪ್ಪತ್ತನ್ನೂ ಗೆಲ್ಲಬೇಕು ಈ ನಿಟ್ಟಿನಲ್ಲಿ ಕಾರ್ಯಕರ್ತರು ಅದಮ್ಯ ವಿಶ್ವಾಸದೊಂದಿಗೆ ಚುನಾವಣೆಯಲ್ಲಿ ಭಾಗವಹಿಸಿ ಸಂಘಟನಾತ್ಮಕವಾಗಿ ಗಟ್ಟಿ ಪ್ರಯತ್ನ ಮಾಡಬೇಕೆಂದು ಅವರು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ, ಉಪಾಧ್ಯಕ್ಷರಾದ ಮೂರ್ತಿ, ಹಿರಿಯರಾದ ಜಿಂಕಲ್ ಬಸವರಾಜು, ಪರಮೇಶ್ವರಪ್ಪ ಗುಂಡಪ್ಪ ರವಿಸ್ವಾಮಿ ಅನಿಲ್ ಕುಮಾರ್ ಬಲರಾಮ ತಿಪ್ಪೇಸ್ವಾಮಿ ಪಾಲಯ್ಯ ಪ್ರಧಾನ ಕಾರ್ಯದರ್ಶಿಗಳಾದ ಹರೀಶ ಪ್ರಭಾಕರ ಮುಖಂಡರಾದ ತಿಮ್ಮಾರೆಡ್ಡಿ, ಹನುಮಂತು ಶಿವಪ್ಪ ಚಂದ್ರಣ್ಣ ಬಸಣ್ಣ ಹುಲ್ಲಪ್ಪ ಸೋಮು ಮಲ್ಲಿಕಣ್ಣ ಬಸವರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!